ಇ.ಕೃಷ್ಣಪ್ಪಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್
ಬೆಂಗಳೂರು, ಫೆ.10 : ವಿಧಾನ ಪರಿಷತ್ ಸದಸ್ಯ ಮತ್ತು ನಿರ್ಮಾಪಕ ಇ.ಕೃಷ್ಣಪ್ಪ ಮೇಲಿನ ಗೋಮಾಳ ಭೂಮಿ ಒತ್ತುವರಿ ಪ್ರಕರಣದ ಆರೋಪವನ್ನು ಸೋಮವಾರ ಹೈಕೋರ್ಟ್ ರದ್ದುಗೊಳಿಸಿದೆ. ಇದರಿಂದ ಇ.ಕೃಷ್ಣಪ್ಪ ನಿರಾಳರಾಗಿದ್ದಾರೆ.
ರಘು ಎಂಬುವರು 2012ರಲ್ಲಿ ಲೋಕಾಯುಕ್ತಕ್ಕೆ ಇ.ಕೃಷ್ಣಪ್ಪ ವಿರುದ್ಧ ದೂರು ಸಲ್ಲಿಸಿ, ಯಲಹಂಕ ಸುತ್ತಮುತ್ತ ಗೋಮಾಳ ಜಮೀನು ಒತ್ತುವರಿ ಮಾಡಿ, ನಿವೇಶನವಾಗಿ ಮಾರ್ಪಡಿಸಿ ಇ.ಕೃಷ್ಣಪ್ಪ ಮಾರಾಟ ಮಾಡಿದ್ದಾರೆಂದು ಎಂದು ಆರೋಪಿಸಿದ್ದರು.
ಈ ದೂರಿನ ಅನ್ವಯ ಲೋಕಾಯುಕ್ತ ನ್ಯಾಯಮೂರ್ತಿಗಳು ತನಿಖೆಗೆ ಆದೇಶ ನೀಡಿದ್ದರು. ಲೋಕಾಯುಕ್ತ ಪೊಲೀಸರು ದೂರಿನ ಕುರಿತು ತನಿಖೆ ನಡೆಸಿ ದೋಷಾರೋಪ ಸಹ ಸಲ್ಲಿಸಿದ್ದರು. ಈ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಇ.ಕೃಷ್ಣಪ್ಪ ಹೈಕೋರ್ಟ್ ಮೊರೆ ಹೋಗಿದ್ದರು.
ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕಸದಸ್ಯ ಪೀಠ ಪ್ರಕರಣವನ್ನು ರದ್ದುಗೊಳಿಸಿದೆ. ರಘು ಲೋಕಾಯುಕ್ತಕ್ಕೆ ದೂರು ಸಲ್ಲಿಸುವ ಮುನ್ನ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದ ಕಾರಣ ಪ್ರಕರಣವನ್ನು ರದ್ದುಗೊಳಿಸಲಾಗಿದೆ. [ಕರ್ನಾಟಕದ ಇತರ ಕ್ರೈಂ ಸುದ್ದಿಗಳು]

ಕೃಷ್ಣಪ್ಪಗೆ ಬಿಗ್ ರಿಲೀಫ್
ವಿಧಾನ ಪರಿಷತ್ ಸದಸ್ಯ ಮತ್ತು ನಿರ್ಮಾಪಕ ಇ.ಕೃಷ್ಣಪ್ಪ ಮೇಲಿನ ಗೋಮಾಳ ಭೂಮಿ ಒತ್ತುವರಿ ಪ್ರಕರಣದ ಆರೋಪವನ್ನು ಸೋಮವಾರ ಹೈಕೋರ್ಟ್ ರದ್ದುಗೊಳಿಸಿದೆ. ರಘು ಎಂಬುವರು 2012ರಲ್ಲಿ ಲೋಕಾಯುಕ್ತಕ್ಕೆ ಇ.ಕೃಷ್ಣಪ್ಪ ವಿರುದ್ಧ ದೂರು ಸಲ್ಲಿಸಿ, ಯಲಹಂಕ ಸುತ್ತಮುತ್ತ ಗೋಮಾಳ ಜಮೀನು ಒತ್ತುವರಿ ಮಾಡಿ, ನಿವೇಶನವಾಗಿ ಮಾರ್ಪಡಿಸಿ ಇ.ಕೃಷ್ಣಪ್ಪ ಮಾರಾಟ ಮಾಡಿದ್ದಾರೆಂದು ಎಂದು ಆರೋಪಿಸಿದ್ದರು. ಲೋಕಾಯುಕ್ತರಿಗೆ ದೂರು ಸಲ್ಲಿಸುವಾಗ ರಘು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದ ಕಾರಣ ಸೋಮವಾರ ಹೈಕೋರ್ಟ್ ಪ್ರಕರಣವನ್ನು ರದ್ದುಗೊಳಿಸಿದೆ.

