Bengaluru: ಕಚ್ಚಾ ತೈಲ ದರ ಇಳಿಕೆ ಬೆನ್ನಲ್ಲೆ ಅಡುಗೆ ಅನಿಲ, ಇಂಧನ ಬೆಲೆ ಇಳಿಕೆಗೆ ಆಗ್ರಹ

ಬೆಂಗಳೂರು, ಜಲೈ 05: ನಿರಂತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಹೋಟೆಲ್ ಉದ್ಯಮಕ್ಕೆ ಅಡುಗೆ ಅನಿಲ ದರ ಏರಿಕೆ ಸಹ ಸಾಕಷ್ಟು ಆರ್ಥಿಕ ಹೊಡೆತ ಕೊಟ್ಟಿತ್ತು. ಇದೀಗ ಕಚ್ಚಾ ತೈಲದ ಬೆಲೆ ಇಳಿಕೆ ಆದರೂ ಸಹಿತ ಹೆಚ್ಚಾಗಿರುವ ದರಗಳು ಯಥಾ ಸ್ಥಿತಿಯಲ್ಲಿವೆ. ಇಂಧನ, ಅಡುಗೆ ಅನಿಲಗಳ ಅವುಗಳ ಬೆಲೆ ಕಡಿಮೆ ಮಾಡಲು ಬೃಹತ್ ಬೆಂಗಳೂರು ಹೋಟೆಲುಗಳ ಸಂಘ (BBHA) ಒತ್ತಾಯಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಬೃಹತ್ ಬೆಂಗಳೂರು ಹೋಟೆಲುಗಳ ಸಂಘ (BBHA) ಅಧ್ಯಕ್ಷ ಪಿ.ಸಿ.ರಾವ್ ಅವರು, ಈಗಾಗಲೇ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 134 ಡಾಲರ್‌ನಿಂದ 72 ಡಾಲರ್‌ಗೆ ಇಳಿಕೆಯಾಗಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡಿಲ್ಲ ಇದು ವಿಷಾಧನಿಯ ಎಂದರು.

Crude Oil Price Decreased

ಅದಷ್ಟೇ ಅಲ್ಲದೇ ಪೆಟ್ರೋಲ್‌ನ ಪ್ರಸ್ತುತ ಮಾರಾಟ ಬೆಲೆ ಪ್ರತಿ ಲೀಟರ್‌ಗೆ ರೂಪಾಯಿ 102 ಇದೆ. ಇದರಲ್ಲಿ 58 ರೂಗಳಷ್ಟು ತೆರಿಗೆ ಸಂಗ್ರಹಿಸುತ್ತಿದ್ದಾರೆ. ಇದರ ಜೊತೆಗೆ LPG ಅಡುಗೆ ಅನಿಲದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಟನ್‌ಗೆ 50ರೂಪಾಯಿ ಇಳಿಕೆ ಆಗಿದೆ ಎಂದು ತಿಳಿಸಿದರು.

ತಕ್ಷಣವೇ ಬೆಲೆ ಇಳಿಕೆಗೆ ಕ್ರಮ ವಹಿಸಿ

ಕಚ್ಚಾ ತೈಲದ ಬೆಲೆ, ಅಡುಗೆ ಅನಿಲದ ಬೆಲೆ ಇಳಿಕೆ ಆಗಿದ್ದರೂ ಸಹ ಗ್ಯಾಸ್‌ ಬೆಲೆಯನ್ನು ಕಡಿಮೆ ಮಾಡಿರುವುದಿಲ್ಲ. ಈ ಎಲ್ಲಾ ಹೆಚ್ಚಿನ ಬೆಲೆ ಮತ್ತು ತೆರಿಗೆಗಳಿಂದ ಜನಸಾಮಾನ್ಯರು ಹಾಗೂ ಉದ್ಯಮಿಗಳ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಇಳಿಕೆ ಬಗ್ಗೆ ಗಮನ ಹರಿಸಬೇಕು. ಡೀಸೆಲ್, ಪೆಟ್ರೋಲ್‌ ಮತ್ತು ಗ್ಯಾಸ್ (LPG) ಬೆಲೆಯನ್ನು ತಕ್ಷಣವೇ ಕಡಿಮೆ ಮಾಡಬೇಕೆಂದು ಜನರ ಪರವಾಗಿ ಹೋಟೆಲ್ ಸಂಘದಿಂದ ಒತ್ತಾಯಿಸುತ್ತೇವೆ ಎಂದರು.

Crude Oil Price Decreased

ಇನ್ನೂ ಜೊತೆಗೆ ಹೊಟೇಲುಗಳಿಗೆ ಸರಬರಾಜು ಮಾಡುವ ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್ ಮೇಲಿನ ಸರಕು ಸೇವಾ ತೆರಿಗೆಯನ್ನು ಶೇಕಡಾ 5ಕ್ಕೆ ಇಳಿಸುವ ಮೂಲಕ ಜನಸಾಮಾನ್ಯರಿಗೆ, ಹೋಟೆಲ್‌ ಉದ್ಯಮಗಳಿಗೆ ಅನುಕೂಲ ಮಾಡಿಕೊಡಬೇಕು. ಬೆಲೆ ಇಳಿಕೆಗಳ ಕುರಿತು ಸಂಘವು ರಾಜ್ಯ ನಾಯಕರು ಮತ್ತು ಕೇಂದ್ರ ಸಚಿವರ ಜೊತೆ ಚರ್ಚಿಸಲಿದ್ದೇವೆ. ಜೊತೆಗೆ ಮನವಿ ಮೇರೆಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಬೃಹತ್ ಬೆಂಗಳೂರು ಹೋಟೆಲುಗಳ ಸಂಘ ಮುಖಂಡರು ಸೇರಿ ಒತ್ತಾಯಿಸಲಿದ್ದೇವೆ ಎಂದು ಹೇಳಿದರು.

ಅಡುಗೆ ಅನಿಲ, ವಿದ್ಯುತ್ ದರ, ಕಾಪಿ ಪುಡಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬೆಂಗಳೂರಿನ ವಿವಿಧೆಡೆ ಹೋಟೆಲುಗಳಲ್ಲಿ ಊಟ, ತಿಂಡಿ, ಟೀ ಕಾಪಿ ಬೆಲೆ ಏರಿಕೆ ಆಗಿದ್ದು, ಇದು ಗ್ರಾಹಕರಿಗೆ ಆರ್ಥಿಕ ಹೊರೆಯಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+