ಅಧಿಕಾರ ಇಲ್ಲ ಅಂದ್ರೇ ಕೆಲವರಿಗೆ ಉಸಿರು ಕಟ್ಟುತ್ತೆ: ಎಸ್‌ಟಿ ಸೋಮಶೇಖರ್‌ಗೆ ಸಿಟಿ ರವಿ ತಿರುಗೇಟು!

ದಾವಣಗೆರೆ, ಅಕ್ಟೋಬರ್‌ 06: ಅಧಿಕಾರ ಇಲ್ಲವೆಂದರೆ ಕೆಲವರಿಗೆ ಉಸಿರು ಕಟ್ಟುತ್ತೆ, ಎಸಿ ರೂಮ್‌ನಲ್ಲಿದ್ದರೆ ವಾತಾವರಣ ಚೆನ್ನಾಗಿರುತ್ತದೆ. ಇವರಿಗೆ ಯಾವಾಗಲೂ ಅಧಿಕಾರದಲ್ಲಿರಬೇಕು‌ ಆಗ ಎಲ್ಲವೂ ಚೆನ್ನಾಗಿರುತ್ತದೆ ಎಂದು ಮಾಜಿ ಸಚಿವ ಎಸ್‌ ಟಿ ಸೋಮಶೇಖರ್‌ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ತಿರುಗೇಟು ನೀಡಿದ್ದಾರೆ.

ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಗೆ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಎಸ್‌ ಟಿ ಸೋಮಶೇಖರ್‌ ವಿರೋಧ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಧಿಕಾರ ಇಲ್ಲವೆಂದರೆ ಕೆಲವರಿಗೆ ಉಸಿರು ಕಟ್ಟುತ್ತೆ, ಎಸಿ ರೂಮ್‌ನಲ್ಲಿದ್ದರೆ ವಾತಾವರಣ ಚೆನ್ನಾಗಿರುತ್ತದೆ ಎಂದು ಮಾಜಿ ಶಾಸಕ ಸಿಟಿ ರವಿ ಹೇಳಿದ್ದಾರೆ. ಇವರಿಗೆ ಯಾವಾಗಲೂ ಅಧಿಕಾರದಲ್ಲಿರಬೇಕು‌ ಆಗ ಎಲ್ಲವೂ ಚೆನ್ನಾಗಿರುತ್ತದೆ, ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ ಎಂಬ ಮಾಜಿ ಸಚಿವ ಎಸ್‌ಟಿ‌ ಸೋಮಶೇಖರ್ ಹೇಳಿಕೆಗೆ ಸಿಟಿ ರವಿ ತಿರುಗೇಟು ನೀಡಿದರು.

CT Ravi Slams Against Ex Minister ST Somashekar On His Statement

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇದರ ಜೊತೆ ರಾಜ್ಯಾಧ್ಯಕ್ಷರ ಸ್ಥಾನದ ಬಗ್ಗೆ ನಾನು ಹೇಳಿದರೆ ಸರಿಯಲ್ಲ, ನಾನು ಹೇಳಲುಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರವಾಗಿ ಉತ್ತರಿಸಿದರು.

ಬಿಜೆಪಿ ನಕಲಿ‌ ಹಿಂದೂಗಳು ಎಂಬ ಹೇಳಿಕೆಗೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು, ನಾವು ನಕಲಿ ಹಿಂದೂಗಳು ಅದಕ್ಕೆ ತಿಲಕ ಇಟ್ಟುಕೊಳ್ಳುತ್ತೇವೆ. ಕೇಸರಿ ಪೇಟ ತೊಟ್ಟುಕೊಳ್ಳುತ್ತೇವೆ. ಅಸಲಿ ಹಿಂದೂಗಳು ತಿಲಕ‌ ಮತ್ತು ಪೇಟ ಧರಿಸಲು ಹಿಂಜರಿಯುತ್ತಾರೆ. ಟೋಪಿಯಾದರೆ ಇಷ್ಟಪಟ್ಟು ಹಾಕಿಕೊಳ್ಳುತ್ತಾರೆ. ಕೇಸರಿ ಅಂದ್ರೆ ಇವರಿಗೆ ಆಗಲ್ಲ ಎಂದು ಹೇಳಿದರು.

ಶಿವಮೊಗ್ಗದ ರಾಗಿಗುಡ್ಡ ಘಟನೆ ಬಿಜೆಪಿ ಕೃತ್ಯ ಎಂಬ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಗೆ ಕಿಡಿಕಾರಿದ ಸಿಟಿ ರವಿ, ತಲೆಕೆಟ್ಟವರು ಕೂಡ ಹೀಗೆ ಮಾತಾಡಲ್ಲ, ಅವರು ಹಿರಿಯರು ತಲೆಕಟ್ಟವರಂತೆ ಮಾತಾಡಬಾರದು. ರಾಗಿಗುಡ್ಡ ಘಟನೆಯಲ್ಲಿ ಸರ್ಕಾರ ಮಾರ್ಜಾಲ ನ್ಯಾಯ ರೀತಿ ವರ್ತನೆ ಮಾಡುತ್ತಿದೆ. ಬೆಕ್ಕಿಗೆ ಪಂಚಾಯತಿ ಒಪ್ಪಿಸಿದ್ರೆ ಏನು ಮಾಡಿತ್ತೊ ಅದೇ ರೀತಿ ಮಾಡುತ್ತಿದೆ ಎಂದು ಕಿಡಿಕಾರಿದರು.

ಮತಾಂಧರಂತೆ ವರ್ತನೆ ಮಾಡುವವರ ಮೇಲೆ ಕ್ರಮ‌ ಕೈಗೊಳ್ಳಬೇಕಿತ್ತು. ದೌರ್ಜನ್ಯಕ್ಕೊಳಗಾದವರ ಮೇಲೆ ಕೇಸ್ ಹಾಕಿದೆ. ಈ ಮೂಲಕ ಇಬ್ಬರ ಮೇಲು‌ ಕೇಸ್ ಹಾಕಿದ್ದೇವೆ ಎನ್ನುತ್ತಿದೆ. ಇದರಿಂದ ಮತಾಂಧತೆಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ಔರಂಗಜೇಬ್‌ ಮತ್ತು ಟಿಪ್ಪು ಪೋಟೋ ಹಾಕಿ ವೈಭವೀಕರಣ ಮಾಡಲಾಗಿದೆ. ಇದೇ ಗಲಭೆಗೆ ಕಾರಣವಾಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+