RCB ಫ್ಯಾನ್ ಬಡಿದು, ಕಾಲರ್ ಹಿಡಿದು ನೂಕಿದ ಡಿಕೆ ಶಿವಕುಮಾರ್: ವಿಡಿಯೋ ವೈರಲ್
ಬೆಂಗಳೂರು, ಜೂನ್ 05: ಬೆಂಗಳೂರು ಮಾತ್ರವಲ್ಲದೇ ಕರ್ನಾಟಕವನ್ನೇ ತಲ್ಲಣಗೊಳಿಸುವ ಘಟನೆ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಗರದಲ್ಲಿ ನಡೆದಿದೆ. ಇದೇ ವೇಳೆ ಮತ್ತೊಂದು ಘಟನೆ ನಡೆದಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವ್ಯಕ್ತಿಯೊಬ್ಬನಿಗೆ (RCB ಫ್ಯಾನ್) ಬಡಿದು ಕಾಲ್ ಹಿಡಿದು ನೂಕಿದ ಘಟನೆ ನಡೆದಿದೆ. ಇದು ಅಧಿಕಾರದ ದರ್ಪ, ಇಂತಹ ನಡೆ ಕಳವಳಕಾರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಜನರು ನೆನ್ನೆ (ಜೂನ್ 4) ರಂದು ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸೇರಿದ್ದರು. ಇದೇ ವೇಳೆ ಡಿ.ಕೆ ಶಿವಕುಮಾರ್ ಅವರ ದುರಹಂಕಾರ ಮತ್ತು ಆಘಾತಕಾರಿ ನಡೆಯನ್ನು ಪ್ರದರ್ಶಿಸಿದ್ದಾರೆ ಎಂದು @karnatakaportf ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.

ತಲೆಗೆ ಬಾರಿಸಿ ನೂಕಿದ ಡಿಸಿಎಂ ಇದು ಅಪಮಾನಕರ!
ಇದೊಂದು ಅವಮಾನಕರ ಮತ್ತು ಸ್ವೀಕಾರಾರ್ಹವಲ್ಲದ ನಡೆ ಪ್ರದರ್ಶಿಸಿರುವುದು ಖಂಡನೀಯ. ಆರ್‌ಸಿಬಿ ಆಟಗಾರರನ್ನು ಸನ್ಮಾನಿಸಲು ವಿಧಾನಸೌಧ ಮುಂಭಾಗದ ವೇದಿಕೆ ಹಾಕಲಾಗಿತ್ತು. ಲಕ್ಷಾಂತರ ಜನರು ನೆರೆದಿದ್ದರು. ಈ ವೇಳೆ ಅಕ್ಕಪಕ್ಕ ನಿಂತವರ ಪೈಕಿ ತಲೆಗೆ ಹೊಡೆದು, ಕಾಲರ್ ಹಿಡಿದು ನೂಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಧಿಕಾರದಲ್ಲಿರುವವರು ಸಾರ್ವಜನಿಕವಾಗಿ ವ್ಯಕ್ತಿಯೊಬ್ಬರ ಮೇಲೆ ಹೀಗೆ ಮಾಡುವುದು ಅಪಮಾನಕರ.
ಬಾಯಿ ಮಾತಿನಲ್ಲಿ ಹೇಳಿದ್ದರು ಆಗುತ್ತಿತ್ತು. ಅದನ್ನು ಬಿಟ್ಟು ಅಧಿಕಾರ ದುರುಪಯೋಗ ಮಾಡಿಕೊಳ್ಳಲಾಗಿದೆ. ಸಹ ನಾಗರಿಕರಿಗೆ ಅಗತ್ಯ ಸಭ್ಯತೆ ತೋರುವ, ಗೌರವಯುತವಾಗಿ ನಡೆದುಕೊಳ್ಳುವ ಪ್ರಜ್ಞೆ ಇಲ್ಲದನ್ನು ಇದು ಎತ್ತಿ ತೋರಿಸುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ.
ಸಾರ್ವಜನಿಕ ಜೀವನದಲ್ಲಿರುವವರು, ರಾಜ್ಯದ ಅತ್ಯುನ್ನತ ಹುದ್ದೆಗಳಲ್ಲಿರುವವರು, ಜನರಿಂದಲೇ ಚುನಾಯಿತ ಪ್ರತಿನಿಧಿಯಾದವರು ಹೀಗೆ ಮಾಡುವುದು ಎಷ್ಟು ಸರಿ. ಮನುಷ್ಯ ಧರ್ಮ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳ ಬಗ್ಗೆ ಗಂಭೀರ ಚಿಂತನೆ ಹುಟ್ಟುಹಾಕಿದೆ. ಇಂತಹ ನಾಯಕರು ರಾಜ್ಯಕ್ಕೆ ಅರ್ಹರೆ ಎಂಬಂತೆ ಪ್ರಶ್ನಿಸಲಾಗಿದೆ. ಕೆಲವು ಈ ಘಟನೆ ವಿರೋಧಿಸಿ ಕಾಮೆಂಟ್ ಮಾಡಿದ್ದಾರೆ.
Shocking Display of Arrogance by D.K. Shivakumar
— Karnataka Portfolio (@karnatakaportf) June 5, 2025
In an absolutely disgraceful and unacceptable act, Karnataka Deputy Chief Minister @DKShivakumar was caught on stage slapping a man on the back of his head, grabbing his collar, and pushing him aside all in full public view. 🤦🏻♂️… pic.twitter.com/4yBR821hFN
ಸರ್ವಾಧಿಕಾರಿ ಧೋರಣೆ ಸರಿಯಲ್ಲ
RCB 18 ವರ್ಷಗಳ ಬಳಿಕ ಕಪ್ ಗೆದ್ದುಕೊಂಡು ಬರುತ್ತಿದ್ದಂತೆ ತವರು ಬೆಂಗಳೂರಿನಲ್ಲಿ ಸಂಭ್ರಮಾಚರಣೆ, ವಿಜಯಯಾತ್ರೆ ಹಮ್ಮಿಕೊಳ್ಳಲಾಯಿತು. ಕೊನೆಗೆ ವಿಜಯಯಾತ್ರೆ ಕೈ ಬಿಟ್ಟು, ಆಟಗಾರರಿಗೆ ಸನ್ಮಾನ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಕ್ಕೆ ಅವಕಾಶ ಮಾಡಿಕೊಡಲಾಯಿತು. ಇದೆಲ್ಲವನ್ನು ಸ್ವತಃ ಡಿಕೆ ಶಿವಕುಮಾರ್ ಅವರು ಉಸ್ತುವಾರಿಗಳಂತೆ ಓಡಾಡಿ ನೋಡಿಕೊಂಡರು. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಆರ್‌ಸಿಬಿ ಟೀಂ ಆಟಗಾರರನ್ನು ಬರಮಾಡಿಕೊಂಡರು. ವಿಧಾನಸೌಧ ಮುಂಭಾಗದ ಕಾರ್ಯಕ್ರಮದಲ್ಲು ಪಾಲ್ಗೊಂಡರು. ಈ ವೇಳೆ ವೇದಿಕೆಗೆ ಡಿಕೆ ಶಿವಕುಮಾರ್ ಬರುವಾಗ ಈ ಘಟನೆ ನಡೆದಿದೆ. ಇದು ಸರ್ವಾಧಿಕಾರಿ ಧೋರಣೆ ಎಂದು ಜನರು ದೂರುತ್ತಿದ್ದಾರೆ.












Click it and Unblock the Notifications