• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ಜಿಎಸ್ಟಿ ಬಿಡುಗಡೆ ಮಾಡಲು ಸಿಪಿಐಎಂ ಆಗ್ರಹ

|

ಬೆಂಗಳೂರು, ಆಗಸ್ಟ್ 02: ರಾಜ್ಯವು ಕಳೆದ ವರ್ಷ ಭೀಕರವಾದ ಬರ ಹಾಗೂ ನೆರೆ ಹಾವಳಿಗೆ ತುತ್ತಾಯಿತು. ಅದೇ ರೀತಿ, ಇದೀಗ ಕೋವಿಡ್ - 19 ವೈರಾಣುವಿನ ತೀವ್ರ ಸೋಂಕಿಗೀಡಾಗಿದೆ. ಇವುಗಳಿಂದ ರಾಜ್ಯವು ಈ ಅವಧಿಯಲ್ಲಿ ಲಕ್ಷಾಂತರ ಕೋಟಿ ರೂಗಳ ಭಾರೀ ಹಾನಿಯನ್ನು ಅನುಭವಿಸಿತು. ಈಗಂತೂ ಕೋವಿಡ್ - 19 ವೈರಾಣು ಸೋಂಕು ತನ್ನ ಉಚ್ಛ್ರಾಯ ಸ್ಥಿತಿಯ ಕಡೆ ದಾಪುಗಾಲು ಇಡುತ್ತಿದೆ. ಆದರೆ, ಕೇಂದ್ರ ಸರಕಾರ ಈ ಎಲ್ಲಾ ಸಂದರ್ಭದಲ್ಲೂ ರಾಜ್ಯಕ್ಕೆ ನೀಡಿದ ಪರಿಹಾರವೂ ಇಲ್ಲವೆನ್ನುವಷ್ಟು ಅಲ್ಪವಾಗಿದೆ.

ರಾಜ್ಯದ ಬೇಸಾಯ ಮತ್ತು ರೈತರು, ಕೃಷಿಕೂಲಿಕಾರರು, ಕಸುಬುದಾರರು, ಕಾರ್ಮಿಕರು, ದಲಿತರು ಮತ್ತು ಮಹಿಳೆಯರು ತೀವ್ರ ರೀತಿಯಲ್ಲಿ ಸಾಲ ಬಾಧಿತರಾಗಿದ್ದಾರೆ. ಉದ್ಯೋಗ ಹಾನಿಯಿಂದ ಪರಿತಪಿಸುತ್ತಿದ್ದಾರೆ. ಈ ಎಲ್ಲರಿಗೂ ಸಾಲ ಪರಿಹಾರ ನೀಡಲಿಲ್ಲ ಮತ್ತು ಸಾರ್ವಜನಿಕ ಸಾಲದ ಮೊತ್ತವನ್ನು ವ್ಯಾಪಕವಾಗಿ ವಿಸ್ತರಿಸಿ ನೆರವಾಗಲಿಲ್ಲ.

ರಾಜ್ಯಗಳಿಗೆ ಜಿಎಸ್‌ಟಿ ಬಾಕಿ ಪಾವತಿಸಲು ಕಷ್ಟಸಾಧ್ಯ: ಕೇಂದ್ರ ಸರ್ಕಾರ

ರಾಜ್ಯದ ವಿಚಾರದಲ್ಲಿ ಕೇಂದ್ರ ಸರಕಾರವೂ ನಿರಂತರವಾಗಿ ಮಲತಾಯಿ ಧೋರಣೆಯನ್ನು ಅನು ಸರಿಸುತ್ತಿರುವುದು ಖಂಡನೀಯವಾಗಿದೆ. ಪ್ರಧಾನ ಮಂತ್ರಿಗಳ ಹೆಸರಿನ ಖಾಸಗಿ ಟ್ರಸ್ಟ್ ಮೂಲಕ ಕೋವಿಡ್ - 19 ಪರಿಹಾರದ ನಿಧಿ ಸಾವಿರಾರು ಕೋಟಿ ರೂಗಳಷ್ಠು ಸಂಗ್ರಹಿಸಲಾಗಿದೆ. ಇದರಲ್ಲೂ ರಾಜ್ಯಕ್ಕೆ ಪಾಲು ನೀಡಿಲ್ಲ. ಕೇಂದ್ರ ಸರಕಾರ ಜಿ.ಎಸ್.ಟಿ ಕಾಯ್ದೆಯನ್ವಯ ಕೊಡಬೇಕಾದ ಸರಕು ಮತ್ತು ಸೇವಾ ಸುಂಕದ ಕರ್ನಾಟಕದ ಭಾಗವನ್ನು ಮತ್ತು ಇತರೇ ಬಾಕಿಗಳನ್ನು ಈಗಲೂ ನೀಡದಿರುವುದು ಖೇದಕರವಾಗಿದೆ.

