ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಕೊರೊನಾ ಉಲ್ಬಣ: ಸಾವುಗಳನ್ನು, ಡೇಟಾವನ್ನು ಮರೆಮಾಚುತ್ತಿದೆ ಎಂದ ವಿಶ್ವ ಆರೋಗ್ಯ ಸಂಸ್ಥೆ

|
Google Oneindia Kannada News

ನವದೆಹಲಿ, ಜ. 05: ಚೀನಾ ಕೋವಿಡ್ ಸಾವುಗಳು ಮತ್ತು ಕೊರೊನಾ ತೀವ್ರತೆ ಬಗ್ಗೆ ಸಾಕಷ್ಟು ಮಾಹಿತಿ ನೀಡಿಲ್ಲ, ನಿಜವಾದ ಡೇಟಾವನ್ನು ಮರೆಮಾಚುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆರೋಪಿಸಿದೆ.

ಚೀನಾದಲ್ಲಿ ಕೊರೊನಾ ವೈರಸ್ ಏಕಾಏಕಿ ಏರಿಕೆಯಾಗಿದ್ದು, ಸಾವಿನ ನೈಜ ಸಂಖ್ಯೆಯನ್ನು ಚೀನಾ ಕಡಿಮೆ ಮಾಡಿ ತಿಳಿಸುತ್ತಿದೆ ಎಂದು ಆರೋಪಿಸಿದೆ. ತನ್ನ ಗಡಿಯೊಳಗಿನ ಕೋವಿಡ್ ಉಲ್ಬಣದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಒದಗಿಸಿಲ್ಲ ಎಂಬ ಟೀಕೆಗಳನ್ನು ಚೀನಾ ಎದುರಿಸುತ್ತಿದೆ.

ಹೈರಿಸ್ಕ್ ದೇಶಗಳಿಂದ ಬರುವವರ ಹೋಮ್ ಕ್ವಾರಂಟೈನ್ ಆದೇಶ ಹಿಂಪಡೆದ ಸರ್ಕಾರಹೈರಿಸ್ಕ್ ದೇಶಗಳಿಂದ ಬರುವವರ ಹೋಮ್ ಕ್ವಾರಂಟೈನ್ ಆದೇಶ ಹಿಂಪಡೆದ ಸರ್ಕಾರ

ಆದರೆ, ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೊರೊನಾವೈರಸ್ ಡೇಟಾವನ್ನು ಹಂಚಿಕೊಳ್ಳಲು ಚೀನಾ ಮುಕ್ತವಾಗಿದೆ ಎಂದು ಹೇಳಿಕೊಂಡಿದೆ.

Covid surge: China Hiding Covid Deaths, Concealing Data- WHO

ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳಲ್ಲಿನ ಡೇಟಾವನ್ನು ಉಲ್ಲೇಖಿಸಿ, "ಕೋವಿಡ್ ಪ್ರಾರಂಭವಾದಾಗಿನಿಂದ ಚೀನಾವು ಸರಿಯಾದ ಮಾಹಿತಿ ಮತ್ತು ಡೇಟಾವನ್ನು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಮುಕ್ತ ಮತ್ತು ಪಾರದರ್ಶಕ ರೀತಿಯಲ್ಲಿ ಹಂಚಿಕೊಂಡಿದೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಗುರುವಾರ ಬೀಜಿಂಗ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆರೋಪಗಳ ಬೆನ್ನಲ್ಲೆ, "ವಿಶ್ವ ಆರೋಗ್ಯ ಸಂಸ್ಥೆಯು ವಿಜ್ಞಾನ-ಆಧಾರಿತ, ವಸ್ತುನಿಷ್ಠ ಮತ್ತು ನ್ಯಾಯಯುತವಾಗಿ ನಡೆದುಕೊಳ್ಳುತ್ತದೆ ಮತ್ತು ಜಾಗತಿಕವಾಗಿ ಸಾಂಕ್ರಾಮಿಕ ರೋಗವನ್ನು ಪರಿಹರಿಸುವಲ್ಲಿ ಸಕಾರಾತ್ಮಕ ಪಾತ್ರವನ್ನು ವಹಿಸುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಹೇಳಿದ್ದಾರೆ.

ಚೀನಾ ತನ್ನ ಕೋವಿಡ್ ಮಾರ್ಗಸೂಚಿಗಳನ್ನು ಹಿಂತೆಗೆದುಕೊಂಡ ನಂತರ ಏಕಾಏಕಿ ಕೊರೊನಾ ಪ್ರಕರಣಗಳು ಏರಿಕೆಯಾಗಿದೆ. ಈ ಬಗ್ಗೆ ಚೀನಾ ಹೆಚ್ಚು ಪಾರದರ್ಶಕತೆಯಿಂದ ವರ್ತಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

Covid surge: China Hiding Covid Deaths, Concealing Data- WHO

ಆಸ್ಪತ್ರೆಗಳ ಕುರಿತು ತ್ವರಿತ, ನಿಯಮಿತ ಮತ್ತು ವಿಶ್ವಾಸಾರ್ಹ ಡೇಟಾವನ್ನು ವಿರ್ಶವ ಆರೋಗ್ಯ ಸಂಸ್ಥೆ ಬಯಸುತ್ತದೆ, ಜೊತೆಗೆ ಹೆಚ್ಚು ಸಮಗ್ರವಾದ ನೈಜ ಡೇಟಾವನ್ನು ನೀಡಬೇಕು ಎಂದು ಡಬ್ಲೂಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.

ಡಿಸೆಂಬರ್ 9 ರಿಂದ ಚೀನಾ ಡಬ್ಲೂಎಚ್‌ಒನೊಂದಿಗೆ ಮೂರು ತಾಂತ್ರಿಕ ಸಭೆಗಳನ್ನು ನಡೆಸಿದೆ. ಇನ್ನೊಂದು ಗುರುವಾರ ನಡೆಯಲಿದೆ ಎಂದು ಮಾವೋ ನಿಂಗ್ ಹೇಳಿದ್ದಾರೆ.

English summary
The World Health Organization has criticized China for not providing enough information on Covid-19 deaths and the severity of the corona virus, obfuscating the data. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X