ಬೀದರ್‌ಗೆ ಆಗಮಿಸಲಿರುವ ರಾಹುಲ್‌ಗೆ ಪ್ರತಿಭಟನೆಯ ಎಚ್ಚರಿಕೆ
Recommended Video

ಬೀದರ್, ಆಗಸ್ಟ್ 11: ಇದೇ 13ರಂದು ಬೀದರ್‌ಗೆ ಆಗಮಿಸಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ದಲಿತ ಸಂಘಟನೆಗಳು ಪ್ರತಿಭಟನೆಯ ಎಚ್ಚರಿಕೆ ನೀಡಿವೆ.
ಆಗಸ್ಟ್ 13ರ ಒಳಗಾಗಿ ದಲಿತರೊಬ್ಬರನ್ನು ಸಿಎಂ ಮಾಡುವ ಭರವಸೆ ನೀಡದೇ ಇದ್ದರೆ ಆಗಸ್ಟ್ 13ರಂದು ಬೀದರ್‌ನಲ್ಲಿ ರಾಹುಲ್ ಗಾಂಧಿ ಭಾಷಣಕ್ಕೆ ಅಡ್ಡಿ ಮಾಡುವುದಾಗಿ ದಲಿತ ಸಂಘಟನೆಗಳು ಎಚ್ಚರಿಕೆ ನೀಡಿವೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ನವಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಅನಂತರಾಮಪ್ಪ ಅವರು, ಶೋಷಿತ ವರ್ಗಗಗಳ ಮತಗಳಿಂದ ಅಧಿಕಾರಕ್ಕೆ ಬರುವ ಕಾಂಗ್ರೆಸ್ ಪಕ್ಷ, ಸತತವಾಗಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನವನ್ನು ತಪ್ಪಿಸುತ್ತಲೇ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಲಿತರಲ್ಲಿ ಅರ್ಹ ನಾಯಕರಿದ್ದರೂ ಸಹ ಪದೇ ಪದೇ ಒಕ್ಕಲಿಕ, ಲಿಂಗಾಯತ ಮತ್ತು ಇನ್ನಿತರೆ ಸಮುದಾಯದವರಿಗೆ ಮಣೆ ಹಾಕಿ ದಲಿತ ನಾಯಕರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಆಗಸ್ಟ್ 3ರ ಮುನ್ನಾ ದಲಿತರನ್ನು ಸಿಎಂ ಮಾಡುವ ಭರವಸೆ ನೀಡದಿದ್ದಲ್ಲಿ ಬೀದರ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಹುಲ್ ಭಾಷಣ ಸಂದರ್ಭ ಒಂದು ಸಾವಿರ ದಲಿತ ಹೋರಾಟಗಾರರು ಕಪ್ಪು ಬಾವುಟ ಪ್ರದರ್ಶಿಸಿ ಭಾಷಣಕ್ಕೆ ಅಡ್ಡಿಮಾಡಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.












Click it and Unblock the Notifications