CT Ravi Case: ಸಿಟಿ ರವಿ ತಲೆಗೆ ಹೊಡೆದಿದ್ದು ಯಾರು ಎನ್ನುವುದು ಕೊನೆಗೂ ರಿವೀಲ್!
ಎಂಎಲ್‌ಸಿ ಸಿಟಿ ರವಿ ಅವರ ತಲೆಗೆ ಯಾರು ಹೊಡೆದರು ಎನ್ನುವುದು ಕೊನೆಗೂ ಬಹಿರಂಗವಾಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಪ್ರಾಸ್ಟಿ** ಎಂದು ಅವಾಚ್ಯ ಶಬ್ದ ಬಳಸಿರುವ ಆರೋಪ ಸಿಟಿ ರವಿ ಮೇಲೆ ಕೇಳಿ ಬಂದಿತ್ತು. ಈ ಆರೋಪಕ್ಕೆ ಸಂಬಂಧಿಸಿದಂತೆ ಸಿಟಿ ರವಿಯನ್ನು ಪೊಲೀಸರು ಬಂಧಿಸಿದ್ದರು. ಆ ಸಂದರ್ಭದಲ್ಲಿ ಸಿಟಿ ರವಿ ತಲೆಗೆ ಗಾಯವಾಗಿತ್ತು. ಈ ಗಾಯ ಹೇಗಾಯ್ತು, ಪೊಲೀಸರು ಹಲ್ಲೆ ಮಾಡಿದ್ದರಾ ಇಲ್ಲ, ಬೇರೆ ಯಾರಾದರು ಹೊಡೆದರ ಎನ್ನುವುದು ಸೇರಿದಂತೆ ಹಲವು ಪ್ರಶ್ನೆಗಳು ಎದುರಾಗಿದ್ದವು. ಸಿಟಿ ರವಿಗೆ ಯಾವ ರೀತಿ ಹಲ್ಲೆ ಆಯಿತು ಅಂತ ಖುದ್ದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಸಹ ಹೇಳಿರಲಿಲ್ಲ. ಆದರೆ, ಇದೀಗ ಸಿಟಿ ರವಿಗೆ ಹೊಡೆದವರು ಯಾರು ಎನ್ನುವುದು ಬಹಿರಂಗವಾಗಿದೆ. ಈ ಸಂಬಂಧ ಸಿಟಿ ರವಿ ಅವರೇ ಬಾಯಿ ಬಿಟ್ಟಿದ್ದಾರೆ.
ಸಿಟಿ ರವಿ ಪ್ರಕರಣ ರಾಜ್ಯದಾದ್ಯಂತ ಗಂಭೀರ ಚರ್ಚೆಗೆ ಕಾರಣವಾಗಿದೆ. ರವಿ ಬಂಧನವಾದ ಮೇಲೆ ಅವರ ತಲೆಗೆ ಗಂಭೀರ ಗಾಯವಾಗಿತ್ತು. ರಕ್ತ ಸೋರುತ್ತಿತ್ತು. ಪೊಲೀಸರೇ ಹೊಡೆದಿದ್ದರಾ ಎನ್ನುವ ಅನುಮಾನ ಶುರುವಾಗಿತ್ತು. ಇದೀಗ ನನ್ನನ್ನು ಹೊಡೆದಿದ್ದು ಅಪರಿಚಿತರಲ್ಲ ಎಂದು ಸಿಟಿ ರವಿ ಹೇಳಿದ್ದಾರೆ. ಅಲ್ಲದೆ ಯಾರು ಹೊಡೆದರು ಅಂತಲೂ ಹೇಳಿದ್ದಾರೆ. ಇದು ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರ ತಂದೊಡ್ಡುವ ಸಾಧ್ಯತೆ ಇದೆ. ಪೊಲೀಸ್ ಕಸ್ಟಡಿಯಲ್ಲಿ ಇದ್ದ ಹಾಗೂ ಎಂಎಸ್‌ಸಿ ಒಬ್ಬರಿಗೆ ಹೊಡೆದವರ ಮೇಲೆ ಕ್ರಮವಾಗಿಲ್ಲ. ಅಷ್ಟೊಂದು ಭದ್ರತೆ ಹಾಗೂ ಜನ ಇರುವಾಗಲೇ ಹಲ್ಲೆಯಾಗಿದೆ ಎನ್ನುವುದು ಚರ್ಚೆಗೆ ಕಾರಣವಾಗಿದೆ.

