ದಾಂಡೇಲಿ: 14 ವಿದ್ಯಾರ್ಥಿನಿಯರ ಕೈಗಳ ಮೇಲೆ ಬ್ಲೇಡಿನಿಂದ ಹೆಚ್ಚಿದ ಗುರುತುಗಳು ಪತ್ತೆ

ಬೆಂಗಳೂರು, ಸೆಪ್ಟಂಬರ್ 21: ದಾಂಡೇಲಿಯ ಖಾಸಗಿ ಶಾಲೆಯ ಸುಮಾರು 14 ವಿದ್ಯಾರ್ಥಿನಿಯರ ಕೈಲಿ ಕಂಡು ಬಂದ ಗುರುತುಗಳು ಈ ಭಾಗದ ಪೋಷಕರಲ್ಲಿ ಆತಂಕ ಹುಟ್ಟು ಹಾಕಿದೆ. ಖಾಸಗಿ ಶಾಲೆಯ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳ ಕೈಯಲ್ಲಿ ಗುರುತುಗಳ ಕಂಡು ಬಂದಿವೆ.

ದಾಂಡೇಲಿ ಪ್ರದೇಶದಲ್ಲಿನ ಖಾಸಗಿ ಶಾಲೆಯ ಸುಮಾರು 14 ವಿದ್ಯಾರ್ಥಿಗಳ ಮಣಿಕಟ್ಟು ಮತ್ತು ಕೈಗಳಲ್ಲಿ ಬ್ಲೇಡಿನಿಂದ ಹೆಚ್ಚಿದ ಗುರುತುಗಳು ಪತ್ತೆಯಾಗಿವೆ. ಇದನ್ನು ಗಮನಿಸಿದರೆ ಆ ವಿದ್ಯಾರ್ಥಿನಿಯರಿಗೆ ಸ್ವಯಂ ಹಾನಿ ಮಾಡಿಕೊಂಡಿದ್ದಾರೆ ಎಂದನಿಸುತ್ತಿದೆ. ಇವರನ್ನು 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ ಎಂದು ವರದಿ ಆಗಿದೆ.

14-girl-students-indulge-in-self-harm-cut-wrists

ಶಾಲಾ ಹೆಣ್ಣು ಮಕ್ಕಳ ಕೈಯಲ್ಲಿ ಬ್ಲೇಡಿನಿಂದ ಹಾನಿಯಾದ ಗುರುತುಗಳ ಪತ್ತೆಯಾಗಿದ್ದ ಬಗ್ಗೆ ಶಾಲಾ ಅಧಿಕಾರಿಗಳ ಗಮನಕ್ಕೆ ತರಲಾಯಿತಾದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ. ವಿದ್ಯಾರ್ಥಿಗಳು ಏಕೆ ಹೀಗೆ ಮಾಡಿಕೊಂಡಿದ್ದಾರೆ ಇಲ್ಲ ಈ ಗುರುತುಗಳು ಆಗಲು ಕಾರಣವೇನು ಎಂದು ಕೇಳಿದರೆ ಅದಕ್ಕೆ ಪೋಸಕರಾಗಲಿ ಇಲ್ಲವೇ ಶಾಲಾಧಿಕಾರಿಗಳ ಬಳಿ ಉತ್ತರ ಸಿಗಲಿಲ್ಲ. ಇದು ಇನ್ನಷ್ಟು ಕುತೂಹಲ ಮತ್ತು ಅನುಮಾನಗಳಿಗೆ ಕಾರಣವಾಗಿದೆ.

ಸೆಂ.ಮೀ.ನಷ್ಟು ಗಾಯದ ಗುರುತುಗಳು

ವಿದ್ಯಾರ್ಥಿನಿಯರ ಕೈ ಮೇಲೆ ಇಂತಹ ಗುರುತುಗಳ ಪತ್ತೆ ಮಾಡಿ ಬೆನ್ನಲ್ಲೆ ಶಾಲಾ ಅಧಿಕಾರಿಗಳು ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಬಳಿಕ ಕಾರವಾರದ ಜಿಲ್ಲಾ ಸಾರ್ವಜನಿಕ ಸೂಚನಾ ಉಪನಿರ್ದೇಶಕ (DDPI) ಕಚೇರಿಗೆ ಮಾಹಿತಿ ರವಾನಿಸಿದರು.

