ಪ್ರಿಯತಮೆ ಕೊಚ್ಚಿ ಕೊಂದ ಪಾಗಲ್ ಪ್ರೇಮಿ

ಉಡುಪಿ, ನ.28: ಪ್ರೀತಿ ನಿರಾಕರಿಸಿದ ಯುವತಿಗೆ, ನಿರಂತರ ಕಿರುಕುಳ ನೀಡುತ್ತಿದ್ದವನು ಕೊನೆಗೂ ತನ್ನ ಪಾಗಲ್ ಪ್ರೇಮಕ್ಕೆ ದುರಂತ ಅಂತ್ಯ ಹಾಡಿಬಿಟ್ಟ. ಬುಧವಾರ ಇಲ್ಲಿನ ಕಡೆಕಾರಿನ ಯುವಕನೊಬ್ಬ ಪ್ರೀತಿಸಿದ ಹುಡುಗಿಯನ್ನು ಕೊಚ್ಚಿ ಕೊಂದ ಘಟನೆ ಜನತೆಯನ್ನು ಬೆಚ್ಚಿ ಬೀಳಿಸಿದೆ.

ಕಡೆಕಾರಿನ ಪಟೇಲ್ ತೋಟದ ಪರಿಶಿಷ್ಟ ಜಾತಿಗೆ ಸೇರಿದ ಶೇಖರ ಹಾಗೂ ಸುಮತಿ ದಂಪತಿಯ ಪುತ್ರಿ ರಂಜಿತಾ (19) ಎಂಬವರೇ ಕೊಲೆ ಗೀಡಾದವರು. ಅವರ ಮನೆ ಸಮೀಪದ ಅದೇ ಜಾತಿಗೆ ಸೇರಿದ ರಾಜು ಪಟೇಲ್ ಎಂಬವರ ಪುತ್ರ ಯೋಗೀಶ್(25) ಕೊಲೆ ಆರೋಪಿಯಾಗಿದ್ದಾನೆ.

ಅಜ್ಜರಕಾಡಿನಲ್ಲಿರುವ ಜಿ.ಶಂಕರ್ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಬಿ.ಎ. ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದ ರಂಜಿತಾ, ನೆರಮನೆ ಯ ತನ್ನ ಸಹಪಾಠಿ ಅಶ್ವಿನಿ ಎಂಬವರೊಂದಿಗೆ ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಯೋಗೀಶ್ ರಂಜಿತಾಳ ಹಿಂಭಾಗಕ್ಕೆ ಚೂರಿಯಿಂದ ತಿವಿದು ಗಾಯಗೊಳಿಸಿ, ಚೂರಿಯನ್ನು ಅಲ್ಲಿಯೇ ಎಸೆದು ಪರಾರಿಯಾಗಿದ್ದಾನೆ. ಇದರಿಂದ ಗಂಭೀರವಾಗಿ ಗಾಯ ಗೊಂಡ ಆಕೆಯನ್ನು ಮನೆಯವರು ಕೂಡಲೇ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಆದರೆ, ಅಷ್ಟರಲ್ಲಿ ಆಕೆ ಪ್ರಾಣ ಪಕ್ಷಿ ಹಾರಿ ಹೋಗಿದೆ.

ರಂಜಿತಾಳನ್ನು ಮದುವೆಯಾಗುವ ಉದ್ದೇಶವನ್ನು ಇರಿಸಿ ಕೊಂಡಿದ್ದನು. ಆದರೆ ಇದನ್ನು ರಂಜಿತಾ ನಿರಾಕರಿಸಿದ್ದಳು. ಅಲ್ಲದೆ ರಂಜಿತಾಳ ಮನೆ ಯವರು ಕೂಡ ಆತನ ಈ ದುರ್ನಡತೆಗೆ ಆಕ್ಷೇಪ ವ್ಯಕ್ತಪಡಿಸಿ, ಅವಳ ತಂಟೆಗೆ ಬಾರದಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಯೋಗೀಶ್ ಪೂರ್ವ ದ್ವೇಷದಿಂದ ಆಕೆಯನ್ನು ಕೊಲೆ ಮಾಡಿರುವುದಾಗಿ ದೂರಲಾಗಿದೆ.ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ತುಮಕೂರು, ಉಡುಪಿ,ಚಿತ್ರದುರ್ಗ, ಶಿವಮೊಗ್ಗ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ತುಮಕೂರು

ತುಮಕೂರು

ಅಪರಿಚಿತ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಯೋರ್ವ ಮೃತಪಟ್ಟಿರುವ ಘಟನೆ ನಗರದ ಗುಬ್ಬಿಗೇಟ್ ಬಳಿ ನಡೆದಿದೆ. ಈತ ಕುಂಟಮ್ಮನ ತೋಟದಲ್ಲಿ ರುವ ತಮ್ಮ ಶೆಡ್ ನಿಂದ ಟೀ ಕುಡಿ ಯಲು ಅರ್ಜುನ್ ಟೈಲ್ಸ್ ಅಂಗಡಿ ಮುಂಭಾಗ ರಾಷ್ಟ್ರೀಯ ಹೆದ್ದಾರಿ 206ನ್ನು ದಾಟುತ್ತಿದ್ದಾ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು

ಬೆಂಗಳೂರು

ಎಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದ ಆಭರಣ ದೋಚಿ, 56 ವರ್ಷ ವಯಸ್ಸಿನ ದೊಡ್ಡನೆಕ್ಕುಂದಿ ನಿವಾಸಿ ಮುನಿಯಮ್ಮ ಎಂಬುವವರನ್ನು ಹತ್ಯೆಗೈದ ಘಟನೆ ನಡೆದಿದೆ.