ಕಮಿಷನರ್‌ನ ಸಸ್ಪೆಂಡ್ ಮಾಡಿ: ಸಿಟಿ ರವಿ
ಹಲ್ಲೆ ಹಾಗೂ ಬಂಧನಕ್ಕೆ ಸಂಬಂಧಿಸಿದಂತೆ ಸಿಟಿ ರವಿ ಕೇಸ್‌ನಲ್ಲಿ ಖಾನಾಪುರ ಠಾಣೆಯ ಸಿಪಿಐ ಮಂಜುನಾಥ್ ತಲೆದಂಡ ಆಗಿದೆ. ಸಿಬಿಐ ಅನ್ನು ಅಮಾನತು ಮಾಡಿ ಆದೇಶ ಮಾಡಲಾಗಿದೆ. ಆದರೆ, ನನ್ನ ಪ್ರಕರಣದಲ್ಲಿ ಸಿಪಿಐನ ಅಲ್ಲ ಕಮಿಷನರ್ ಅನ್ನೇ ಸಸ್ಪೆಂಡ್ ಮಾಡಬೇಕು ಅಂತ ಎಂಎಸ್‌ಸಿ ಸಿಟಿ ರವಿ ಅವರು ಆಗ್ರಹಿಸಿದ್ದಾರೆ. ಅವರೂ ಸಹ ಈ ಕೇಸ್‌ನಲ್ಲಿ ತಪ್ಪು ಮಾಡಿದ್ದಾರೆ ಅಂತ ರವಿ ಅವರು ದೂರಿದ್ದಾರೆ.
ಸಿಟಿ ರವಿಗೆ ಹಲ್ಲೆ ಮಾಡಿದ್ದು ಯಾರು ?
ಸಿಟಿ ರವಿ ತಲೆಗೆ ಯಾರು ಹೊಡೆದಿದ್ದಾರೆ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಈ ಬಗ್ಗೆ ಮಾತನಾಡಿರುವ ಸಿಟಿ ರವಿ ಅವರು, ಸದನದ ಒಳಗಡೆ ಹಾಗೂ ಹೊರಗಡೆ ಏನಾಗಿದೆ ಅಂತ ಎಲ್ಲರಿಗೂ ಗೊತ್ತು. ಅಲ್ಲಿ ಎಲ್ಲಾ ಕಡೆ ಕ್ಯಾಮೆರಾಗಳು ಇವೆ. ನನ್ನ ಮೇಲೆ ಹಲ್ಲೆ ಮಾಡಿದವರು ಯಾರೂ ಅಪರಿಚಿತರಲ್ಲ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪಿಎ ಅವರೊಂದಿಗೆ ಇದ್ದವರೇ ನನಗೆ ಹೊಡೆದಿದ್ದಾರೆ ಎಂದು ಎಂಎಸ್‌ಸಿ ಸಿಟಿ ರವಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ನನ್ನಗೆ ಯಾರು ಹೊಡೆದರೊ ಅವರ ಮೇಲೆ ಕ್ರಮ ತೆಗೆದುಕೊಳ್ಳಿ ಅಂತ ಡಿಸೆಂಬರ್ 19ಕ್ಕೇ ನಾನು ದೂರು ಕೊಟ್ಟಿದ್ದೇನೆ. ಆದರೆ, ಪೊಲೀಸರು ಇಲ್ಲಿಯ ವರೆಗೆ ಎಫ್‌ಐಆರ್ ಮಾಡಿಕೊಂಡಿಲ್ಲ. 10 ಜನರನ್ನ ವಶಕ್ಕೆ ತೆಗೆದುಕೊಂಡಿದ್ದರು ಆ ಮೇಲೆ ಅವರನ್ನೂ ಬಿಟ್ಟು ಕಳುಹಿಸಿದ್ದಾರೆ. ಹೀಗಾಗಿ ಈ ಕೇಸ್‌ನಲ್ಲಿ ಕಮಿಷನರ್ ಅವರನ್ನೂ ಸಸ್ಪೆಂಡ್ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಿಟಿ ರವಿ ಮೇಲೆ ಹಲ್ಲೆ ನಡೆದ ಬೆನ್ನಲ್ಲೇ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಮೇಲೂ ದಾಳಿಯಾಗಿದೆ. ಈ ದಾಳಿಯನ್ನು ಕಾಂಗ್ರೆಸ್‌ನವರೇ ಮಾಡಿದ್ದಾರೆ ಎಂದು ಮುನಿರತ್ನ ದೂರಿದ್ದಾರೆ. ಮುನಿರತ್ನ ಮೇಲೆ ಮೊಟ್ಟೆ ಅಟ್ಯಾಕ್ ಮಾಡಲಾಗಿದೆ. 10 ದಿನಗಳ ಅಂತರದಲ್ಲಿ ಬಿಜೆಪಿಯ ನಾಯಕರ ಮೇಲೆ ದಾಳಿ ನಡೆದಿದೆ.












Click it and Unblock the Notifications