ಈ 14 ಮಂದಿ ಹೆಣ್ಣು ಮಕ್ಕಳ ಗುಂಪಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಎಡಗೈ ನಲ್ಲಿ ಬ್ಲೇಡ್ ನಿಂದ ಹಾನಿಯಾದ ಗಾಯಗಳು ಇವೆ. ಅವರ ಮಣಿಕಟ್ಟಿನ ಮೇಲೆ ಕೆಲವು ಸೆಂಟಿ ಮೀಟರ್‌ಗಳಷ್ಟು ಉದ್ದ ಗಾಯಗಳಾಗಿವೆ. ಒಬ್ಬೊಬ್ಬ ವಿದ್ಯಾರ್ಥಿನಿಯ ಕೈ ಮೇಲೆ ಸುಮಾರು 14 ರಿಂದ 15 ಗಾಯಗಳಾಗಿವೆ. ಈ ಬ್ಲೇಡ್ (ರೇಜರ್)ಗಳನ್ನು ಸಾಮಾನ್ಯವಾಗಿ ಶೇವಿಂಗ್‌ಗೆ ಬಳಸುತ್ತಾರೆ.

ಸದ್ಯ ಅಷ್ಟು ಅಪ್ರಾಪ್ತ ವಿದ್ಯಾರ್ಥಿನಿಯರನ್ನು ದಾಂಡೇಲಿಯ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಸದ್ ಅವರ ಆರೋಗ್ಯ ದಲ್ಲಿ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದು ಬಂದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ವಿದ್ಯಾರ್ಥಿನಿಯರ ಪ್ರತಿಕ್ರಿಯೆ ಏನು?

ಘಟನೆ ಬಗ್ಗೆ ಶಾಲೆಯ ಸಿಬ್ಬಂದಿಯನ್ನು ಪ್ರಶ್ನಿಸಲಾಗಿದೆ. ವಿದ್ಯಾರ್ಥಿನಿಯರು ಒಬ್ಬರ ಹೇಳಿಕೆಗಳು ವಿಭಿನ್ನವಾಗಿವೆ. ಇಂತಹ ಸ್ವಯಂ ಹಾನಿ ಮಾಡಿಕೊಳ್ಳಲು ಪ್ರಚೋದಿಸಿದ್ದು ಯಾರು ಎಂಬುದರ ಕುರಿತು ಅರ್ಥಮಾಡಿಕೊಳ್ಳಲು ಮನೋವೈದ್ಯರ ಮಾರ್ಗದರ್ಶನ ತೆಗೆದುಕೊಳ್ಳುತ್ತೇವೆ ಎಂದು ಉತ್ತರ ಕನ್ನಡದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಾಹಿತಿ ನೀಡಿದ್ದಾರೆ.

ಹೆಣ್ಣುಮಕ್ಕಳ ಕೈಗೆ ಯಾಕೆ ಹೀಗಾಯಿತು? ಮಕ್ಕಳಾಗಲೀ ಈ ಬಗ್ಗೆ ಮಾತನಾಡುತ್ತಿಲ್ಲ, ಪೋಷಕರಾಗಲೀ ಬಹಿರಂಗವಾಗಿ ಏನನ್ನೂ ಹೇಳುತ್ತಿಲ್ಲ. ಐದರಿಂದ ಆರು ಮಕ್ಕಳನ್ನು ಅವರ ಪೋಷಕರು ಗದರಿಸಿದ್ದಾರೆ ಅದಕ್ಕಾಗಿಯೇ ಹೀಗೆ ಮಾಡಿಕೊಂಡಿದ್ದೇನೆ ಎಂದು ಹೇಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನನ್ನ ಸ್ನೇಹಿತ ನನ್ನೊಂದಿಗೆ ಮಾತನಾಡುತ್ತಿಲ್ಲ, ಅದಕ್ಕಾಗಿ ನಾನು ಹೀಗೆ ಮಾಡಿಕೊಂಡಿದ್ದೇನೆ ಎಂದಿದ್ದಾಳೆ.

ಈ ಘಟನೆಯ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳಲು ಮನೋವೈದ್ಯರ ತಂಡದ ನೆರವು ಪಡೆಯುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+