ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣ ಶೇ.73.9ರಷ್ಟು ಇಳಿಕೆ

|
Google Oneindia Kannada News

ಬೆಂಗಳೂರು, ಮೇ 1: ರಾಜ್ಯದಲ್ಲಿ ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣ ಶೇ.73.9ರಷ್ಟು ಇಳಿಕೆ ಕಂಡಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ ಶೇ.98ರಷ್ಟಿದ್ದ ರಾಜ್ಯದ ಚೇತರಿಕೆ ಪ್ರಮಾಣ ಏಪ್ರಿಲ್ 30ರ ವೇಳೆಗೆ ಶೇ.73.9ಕ್ಕೆ ಇಳಿಕೆಯಾಗಿದೆ.

ಶೇ.83.7 (37,99,266) ಚೇತರಿಕೆ ಪ್ರಮಾಣದೊಂದಿಗೆ ದೇಶದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ನಂತರ ಸ್ಥಾನವನ್ನು ಶೇ.80.3 (12,61,801) ಕೇರಳ ಪಡೆದುಕೊಂಡಿದೆ.

ಸ್ಥಳೀಯ ತಪ್ಪುಗಳಿಂದ ಸರ್ಕಾರಕ್ಕೆ ಮುಜುಗರ: ಸಚಿವ ಸುಧಾಕರ್ ಕಿಡಿಸ್ಥಳೀಯ ತಪ್ಪುಗಳಿಂದ ಸರ್ಕಾರಕ್ಕೆ ಮುಜುಗರ: ಸಚಿವ ಸುಧಾಕರ್ ಕಿಡಿ

ಈ ಹಿಂದೆ ಚೇತರಿಕೆ ಪ್ರಮಾಣದಲ್ಲಿ ಇತರೆ ರಾಜ್ಯಗಳನ್ನು ಹಿಂದಿಕ್ಕಿದ್ದ ಕರ್ನಾಟಕ ದೇಶದಲ್ಲಿಯೇ ಮೂರನೇ ಸ್ಥಾನವನ್ನು ಪಡೆದುಕೊಂಡಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಇತರೆ ರಾಜ್ಯಗಳಿಗಿಂತಲೂ ಹಿಂದೆ ಉಳಿದಿದೆ.

Karnataka’s Covid Recovery Rate Slides To 73.9 Percent

ಸಾಕಷ್ಟು ಜನರಿಗೆ ಆರೋಗ್ಯ ಸೌಲಭ್ಯಗಳು ಲಭ್ಯವಾಗುತ್ತಿಲ್ಲ. ಇದರಿಂತ ರಾಜ್ಯದಲ್ಲಿ ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ. ಕೊರೊನಾ ಎರಡನೇ ಅಲೆಯನ್ನು ಇತರೆ ರಾಷ್ಟ್ರಗಳು ಯಾವ ರೀತಿ ನಿಭಾಯಿಸುತ್ತಿವೆ ಎಂಬುದನ್ನೂ ನೋಡಬೇಕಿದೆ. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚೆಚ್ಚು ಬಂಡವಾಳ ಹೂಡಬೇಕೆಂಬುದನ್ನು ತಿಳಿಸಲು ಪ್ರಸ್ತುತ ಪರಿಸ್ಥಿತಿಯೇ ದೊಡ್ಡ ಸಂದೇಶವಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ತಮಿಳುನಾಡು ಶೇ.88.9, ದೆಹಲಿ ಶೇ.89.9, ಆಂಧ್ರಪ್ರದೇಶ ಶೇ.88.1, ಪಶ್ಚಿಮ ಬಂಗಾಳ ಶೇ.84.9, ಛತ್ತೀಸ್‌ಗಢ ಶೇ.82.3, ಉತ್ತರಪ್ರದೇಶದ ಶೇ.73.6ರಷ್ಟು ಚೇತರಿಕೆ ಪ್ರಮಾಣವನ್ನು ಹೊಂದಿದೆ.

ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವುದು, ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದವರನ್ನು ಶೀಘ್ರಗತಿಯಲ್ಲಿ ಹುಡುಕಿ ಚಿಕಿತ್ಸೆ ನೀಡುವುದರಿಂತ ಚೇತರಿಕೆ ಪ್ರಮಾಣ ಹೆಚ್ಚಳವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ರಾಜ್ಯದಲ್ಲಿ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಸಾಕಷ್ಟು ಜನರು ಶೀಘ್ರಗತಿಯಲ್ಲಿ ಗಂಭೀರ ಸ್ಥಿತಿಗೆ ತಲುಪುತ್ತಿದ್ದಾರೆ. ಇದರಿಂದ ಗುಣಮುಖರಾಗಲು ಕಾಲಾವಕಾಶ ತೆಗೆದುಕೊಳ್ಳುತ್ತಿದೆ. ಹೀಗಾಗಿ ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಕಡಿಮೆಯಾಗುತ್ತಿದೆ.

Recommended Video

ಆಸ್ಟ್ರೇಲಿಯ ಸರ್ಕಾರ ಕೊಟ್ಟಿದ್ದೆ ಖಡಕ್ ಎಚ್ಚರಿಕೆ !! | Oneindia Kannada

English summary
Back in February 2021, Karnataka had touched a recovery rate of 98 per cent, with many districts achieving even 99 per cent. However, with the second wave of the pandemic bringing an exponential rise in Covid-19 cases, as of April 30, the recovery rate has fallen to 73.9 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X