ಕರ್ನಾಟಕದಲ್ಲಿ ಮುಂಗಾರಿಗೂ ಮುನ್ನ ಅಬ್ಬರಿಸಲಿದೆ ಸೈಕ್ಲೋನ್ 'ವಾಯು'
ಬೆಂಗಳೂರು, ಜೂನ್ 10: ಕರ್ನಾಟಕಕ್ಕೆ ಮುಂಗಾರು ಪ್ರವೇಶಕ್ಕೂ ಮುನ್ನವೇ ಚಂಡಮಾರುತ 'ವಾಯು' ಅಬ್ಬರಿಸಲಿದೆ ಎನ್ನುವ ಮಾಹಿತಿಯನ್ನು ಸ್ಕೈಮೆಟ್ ವೆದರ್ ನೀಡಿದೆ.
ಕೇರಳದಲ್ಲಿ ಮುಂದಿನ 24ಗಂಟೆಗಳಲ್ಲಿ ಮಳೆಯಾಗಲಿದೆ.ಗೋವಾ ಹಾಗೂ ಕರ್ನಾಟಕದಲ್ಲೂ ವಿಪರೀತ ಮಳಡಯಾಗಲಿದೆ. ಭಾನುವಾರ ಕೊಟ್ಟಾಯಂ 92 ಮಿ.ಮೀ, ಕೊಚ್ಚಿಯಲ್ಲಿ 91 ಮಿ.ಮೀನಷ್ಟು ಮಳೆಯಾಗಿದೆ. ತಿರುವನಂತಪುರಂ-58 ಮಿ.ಮೀ, ಕನ್ಯಾಕುಮಾರಿಯಲ್ಲಿ 36 ಮಿ.ಮೀ ಮಳೆಯಾಗಿದೆ.
ಈಗಾಗಲೇ ಅರಬ್ಬಿ ಸಮುದ್ರದಿಂದ ಗುಜರಾತಿನ ಕರಾವಳಿ ಭಾಗವನ್ನು ಪ್ರವೇಶಿಸುವ ಹಂತದಲ್ಲಿದೆ. ನೈಋತ್ಯ ಮುಂಬೈನಿಂದ 800 ಕಿ.ಮೀ ದೂರದಲ್ಲಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ.

ಸೌರಾಷ್ಟ್ರ ಕರಾವಳಿಗೆ ಜೂನ್ 12ರಂದು ಪ್ರವೇಶಿಸಲಿದೆ. ತಜ್ಞರ ಪ್ರಕಾರ ಜೂನ್ 12-14ರ ಒಳಗೆ ಸೌರಾಷ್ಟ್ರ ಹಾಗೂ ಕಚ್‌ನಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಚಂಡಮಾರುತವು ಸೋಮನಾಥ, ಪೋರಬಂದರ್, ದ್ವಾರಕದಲ್ಲಿ ಪ್ರಬಲವಾಗಲಿದೆ.











Click it and Unblock the Notifications