• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಳೆದ ಒಂದು ವಾರದ ಕೋವಿಡ್ ಅಪ್ಡೇಟ್: ರಾಜ್ಯದ ಸ್ಥಿತಿಗತಿ ಹೀಗಿದೆ!

|
Google Oneindia Kannada News

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಕಮ್ಮಿಯಾಗುತ್ತಿದೆ. ಕೇರಳ ಮತ್ತು ಮಹಾರಾಷ್ಟ್ರದ ಗಡಿಯನ್ನು ಹೊಂದಿರುವ ಜಿಲ್ಲೆಗಳಲ್ಲೂ ಕೋವಿಡ್ ನಿಯಂತ್ರಣದಲ್ಲಿರುವುದು ಸಮಾಧಾನಕಾರದ ವಿಚಾರವಾಗಿದೆ. ಹಾಗಾಗಿ, ರಾಜ್ಯದ ಮೂರು ಜಿಲ್ಲೆಗಳಲ್ಲಿ ವಿಧಿಸಲಾಗಿದ್ದ ವೀಕೆಂಡ್ ಕರ್ಫ್ಯೂವನ್ನು ಸರಕಾರ ಹಿಂದಕ್ಕೆ ಪಡೆದಿದೆ.

ಗಣೇಶ ಚತುರ್ಥಿಗೆ ಇದ್ದ ಹಲವು ನಿರ್ಬಂಧಗಳನ್ನು ಕೊನೆಯ ಕ್ಷಣದಲ್ಲಿ ಭಾರೀ ಸಾರ್ವಜನಿಕರ ವಿರೋಧದ ನಂತರ ಸರಕಾರ ಸಡಿಲಿಸಿದೆ. ಜನರು, ಖರೀದಿಯಲ್ಲಿ ಮುಗಿಬಿದ್ದಿದ್ದು ಗೊತ್ತೇ ಇದೆ. ಇದರ ಪರಿಣಾಮ ಏನು ಎನ್ನುವುದು ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ. ಬೆಂಗಳೂರಿನಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಮೂರು ದಿನದಿಂದ ಐದು ದಿನಗಳವರೆಗೆ ಅನುಮತಿಯನ್ನು ಬಿಬಿಎಂಪಿ ನೀಡಿದೆ.

 ಎಲ್ಲರಿಗೂ ಕೊರೊನಾ ಬೂಸ್ಟರ್ ಡೋಸ್ ಅಗತ್ಯವಿದೆಯೇ? ಬ್ರಿಟನ್‌ ತಜ್ಞರ ಅಭಿಪ್ರಾಯ ಎಲ್ಲರಿಗೂ ಕೊರೊನಾ ಬೂಸ್ಟರ್ ಡೋಸ್ ಅಗತ್ಯವಿದೆಯೇ? ಬ್ರಿಟನ್‌ ತಜ್ಞರ ಅಭಿಪ್ರಾಯ

ಕಳೆದ ಒಂದು ವಾರದ ಅಂದರೆ ಸೆಪ್ಟಂಬರ್ ನಾಲ್ಕರಿಂದ ಹತ್ತರವರೆಗಿನ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಪ್ರಕಾರ, ಕೊರೊನಾ ಎರಡನೇ ಅಲೆ, ಗಡಿ ಜಿಲ್ಲೆಗಳಲ್ಲೂ ಸೇರಿದಂತೆ ಹತೋಟಿಯಲ್ಲಿದೆ. ಹೊಸ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತವಿದ್ದರೂ, ಪಾಸಿಟಿವಿಟಿ ರೇಟ್ ನಿಯಂತ್ರಣದಲ್ಲಿದೆ.

ಪ್ರಮುಖವಾಗಿ, ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಒಂದಕ್ಕಿಂತ ಕಮ್ಮಿಯಿರುವುದು ಸಮಾಧಾನಕಾರವಾದ ವಿಚಾರ. ಜೊತೆಗೆ, ವಾಕ್ಸಿನ್ ಹಾಕಿಸುವುದೂ ವೇಗ ಪಡೆದುಕೊಂಡಿರುವುದು ಸರಕಾರದ ನಿರಾಳತೆಗೆ ಕಾರಣವಾಗಿದೆ. ಸೆಪ್ಟಂಬರ್ 4-10ರ ಅವಧಿಯಲ್ಲಿ ಕೋವಿಡ್ ಅಪ್ಡೇಟ್ ಹೀಗಿದೆ:

ಸಂಪೂರ್ಣ ಕೊರೊನಾ ಲಸಿಕೆ ಪಡೆದವರಲ್ಲಿ ಸಾವಿನ ಪ್ರಮಾಣ 11 ಪಟ್ಟು ಕಡಿಮೆಸಂಪೂರ್ಣ ಕೊರೊನಾ ಲಸಿಕೆ ಪಡೆದವರಲ್ಲಿ ಸಾವಿನ ಪ್ರಮಾಣ 11 ಪಟ್ಟು ಕಡಿಮೆ

