ಪೊಲೀಸ್ ಬೂಟಿನ ಸದ್ದಿನ ಜೊತೆ ಅಂಬಾ ಎನ್ನುವ ಆಕಳ ಕರೆ

2014ರಲ್ಲಿ ತಾಲೂಕಿನ ವಿವಿದೆಡೆ ಗೋ ಪ್ರಕರಣಗಳು ದಾಖಲಾಗಿವೆ. ಧರ್ಮಸ್ಥಳ, ಬೆಳ್ತಂಗಡಿ, ಪುಂಜಾಲಕಟ್ಟೆ, ಬಂಟ್ವಾಳ ಹೀಗೆ ಹಲವು ಕಡೆಗಳಲ್ಲಿ ಪೊಲೀಸರು ಅಕ್ರಮ ಗೋ ಸಾಗಾಟ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಅವುಗಳಲ್ಲಿ ಕೆಲವು ಅಕ್ರಮ ಗೋಸಾಗಾಟವಾದರೆ ಇನ್ನೂ ಕೆಲವು ಗೋಹತ್ಯಾ ಪ್ರಕರಣಗಳು. ಇದರಲ್ಲಿ ಸಿಕ್ಕಿಬಿದ್ದು ನಂತರ ಪಂಚಾಯತಿನಿಂದ ಅನುಮತಿ ಪತ್ರ ತರಿಸಿಕೊಂಡು ಬಿಡಿಸಿಕೊಂಡ ಹೋದ ಪ್ರಕರಣಗಳಿಗೆ ಕಮ್ಮಿ ಏನೂ ಇಲ್ಲ.

ಈ ವರ್ಷ ಗೋವು ಪ್ರಕರಣಕ್ಕೆ ಸಂಬಂಧಿಸಿ ಪುಂಜಾಲಕಟ್ಟೆ ಠಾಣೆಯೊಂದರಲ್ಲೇ ಒಟ್ಟು ಎಂಟು ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲೇ ಅತ್ಯಂತ ಶಾಂತ ಮತ್ತು ಸುಸಜ್ಜಿತ ಠಾಣೆ ಎಂದು ಕರೆಯಲ್ಪಡುತ್ತಿದ್ದ ಪುಂಜಾಲಕಟ್ಟೆ ಠಾಣೆ ಈಗ ಗೋಶಾಲೆಯಂತಾಗಿದೆ. (ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ)

Cow slaughter Sri Rama Sene organized massive rally in Mangaluru on December 15

ಈ ಎಂಟು ಪ್ರಕರಣಗಳಲ್ಲಿ ನಾಲ್ಕು ಅಕ್ರಮ ಗೋಸಾಗಾಟ, ನಾಲ್ಕು ಗೋಹತ್ಯೆ ಪ್ರಕರಣ. ಸಾಗಾಟ ಮಾಡುತ್ತಿದ್ದ ಜಾನುವಾರುಗಳನ್ನು ತಡೆದು ನಿಲ್ಲಿಸಿ ವಶಕ್ಕೆ ಪಡೆದುಕೊಂಡ ಪೊಲೀಸರು ಠಾಣೆಯ ವ್ಯಾಪ್ತಿಯ ವಾಹನದ ಶೆಡ್ ನ‌ಲ್ಲಿ ಕಟ್ಟಿ ಹಾಕುತ್ತಿದ್ದಾರೆ.

ಇನ್ನು ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಗ್ರಾಮದ ಕಳೆಂಜಿಬೈಲು ಮತ್ತು ಹುಣಸೆಕಟ್ಟೆ ಎಂಬಲ್ಲಿ ಅಕ್ರಮ ಗೋಮಾಂಸ ಮಾರಾಟ ಪ್ರಕರಣದಲ್ಲಿ ಸುಮಾರು 80 ಕೆಜಿ, ಮೂಡೂರು ಕೈಲಾರ ಎಂಬಲ್ಲಿ 245 ಕೆಜಿ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೊತೆಗೆ, 25ಕ್ಕೂ ಹೆಚ್ಚು ದನ ಕರುಗಳನ್ನು ಕಟುಕರಿಂದ ಪೊಲೀಸರು ತಪ್ಪಿಸಿದ್ದಾರೆ.

ಸರಕಾರ ಇನ್ನಾದರೂ ಇಂತಹ ಪ್ರಕರಣಕ್ಕೆ ಕಠಿಣ ಕಾನೂನು ರೂಪಿಸಿ, ದಂಧೆ ಕೋರರಿಗೆ ಕಡಿವಾಣ ಹಾಕಿ ಇದರಿಂದ ಪ್ರಚೋದಿಸಲ್ಪಡುವ ಕೋಮುಗಲಭೆಯನ್ನು ನಿಯಂತ್ರಿಸುವ ಕೆಲಸ ಸರಕಾರದಿಂದ ನಡೆಯಬೇಕಿದೆ.

ಜೊತೆಗೆ, ಗೋಹತ್ಯೆ ತಡೆಗೂ ಪ್ರಾಣಿ ದಯಾ ಸಂಘ ಮುಂದಾಗಬೇಕು ಎನ್ನುವುದು ಈ ಭಾಗದ ಸಾರ್ವಜನಿಕರ ಮನವಿ.

ಶ್ರೀರಾಮಸೇನೆ ಪ್ರತಿಭಟನೆ
ಶ್ರೀರಾಮಸೇನೆ, ಸೋಮವಾರ (ಡಿ15) ಮಂಗಳೂರಿನ ಅಂಬೇಡ್ಕರ್ ಸರ್ಕಲಿನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಗೋಹತ್ಯೆ ಮತ್ತು ಅಕ್ರಮ ಗೋಸಾಗಾಟದ ವಿರುದ್ದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+