ಪೊಲೀಸರನ್ನು ಅಭಿನಂದಿಸಿದ ಔರಾದ್ಕರ್
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯೊಂದಕ್ಕೆ ದರೋಡೆ ನಡೆಸಿದ್ದ ಪ್ರಕರಣವನ್ನು ಕೇವಲ ಅರ್ಧಗಂಟೆಯಲ್ಲಿ ಭೇದಿಸಿರುವ ಉತ್ತರ ವಿಭಾಗದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 10 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ಜೆ.ಜೆ.ನಗರ ಹಳೆಗುಡ್ಡದಹಳ್ಳಿಯ ನಿವಾಸಿ ನಾಗರಾಜ್ (20) ಎಂದು ಗುರುತಿಸಲಾಗಿದೆ. ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ತಂಡವನ್ನು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅಭಿನಂದಿಸಿದ್ದು, ಬಹುಮಾನ ಘೋಷಿಸಿದ್ದಾರೆ.

ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದವರ ಬಂಧನ
ಕಾಟನ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ಯಾಸ್ ಕಟರ್, ಗ್ಯಾಸ್ ಸಿಲೆಂಡರ್ ಉಪಯೋಗಿಸಿಕೊಂಡು ಕಳವು ಮಾಡಲು ಹೊಂಚು ಹಾಕುತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗಜರಾಜ್ (18), ಭರತೇಶ್ (19), ವಿಘ್ನೇಶ್ (19), ಗಣೇಶ (19), ರಾಜು (22) ಎಂದು ಗುರುತಿಸಲಾಗಿದೆ. ಬಂಧಿತರಿಂದ 1 ಗ್ಯಾಸ್ ಸಿಲಿಂಡರ್, 1 ಆಕ್ಸಿಜನ್ ಸಿಲಿಂಡರ್, 1 ಗ್ಯಾಸ್ ಕಟರ್, 1 ಕೆಟಿಂಗ್ ಪ್ಲೆಯರ್, 2 ಕಬ್ಬಿಣದ ರಾಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಚಿಕ್ಕಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯ 2 ಅಂಗಡಿಗಳಲ್ಲಿ ಕಳವು ಮಾಡಲು ಸಂಚನ್ನು ರೂಪಿಸಿದ್ದರು ಎಂದು ತಿಳಿದುಬಂದಿದೆ.

ಸರಗಳ್ಳರ ಸೆರೆ
ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಹಮದ್ ಯೂನಸ್ (25), ನಾಸೀರ್ (21), ಅನ್ವರ್ ಪಾಷ (24) ಎಂದು ಗುರುತಿಸಲಾಗಿದೆ. ಬಂಧಿತರಿಂದ ಏಳು ಲಕ್ಷ ರೂ. ಮೌಲ್ಯದ 227 ಗ್ರಾಂ. ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಸುತ್ತಾಡುತ್ತಾ ಒಂಟಿಯಾಗಿ ಓಡಾಡುವವರನ್ನು ಬೆದರಿಸಿ ಆಭರಣ ದೋಚಿ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳತನ ಮಾಡುತ್ತಿದ್ದ ಆರೋಪಿಗಳ ಸೆರೆ
ಚಿಕ್ಕಪೇಟೆ ಠಾಣೆಯ ಪೊಲೀಸರು ಗಮನ ಬೇರೆಡೆಸೆಳೆದು ಕಳ್ಳತನ ಮಾಡುತ್ತಿದ್ದ ಆರೋಪಿಗಳಾದ ಚಾಂದ್ ಬೀಬಿ (55), ಮಹಮದ್ ರವೂಫ್ (28), ಸಿರಾಜ್ ಕಮರುದ್ದೀನ್ ಸೈಯದ್ (51), ಶಮೀಮ್‍ಬಾನು (42), ಮಹಮದ್ ರಫೀಕ್ (34) ಅವರನ್ನು ಬಂಧಿಸಿದ್ದಾರೆ. ಆರೋಪಿಗಳೆಲ್ಲ ಗುಜರಾತ್ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ. ಬಂದಿತರಿಂದ 1,80,000 ಮೌಲ್ಯದ 56 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications