ಕರ್ನಾಟಕದಲ್ಲಿ 4 ಲಕ್ಷದ ಗಡಿ ದಾಟಿದ ಕೋವಿಡ್ ಸೋಂಕು
ಬೆಂಗಳೂರು, ಸೆಪ್ಟೆಂಬರ್ 08: ಕರ್ನಾಟಕದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 4 ಲಕ್ಷದ ಗಡಿ ದಾಟಿದೆ. ಸೋಮವಾರ ಒಂದೇ ದಿನ ರಾಜ್ಯದಲ್ಲಿ 5,773 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.
Recommended Video
ಭಾರತದಲ್ಲಿ ಕೋವಿಡ್ ಸೋಂಕಿತರು ಹೆಚ್ಚು ಇರುವ 4ನೇ ರಾಜ್ಯ ಕರ್ನಾಟಕವಾಗಿದೆ. ಸೋಮವಾರ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 4,04,324. ರಾಜ್ಯದಲ್ಲಿ ಇದುವರೆಗೂ 6,534 ಜನರು ಮೃತಪಟ್ಟಿದ್ದಾರೆ.
ಮಾರ್ಚ್ 8ರಂದು ಕರ್ನಾಟಕದಲ್ಲಿ ಮೊದಲ ಕೋವಿಡ್ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್ 7ರಂದು ಒಟ್ಟು ಸೋಂಕಿತರ ಸಂಖ್ಯೆ 4 ಲಕ್ಷದ ಗಡಿಯನ್ನು ದಾಟಿದೆ. ಬೆಂಗಳೂರು ನಗರದಲ್ಲಿ ಹೆಚ್ಚು ಸೋಂಕಿತರು ಇದ್ದು, ಒಟ್ಟು ಸೋಂಕಿತರ ಸಂಖ್ಯೆ 1,50,523.
ಕರ್ನಾಟಕದಲ್ಲಿ ಸೋಮವಾರ 8015 ಜನರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಗುಣಮುಖರಾದವರ ಸಂಖ್ಯೆ 300770. ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 97,0001.

ಕರ್ನಾಟಕದ ಅಂಕಿ ಅಂಶಗಳು
ಕರ್ನಾಟಕದ ಆರೋಗ್ಯ ಇಲಾಖೆ ಮಾಹಿತಿಯಂತೆ ರಾಜ್ಯದಲ್ಲಿ ಮೊದಲ ಕೋವಿಡ್ ಪ್ರಕರಣ ದಾಖಲಾಗಿದ್ದು ಮಾರ್ಚ್ 8ರಂದು. ಜುಲೈ 27ರಂದು ಒಂದು ಲಕ್ಷದ ಗಡಿ ದಾಟಿತು. ಆಗಸ್ಟ್ 13ರಂದು 2 ಲಕ್ಷದ ಗಡಿ ದಾಟಿತು. ಆಗಸ್ಟ್ 27ರಂದು ಮೂರು ಲಕ್ಷ ದಾಟಿತ್ತು.

11 ದಿನದಲ್ಲಿ 1 ಲಕ್ಷ ಪ್ರಕರಣ
ಜುಲೈ 27ರಂದು ರಾಜ್ಯದಲ್ಲಿ ಕೋವಿಡ್ ಪ್ರಕರಣ 1 ಲಕ್ಷದ ಗಡಿ ದಾಟಿತು. ಆಗಸ್ಟ್ 27ರಂದು ಮೂರು ಲಕ್ಷದ ಗಡಿ ದಾಟಿತು. ಬಳಿಕ ಪ್ರತಿದಿನ ಸುಮಾರು 7 ಸಾವಿರ ಪ್ರಕರಣಗಳು ದಾಖಲಾಗಿವೆ. ಹನ್ನೊಂದು ದಿನದಲ್ಲಿ 1 ಲಕ್ಷ ಪ್ರಕರಣಗಳು ದಾಖಲಾಗಿವೆ.

ಆತಂಕ ಮೂಡಿಸಿದ ಸಾವಿನ ಸಂಖ್ಯೆ
ಸೋಮವಾರ ಒಂದೇ ದಿನ ರಾಜ್ಯದಲ್ಲಿ 141 ಜನರು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 6534ಕ್ಕೆ ಏರಿಕೆಯಾಗಿದೆ. ಜುಲೈ 27 ರಿಂದ ಆಗಸ್ಟ್ 27ರ ತನಕ ರಾಜ್ಯದಲ್ಲಿ 3213 ಜನರು ಮೃತಪಟ್ಟಿದ್ದಾರೆ.

ಆರು ತಿಂಗಳು ಕಳೆದಿದೆ
ಮಾರ್ಚ್ 8ರಿಂದ ಸೆಪ್ಟೆಂಬರ್ 8. ಕರ್ನಾಟಕಕ್ಕೆ ಕೋವಿಡ್ ಕಾಲಿಟ್ಟು 6 ತಿಂಗಳು ಕಳೆದಿದೆ. 4,04,324 ಜನರಿಗೆ ಸೋಂಕು ತಗುಲಿದೆ. 300770 ಜನರು ಗುಣಮುಖರಾಗಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 97,001.












Click it and Unblock the Notifications