ಮುನಿಯಮ್ಮಳ ಪತಿ ಮಲ್ಲಾರೆಡ್ಡಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು, ರಾತ್ರಿ ಆತ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಮನೆಯಲ್ಲಿ ಪತ್ನಿ ಮುನಿಯಮ್ಮ ಒಬ್ಬರೇ ಇದ್ದರು. ಈ ಸಂದರ್ಭದಲ್ಲಿ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಮುನಿಯಮ್ಮ ಅವರ ಕೈ-ಕಾಲು ಕಟ್ಟಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಮೈಮೇಲಿದ್ದ ಆಭರಣಗಳನ್ನು ದೋಚಿದ್ದಾರೆ ಎಂದು ತಿಳಿದು ಬಂದಿದೆ.

ಉಡುಪಿ

ಉಡುಪಿ

ಉಡುಪಿ ತಾಲೂಕಿನ ಬೆಳ್ಳಂಪಳ್ಳಿ ಗ್ರಾಮದ ಹೊಳೆಬದಿ ತೋಟದ ಮನೆ ನಿವಾಸಿ ಶ್ರೀಧರ ಪೂಜಾರಿ ಎಂಬವರು ನ. 27 ರಂದು ರಮೇಶ ಶೆಟ್ಟಿ ಎಂಬವರ ಮನೆ ರಿಪೇರಿ ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ 14.30 ಗಂಟೆಯ ವೇಳೆಗೆ ಮನೆ ಗೋಡೆಯನ್ನು ಕೆಡವುತ್ತಿರುವ ಸಮಯ ಆಕಸ್ಮಿಕವಾಗಿ ಗೋಡೆ ಜರಿದು ಶ್ರೀಧರ ಪೂಜಾರಿಯವರ ಮೈ ಮೇಲೆ ಬಿದ್ದು, ತಲೆಯ ಹಿಂಬದಿ ಎಡ ಕಿವಿಯ ಬಳಿ ತೀವೃತರದ ಜಜ್ಜಿದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.

ಶ್ರೀಮತಿ ಲೀಲಾ, ಗಂಡ: ಶ್ರೀಧರ ಪೂಜಾರಿ, ವಾಸ: ತೋಟದ ಮನೆ, ಹೊಳೆಬದಿ, ಬೆಳ್ಳಂಪಳ್ಳಿ ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕುರವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 27/2013 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಚಿತ್ರದುರ್ಗ

ಚಿತ್ರದುರ್ಗ

ಮಟ್ಕಾ ಜೂಜಾಟ ದಾಳಿ ಪ್ರಕರಣ ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯ ಪಿಎಸ್ ಐ ಬಿ.ವಿ.ಪ್ರಕಾಶ್ ತಮ್ಮ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ನಗರದ ಜೈನ್ ಕಾಲೋನಿಯ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣವನ್ನು ಪಡೆದು ಮಟ್ಕಾ ಚೀಟಿಗಳನ್ನು ಬರೆದು ಕೊಡುತ್ತಿದ್ದ ವೆಂಕಟೇಶ ಎಂಬುವನನ್ನು ಬಂಧಿಸಿದ್ದು, ಬಂಧಿತನಿಂದ 330/- ರೂಪಾಯಿ ನಗದು ಹಣ, ಎರಡು ಮಟ್ಕಾ ಚೀಟಿಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

ಶಿವಮೊಗ್ಗ

ಶಿವಮೊಗ್ಗ

ಪಶ್ಚಿಮ ಸಂಚಾರಿ ಠಾಣೆ ಶಿವಮೊಗ್ಗ: ಮೂರ್ತಿ ಸುಬ್ಬಾರಾವ್ 34 ವರ್ಷ, ವಾಸ ಮಾರ್ನಾಮಿ ಬೈಲ್ ಇವರ ಅಳಿಯ ಪ್ರವೀಣ್ ಬಿನ್ ಕೃಷ್ಣೋಜಿ ರಾವ್ ಹುಬಾಳೆ 25 ವರ್ಷ ಇವರು ತಮ್ಮ ಮೊಪೆಡ್ ಬೈಕಿನಲ್ಲಿ ಕಾಮತ್ ಪೆಟ್ರೋಲ್ ಬಂಕ್ ಎದುರುಗಡೆ ಹೊಗುತ್ತಿದ್ದಾಗ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ತನ್ನ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿ ಓವರ್ ಟೇಕ್ ಮಾಡಲು ಹೋಗಿ ಡಿಕ್ಕಿ ಹೊಡೆಸಿದ ಪರಿಣಾಮ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+