ಸೊಸೆ ಕುಸುಮಾ ಬಗ್ಗೆ ರವಿ ತಾಯಿ ಗೌರಮ್ಮ ಹೇಳಿದ್ದೇನು?

Subscribe to Oneindia Kannada

ಬೆಂಗಳೂರು, ಮಾರ್ಚ್, 17: ಡಿಕೆ ರವಿ ತಾಯಿ ಬೆಂಗಳೂರಿನಲ್ಲಿ ಧರಣಿ ಕುಳಿತಿದ್ದಾರೆ. ಮಗನ ಸಾವಿಗೆ ನ್ಯಾಯ ಸಿಗಬೇಕು ಎಂದು ಕುಟುಂಬದವರೊಂದಿಗೆ ಸೇರಿ ಆಗ್ರಹ ಮಾಡುತ್ತಿದ್ದಾರೆ. ಆದರೆ ಡಿಕೆ ರವಿ ಪತ್ನಿ ಕುಸುಮಾ ಎಲ್ಲಿಯೂ ಕಾಣಿಸಿಕೊಂಡಿಲ್ಲ.

ಕಳೆದ ಮಾರ್ಚ್ ನಲ್ಲಿ ಡಿಕೆ ರವಿ ಸಾವನ್ನಪ್ಪಿದ ನಂತರ ಕುಸುಮಾ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಡಿಕೆ ರವಿ ತಾಯಿ ಗೌರಮ್ಮ ಅಂದರೆ ಕುಸುಮಾ ಅವರ ಅತ್ತೆ ಇದೀಗ ಮೌನ ಮುರಿದಿದ್ದಾರೆ.[ಗಾಂಧಿ ಪ್ರತಿಮೆ ಎದುರು ಕಣ್ಣೀರಿಟ್ಟ ಡಿಕೆ ರವಿ ತಾಯಿ ಗೌರಮ್ಮ]

ಚೆನ್ನಾಗಿ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದ ಸೊಸೆ ನಮ್ಮ ಜತೆ ಇಲ್ಲ. ಅವರು ಎಲ್ಲಿದ್ದಾರೆ ಎಂಬುದೇ ಗೊತ್ತಿಲ್ಲ ಎಂದು ಹೇಳಿದ್ದಾರೆ. ನನ್ನ ಮಗನ ಸಾವಿನ ನೋವು ಹನುಮಂತರಾಯಪ್ಪನಿಗೆ ಗೊತ್ತಿಲ್ಲ. ಈಗ ಅವರ ಜತೆ ಯಾವುದೇ ಸಂಬಂಧವಿಲ್ಲ ಅವರ ಮಗಳಿಗೆ ನನ್ನ ಮಗನ ಜೊತೆ ಮದುವೆ ಆಗಿದ್ದು ಅಷ್ಟೆ ಎಂದು ಹೇಳಿಕೆ ನೀಡಿದ್ದಾರೆ. ಕುಸುಮಾ ಬಗ್ಗೆ ಗೌರಮ್ಮ ಹೇಳಿದ್ದೇನು... ಮುಂದಿನ ಸ್ಲೈಡ್ ಗಳನ್ನು ಕ್ಲಿಕ್ಕಿಸಿ..

ಪ್ರತಿಭಟನೆಯ ಪೂರ್ಣ ಚಿತ್ರಣದ ವಿಡಿಯೋ ನೋಡಿ

ಮದುವೆಗೆ ಒಪ್ಪಿಕೊಂಡಿದ್ದು ಯಾಕೆ?

ಮದುವೆಗೆ ಒಪ್ಪಿಕೊಂಡಿದ್ದು ಯಾಕೆ?

ಮದುವೆಗೂ ಮುನ್ನವೇ ಕುಸುಮಾ ಬಳಿ ಕೇಳಿಕೊಂಡಿದ್ದೆ. ರವಿ ಅಂದರೆ ನನಗೆ ಇಷ್ಟ ಎಂದು ಹೇಳಿದ್ದಳು. ನನ್ನ ಮಗ ಕೈತಪ್ಪಿ ಹೋಗಬಾರದು ಎನ್ನುವ ಕಾರಣಕ್ಕೆ ನಾನು ಮದುವೆಗೆ ಒಪ್ಪಿಕೊಂಡಿದ್ದೆ ಎಂದು ಗೌರಮ್ಮ ಹೇಳಿದರು.