 ಬಾಗಲಕೋಟೆ ಜಿಲ್ಲೆಯಲ್ಲಿ ಒಂದು ವಾರದಿಂದ ಹೊಸ ಸೋಂಕಿತರ ಸಂಖ್ಯೆ ಸೊನ್ನೆ

ಬಾಗಲಕೋಟೆ ಜಿಲ್ಲೆಯಲ್ಲಿ ಒಂದು ವಾರದಿಂದ ಹೊಸ ಸೋಂಕಿತರ ಸಂಖ್ಯೆ ಸೊನ್ನೆ

ಬಾಗಲಕೋಟೆ ಜಿಲ್ಲೆಯಲ್ಲಿ ಸತತವಾಗಿ ಒಂದು ವಾರದಿಂದ (ಒಂದು ದಿನ ಹೊರತು ಪಡಿಸಿ) ಹೊಸ ಸೋಂಕಿತರ ಸಂಖ್ಯೆ ಸೊನ್ನೆ. ಇನ್ನು, ಬೀದರ್, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ವಿಜಯಪುರ, ಯಾದಗೀರಿ ಜಿಲ್ಲೆಗಳಲ್ಲಿ ಹೊಸ ಸೋಂಕಿತರ ಸಂಖ್ಯೆ ಎರಡಂಕಿಯನ್ನು ದಾಟಿಲ್ಲ. ಅದರಲ್ಲೂ, ಹಾವೇರಿ, ಗದಗ ಮುಂತಾದ ಜಿಲ್ಲೆಗಳಲ್ಲಿ ವಾರದ ಮೂರ್ನಾಲ್ಕು ದಿನ ಹೊಸ ಸೋಂಕಿತರ ಸಂಖ್ಯೆ ವರದಿಯಾಗಿಲ್ಲ.

ರಾಜ್ಯದ ಮೂರು ಜಿಲ್ಲೆಗಳಲ್ಲಿ ಮಾತ್ರ ಕೋವಿಡ್ ಹೊಸ ಸೋಂಕಿತರ ಸಂಖ್ಯೆ ಮೂರಂಕಿಯನ್ನು ದಾಟುತ್ತಿದೆ. ಆದರೂ, ಒಂದು ವಾರದ ಹಿಂದಿನ ಪರಿಸ್ಥಿತಿಗೆ ಅವಲೋಕಿಸಿದರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

 ಬೆಂಗಳೂರಿನಲ್ಲಿ ಕಳೆದ ವಾರದಿಂದ ಹೊಸ ಸೋಂಕಿತರ ಸಂಖ್ಯೆ ಸರಾಸರಿ ಮುನ್ನೂರು

ಬೆಂಗಳೂರಿನಲ್ಲಿ ಕಳೆದ ವಾರದಿಂದ ಹೊಸ ಸೋಂಕಿತರ ಸಂಖ್ಯೆ ಸರಾಸರಿ ಮುನ್ನೂರು

ಇನ್ನು, ಬೆಂಗಳೂರು ನಗರದಲ್ಲಿ ಕಳೆದ ವಾರದಿಂದ ಹೊಸ ಸೋಂಕಿತರ ಸಂಖ್ಯೆ ಸರಾಸರಿ ಮುನ್ನೂರ ಗಡಿಯಲ್ಲಿದೆ. ದಕ್ಷಿಣ ಕನ್ನಡದಲ್ಲಿ ಇನ್ನೂರರ ಗಡಿಯಲ್ಲಿದೆ. ಜಿಲ್ಲಾಡಳಿತ ವಿಧಿಸಿದ ಕೊರೊನಾ ರೂಲ್ಸುಗಳು ಇಲ್ಲಿ ವರ್ಕೌಟ್ ಆದಂತೆ ಕಾಣಿಸುತ್ತಿದೆ. ಉಡುಪಿಯಲ್ಲಿ ದೈನಂದಿನ ಸೋಂಕಿತರ ಸಂಖ್ಯೆ 100-150ರ ಮಧ್ಯದಲ್ಲಿದೆ. ಹಾಸನ ಜಿಲ್ಲೆಯಲ್ಲೂ ಕೊರೊನಾ ನಿಯಂತ್ರಣದಲ್ಲಿದೆ. ಅಲ್ಲಿ, ಸೆಪ್ಟಂಬರ್ ಹತ್ತರಂದು 61 ಹೊಸ ಕೇಸುಗಳು ದಾಖಲಾಗಿದ್ದವು.

 ಪಾಸಿಟಿವಿಟಿ ರೇಟ್ ನಿಯಂತ್ರಣದಲ್ಲಿರುವುದು ಸಮಾಧಾನಕಾರ ವಿಚಾರ

ಪಾಸಿಟಿವಿಟಿ ರೇಟ್ ನಿಯಂತ್ರಣದಲ್ಲಿರುವುದು ಸಮಾಧಾನಕಾರ ವಿಚಾರ

ಕಳೆದ ಒಂದು ವಾರದ ಪಾಸಿಟಿವಿಟಿ ರೇಟ್ ಹೀಗಿದೆ:
ಸೆ 4: ಶೇ. 0.61%
ಸೆ 5. ಶೇ. 0.71%
ಸೆ 6. ಶೇ. 0.69%
ಸೆ 7. ಶೇ. 0.71%
ಸೆ 8. ಶೇ. 0.64%
ಸೆ 9. ಶೇ. 0.63%
ಸೆ 10. ಶೇ. 0.57%

 ಕಳೆದ ಒಂದು ವಾರದ ಕೋವಿಡ್ ಅಪ್ಡೇಟ್: ರಾಜ್ಯದ ಸ್ಥಿತಿಗತಿಯ ಮಾಹಿತಿ

ಕಳೆದ ಒಂದು ವಾರದ ಕೋವಿಡ್ ಅಪ್ಡೇಟ್: ರಾಜ್ಯದ ಸ್ಥಿತಿಗತಿಯ ಮಾಹಿತಿ

ರಾಜ್ಯದಲ್ಲಿನ ಒಂದು ವಾರದ ಸಕ್ರಿಯ ಪ್ರಕರಣದ ಡೇಟಾ ಹೀಗಿದೆ:
ಸೆ 4: 17, 746
ಸೆ 5. 17,501
ಸೆ 6. 17, 386

ಸೆ 7. 17,432
ಸೆ 8. 17,058
ಸೆ 9. 16, 992
ಸೆ 10. 17,028

English summary
Coronavirus Cases in Karnataka: Here is the last one week update of Covid cases in the state. Take a look
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X