ಸಿಟಿ ರವಿ ಪ್ರಕರಣ: ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ, ಏನದು
ಸಿಟಿ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಮಾತನಾಡಿದ್ದಾರೆ. ಕರ್ನಾಟಕದ ಜನತೆ ಈ ಪ್ರಕರಣಕ್ಕೆ ಥೂ ಛೀ ಅಂತಿದ್ದಾರೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಬೆಳಗಾವಿ ಸುವರ್ಣ ಸೌಧದ ಅಧಿವೇಶನದಲ್ಲಿ ನಡೆದ ಘಟನೆ ಅತ್ಯಂತ ದುರದೃಷ್ಟಕರ ಹಾಗೂ ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಸ್ವರೂಪದ ಆರೋಪ ಮಾಡಿದರು.
ಮುಂದುರಿದು ಒಬ್ಬ ಎಂಎಲ್‌ಸಿ ಜವಾಬ್ದಾರಿಯುತ ವ್ಯಕ್ತಿಯನ್ನ ಕಾನೂನು ಬಾಹಿರವಾಗಿ ನಡೆಸಿಕೊಂಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳರ್ ಯಾವುದೇ ಆಧಾರವಿಲ್ಲದೇ ಆರೋಪ ಮಾಡತಾ ಇದ್ದಾರೆ ಯಾವುದೇ ರೀತಿಯಲ್ಲೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಭಾಪತಿಗಳ ಅನುಮತಿ ಪಡೆದಿಲ್ಲ. ಇಷ್ಟಾದರೂ ಸದನದ ನಡುವಳಿಕೆ ವಿರುದ್ಧ ನಡೆದುಕೊಂಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಾಕಷ್ಟು ತಮ್ಮ ತೇಜೋವಧೆ ಆಗಿದೆ ಅಂತಾ ಅರೋಪ ಮಾಡಿದ್ದು ಎಂಎಲ್‌ಸಿ ಸಿಟಿ ರವಿ ಜೊತೆಗೆ ಇದ್ದವರೇ ಹೇಳ್ತಾ ಇದ್ದಾರೆ ಈ ರೀತಿ ಅವರು ಮಾತನಾಡಿಲ್ಲ ಅಂತ ಎಂದು ಪರೋಕ್ಷವಾಗಿ ಸಿಟಿ ರವಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಬಣದವರು ತಾವು ಕೇಳಿಸಿಕೊಂಡಿದ್ದೇವೆ ಎಂದಿದ್ದಾರೆ. ಇದೆಲ್ಲವೂ ಮೊದಲೇ ಪ್ಲಾನ್ ಆಗಿರುವುದು. ಒಬ್ಬ ಶಾಸಕನಿಗೆ ಕಾನೂನುಬಾಹಿರ ಅರೆಸ್ಟ್ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಇದು ಗೊತ್ತಾಗುತ್ತದೆ ಕಾಂಗ್ರೆಸ್ ಅವರು ಎಷ್ಟು ಗೂಂಡಾ ರಾಜಕಾರಣಿಗಳು. ಇನ್ನು ಇವರಿಗೆ ಜನಸಾಮಾನ್ಯರು ಅಂದರೆ ಕಾಲ್ತುಳಿತಕ್ಕೆ ಒಳಪಡಬಹುದು. ಸಿ.ಟಿ. ರವಿ ಸದನದ ಹೊರಗಡೆ ಹೋಗುವಾಗ ಸಹ ಮಾರಣಾಂತಿಕ ಹಲ್ಲೆ ಮಾಡುವ ಪ್ರಯತ್ನ ಆಗಿದೆ. ಹಲ್ಲೆಕೋರರು ಒಳಗಡೆ ಹೇಗೆ ಬಂದರು, ಅವರನ್ನು ಯಾರು ಒಳಗಡೆ ಬಿಟ್ಟರು. ಇದು ಹೋಗಲಿ ಗೂಂಡಾಗಳ ಶಬ್ದ ಕೇಳಿಸಿಕೊಂಡರೆ ಅವರು ಶಬ್ದ ಅತ್ಯಂತ ಕೆಟ್ಟದ್ದಾಗಿವೆ ಎಂದು ಮುತಾಲಿಕ್ ಹೇಳಿದ್ದಾರೆ.
ಸದನದ ಒಳಗಡೆ ಬೇರೆಯವರು ಬಳಸಿರುವ ಪದಗಳು ಭಯಾನಕವಾಗಿವೆ. ಆದರೆ, ಅವರು ಬಳಸಿದ ಶಬ್ದಗಳು ರೆಕಾರ್ಡ್ ಆಗಿಲ್ಲ. ಅಷ್ಟೇ ಬೆಳಗಾವಿ ಸುವರ್ಣಸೌಧ ನಡೆದ ಘಟನೆ ಇಡೀ ಕರ್ನಾಟಕದ ಜನತೆ ತಲೆ ತೆಗ್ಗಿಸುವಂತಹದು ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು
ಕಾಂಗ್ರೆಸ್ ಎನು ಹಾಗೂ ಯಾವಾಗ ಏನು ಮಾಡುತ್ತದೆ ಎನ್ನುವುದಕ್ಕೆ ಇದು ಜಲ್ವಂತ ಉದಾಹರಣೆ ಅಷ್ಟೇ. ಈ ಕೃತ್ಯಕ್ಕೆ ಕರ್ನಾಟಕದ ಜನತೆ ಥೂ ಛೀ ಅಂತಾರೆ ಒಬ್ಬ ಎಂಎಲ್ ಸಿಯ ಜೊತೆಗೆ ಈ ರೀತಿ ನಡೆದುಕೊಂಡರೆ ಜನಸಾಮಾನ್ಯರ ಗತಿ ಏನು ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ರವಿ ಬಂಧನ ಮಾಡಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ವಕೀಲರನ್ನು ಸಹ ಭೇಟಿ ಮಾಡಲು ಅವಕಾಶ ನೀಡಿಲ್ಲ. ಇದು ಸಹ ಸಹ ಕಾನೂನು ಬಾಹಿರ ಆಗಿದೆ. ಯಾರೇ ಆಗಲಿ ತಮ್ಮ ವಕೀಲರನ್ನು ಭೇಟಿ ಮಾಡುವ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ಸಹ ಹೇಳಿದೆ. ಇದನ್ನ ಸಹ ಉಲ್ಲಂಘನೆ ಮಾಡಲಾಗಿದೆ. ಇದು ಎಲ್ಲವೋ ನೋಡಿದರೆ ಪೂರ್ವ ನಿಯೋಜಿತ ಷಡ್ಯಂತ್ರ ಎನ್ನುವುದು ಸ್ಪಷ್ಟವಾಗುತ್ತದೆ. ಹೀಗಾಗಿ, ಇದನ್ನು ನಾನು ಖಂಡಿಸುತ್ತೇನೆ.
ನಿಮಗೆ ಕಾನೂನು ಬಗ್ಗೆ ಏನಾದರೂ ಗೌರವ ಇದ್ದರೆ ಕೂಡಲೇ ಈ ರೀತಿ ಮಾಡುವುದನ್ನು ಬಿಡಿ ಎಂದು ಆಗ್ರಹಿಸಿದ್ದಾರೆ.












Click it and Unblock the Notifications