ರಾಜ್ಯಕ್ಕೆ ನೆರವು ತರುವಲ್ಲಿ ಸಂಸದರು ವಿಫಲ:

ರಾಜ್ಯದ ಬಹುತೇಕ ಸಂಸದರು ಬಿಜೆಪಿಯವರೇ ಆಗಿದ್ದರೂ, ತಮ್ಮದೇ ಪಕ್ಷದ ನೇತೃತ್ವದ ಎನ್ ಡಿ ಎ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ, ತಮ್ಮದೇ ಪಕ್ಷದ ನೇತೃತ್ವದ ರಾಜ್ಯ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದರೂ, ರಾಜ್ಯದ ಜನತೆಯನ್ನು ರಕ್ಷಿಸುವಲ್ಲಿ ಮತ್ತು ರಾಜ್ಯದ ಸಂಕಷ್ಠವನ್ನು ಕೇಂದ್ರದ ಗಮನಕ್ಕೆ ತಂದು, ಒತ್ತಾಯಿಸಿ ರಾಜ್ಯಕ್ಕೆ ನೆರವು ತರುವಲ್ಲಿ ಘೋರವಾಗಿ ವಿಫಲರಾಗಿದ್ದಾರೆ.

ರಾಜ್ಯ ಸರಕಾರವೂ ರಾಜ್ಯದ ಜನತೆಗೆ ಅಗತ್ಯವಾದ ಪರಿಹಾರ ಒದಗಿಸುವಲ್ಲಿಯೂ ಅದು ಘೋರವಾಗಿ ವಿಫಲವಾಗಿದೆ. ಅದೇ ರೀತಿ, ಅದು, ಕೇಂದ್ರ ಸರಕಾರದಿಂದ ಪಡೆಯ ಬೇಕಾದ ಅಗತ್ಯ ನೆರವು ಮತ್ತು ಬಾಕಿಗಳನ್ನು ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯುವಲ್ಲಿ ಹೆದರಿಕೆಯ ಮನೋಭಾವವನ್ನು ತೋರುತ್ತಿದೆ.

ಕೇಂದ್ರದಿಂದ ರಾಜ್ಯಗಳಿಗೆ 1.65 ಲಕ್ಷ ಕೋಟಿ ಜಿಎಸ್‌ಟಿ ಪರಿಹಾರ: ಕರ್ನಾಟಕಕ್ಕೆ 18,628 ಕೋಟಿ

ಒಂದೆಡೆ, ಕೇಂದ್ರ ಸರಕಾರ ರಾಜ್ಯದ ಈ ಸಂಕಷ್ಟವನ್ನು ಮನಗಂಡು ಜನರನ್ನು ರಕ್ಷಿಸಲು ಕೊಡಬೇಕಾದ ಅಗತ್ಯ ನೆರವನ್ನು ಕೊಡುತ್ತಿಲ್ಲ. ಇನ್ನೊಂದೆಡೆ ಸಂಸದರು ಮತ್ತು ರಾಜ್ಯ ಸರಕಾರ ಕೇಂದ್ರ ಸರಕಾರದ ಮೇಲೆ ಅಗತ್ಯ ಒತ್ತಡವನ್ನು ಹೇರಿ ಅದನ್ನು ಪಡೆಯುತ್ತಿಲ್ಲ.

ತಕ್ಷಣವೇ ರಾಜ್ಯಕ್ಕೆ ನೀಡಬೇಕಾದ ಬರ ಹಾಗೂ ನೆರೆ ಪರಿಹಾರದ ಹಾಗೂ ಇತರೆ ಬಾಕಿ ಮತ್ತು ಜಿ.ಎಸ್.ಟಿ ಪಾಲು ಹಣವನ್ನು ಬಿಡುಗಡೆ ಮಾಡಬೇಕು. ದುಡಿಯುವ ಜನತೆಯ ಸಾಲದ ಬಾಧೆಯನ್ನು ನಿವಾರಿಸಲು ಸಾಲ ಮನ್ನಾ ಮಾಡಬೇಕು ಮತ್ತು ಉದ್ಯೋಗ ಖಾತ್ರಿ ಯೋಜನೆಯ ಮೊತ್ತವನ್ನು ದ್ವಿಗುಣಗೊಳಿಸಲು ಕ್ರಮ ವಹಿಸುವಂತೆ, ಈ ಮೂಲಕ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ದ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಒತ್ತಾಯಿಸುತ್ತದೆ ಎಂದು ಪಕ್ಷದ ಕಾರ್ಯದರ್ಶಿ ಯು. ಬಸವರಾಜ ಹೇಳಿದರು.

English summary
CPI(M) demanded PM Narendra Modi led union government to release GST compensation, grant, dues to Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more