ಈಗ ಇಷ್ಟವಿಲ್ಲವೇ?

ಈಗ ಇಷ್ಟವಿಲ್ಲವೇ?

ರವಿ ನಮ್ಮಿಂದ ದೂರವಾದ ಮೇಲೆ ಬಹುಷಃ ಆಕೆಗೆ ನಾವು ಇಷ್ಟವಿಲ್ಲ ಎಂದು ಕಾಣುತ್ತದೆ. ಹಾಗಾಗಿ ನಮ್ಮಿಂದ ದೂರವಾಗಿದ್ದಾಳೆ ಎಂದು ಹೇಳಿದರು.

ಪರಿಹಾರದ ಹಣ ಸಿಕ್ಕಿಲ್ಲ

ಪರಿಹಾರದ ಹಣ ಸಿಕ್ಕಿಲ್ಲ

ರವಿ ಕುಟುಂಬಕ್ಕೆ ಪರಿಹಾರ ಕೊಟ್ಟಿದ್ದೇವೆ ಎಂದು ರಾಜಕಾರಣಿಗಳು, ಸರ್ಕಾರದವರು ಹೇಳುತ್ತಿದ್ದಾರೆ. ಸರ್ಕಾರದ ಪರಿಹಾರ ಹಣ ನಮ್ಮ ಕೈಗೆ ಸಿಕ್ಕಿಲ್ಲ. ಕುಸುಮಾಗೆ ಪರಿಹಾರ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ. ನಿಜಕ್ಕೂ ಪರಿಹಾರ ಎಲ್ಲಿ ಹೋಯ್ತು ಎಂದು ಗೌರಮ್ಮ ಪ್ರಶ್ನೆ ಮಾಡಿದರು.

ಹನುಮಂತರಾಯಪ್ಪ ಸ್ಪಷ್ಟನೆ

ಹನುಮಂತರಾಯಪ್ಪ ಸ್ಪಷ್ಟನೆ

ನನ್ನ ಮಗಳು ಉನ್ನತ ವ್ಯಾಸಂಗಕ್ಕೆಂದು ವಿದೇಶಕ್ಕೆ ತೆರಳಿದ್ದಾಳೆ. ರವಿ ಕುಟುಂಬದೊಂದಿಗಿನ ಸಂಬಂಧ ಹಾಗೆ ಇದೆ. ನಾವೀಗ ದ್ವೇಷ ಮಾಡಿ ಸಾಧಿಸುವುದಾರೂ ಏನಿದೆ. ನನನ್ನು ಮತ್ತು ನನ್ನ ಮಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಡಿಕೆ ರವಿ ಮಾವ ಹನುಮಂತರಾಯಪ್ಪ ಹೇಳಿದ್ದಾರೆ.

ಹೋರಾಟಕ್ಕೆ ಬರುವ ನಿರೀಕ್ಷೆ ಇದೆ

ಹೋರಾಟಕ್ಕೆ ಬರುವ ನಿರೀಕ್ಷೆ ಇದೆ

ಡಿಕೆ ರವಿ ಸಾವಿಗೆ ನ್ಯಾಯ ಕೇಳುತ್ತಿರುವ ನಮ್ಮ ಹೋರಾಟಕ್ಕೆ ಹನುಮಂತರಾಯಪ್ಪ ಮತ್ತು ಕುಸುಮಾ ಬೆಂಬಲ ನೀಡುತ್ತಾರೆ ಎಂದು ಅಂದಕೊಂಡಿದ್ದೇವೆ. ನಮ್ಮ ಹೋರಾಟಕ್ಕೆ ಮುಂದಿನ ದಿನಗಳಲ್ಲಿ ಅವರು ಜತೆಯಾಗುತ್ತಾರೆ ಎಂದು ಗೌರಮ್ಮ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BENGALURU: Deceased IAS officer D K Ravi's mother Gowramma, father Kariyappa, sister Bharati, brother Ramesh and others staged a dharna in front of the Mahatma Gandhi statue near Anand Rao Circle demanding compensation and to reveal CBI Probe Report. D K Ravi's Mother Gowramma tells About DK Ravis wife Kusuma, Here is the full story.
Please Wait while comments are loading...