• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ನಾಗಾಲೋಟ: ಕೈಮುಗಿದು ನಿಮ್ಹಾನ್ಸ್ ವೈದ್ಯರ ಮನವಿ

|

ಕೊರೊನಾ ವೈರಸಿನ ಎರಡನೇ ಅಲೆ ತೀವ್ರವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ವೈದ್ಯರೊಬ್ಬರು ಮಾಧ್ಯಮ ಲೋಕಕ್ಕೆ ಮನವಿಯೊಂದನ್ನು ಮಾಡಿದ್ದಾರೆ.

ಮನೋಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿರುವ ಡಾ.ಸುರೇಶ್ ಬುಡಾಮಟ್ ವಿಡಿಯೋ ಮೂಲಕ, ಕೊರೊನಾದ ಈ ತುರ್ತು ಆರೋಗ್ಯ ಎಮರ್ಜೆನ್ಸಿಯ ವೇಳೆ ಸಂವಿಧಾನದ ನಾಲ್ಕನೇ ರಂಗವಾಗಿರುವ ಮಾಧ್ಯಮಗಳ ಪಾತ್ರದ ಬಗ್ಗೆ ವಿವರಿಸಿದ್ದಾರೆ.

ಕೊರೊನಾ ನಿಭಾಯಿಸಲು ಸರಕಾರಕ್ಕೆ ಎಚ್ಡಿಕೆ ಕೊಟ್ಟ 10 ಸಲಹೆಗಳುಕೊರೊನಾ ನಿಭಾಯಿಸಲು ಸರಕಾರಕ್ಕೆ ಎಚ್ಡಿಕೆ ಕೊಟ್ಟ 10 ಸಲಹೆಗಳು

ಡಾ.ಸುರೇಶ್ ಅವರ ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ನನ್ನ ಶಿಕ್ಷಕರ ಪರವಾಗಿ ನಾನು ಈ ವಿಡಿಯೋ ಸಂದೇಶವನ್ನು ಹೊತ್ತು ತರುತ್ತಿದ್ದೇನೆ ಎಂದು ಹೇಳಿರುವ ಡಾ.ಸುರೇಶ್, ಮಾಧ್ಯಮಗಳು ನೆಗೆಟೀವ್ ವರದಿ ಮಾಡುವುದನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು, ಯಾಕೆಂದರೆ ನಮ್ಮ ದೇಶದಲ್ಲಿ ಮಾಧ್ಯಮ ತುಂಬಾ ಪ್ರಭಲವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಸುದ್ದಿಯಿಂದ ಜನರು ಭಯಭೀತರಾಗುತ್ತಿದ್ದಾರೆ ಎಂದು ಡಾ.ಸುರೇಶ್ ಬೇಸರ ವ್ಯಕ್ತ ಪಡಿಸಿದ್ದಾರೆ. ಮುಂದೆ ಓದಿ..

ಕೊರೊನಾ ಬಿಕ್ಕಟ್ಟು: ಸಿಎಂ ಯಡಿಯೂರಪ್ಪನವರಿಗೆ ಜನತೆಯ ತುರ್ತು ಆಗ್ರಹ ಪತ್ರಕೊರೊನಾ ಬಿಕ್ಕಟ್ಟು: ಸಿಎಂ ಯಡಿಯೂರಪ್ಪನವರಿಗೆ ಜನತೆಯ ತುರ್ತು ಆಗ್ರಹ ಪತ್ರ

 ಮನೋಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿರುವ ಡಾ.ಸುರೇಶ್ ಬುಡಾಮಟ್

ಮನೋಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿರುವ ಡಾ.ಸುರೇಶ್ ಬುಡಾಮಟ್

"ಮಾಧ್ಯಮಗಳು ಬರೀ ಕೊರೊನಾ ಸಾವು, ಹೆಣಗಳ ರಾಶಿ, ಸ್ಮಶಾನದ ದೃಶ್ಯಗಳು, ಜನರ ಆಕ್ರಂದನವನ್ನೇ ವೈಭವೀಕರಿಸಿ ತೋರಿಸುತ್ತಿವೆ. ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಅರಿಯಬೇಕು. ಮಾಧ್ಯಮಗಳು ಸಾರ್ವಜನಿಕರಲ್ಲಿ ದಿಗಿಲು ಹುಟ್ಟಿಸಬಾರದು. ಇದರಿಂದಾಗಿಯೇ ಒಂದು ಸಣ್ಣ ಕೆಮ್ಮು ಬಂದರೂ ಜನರು ಹೆದರುತ್ತಿದ್ದಾರೆ. ಆಸ್ಪತ್ರೆಗೆ ದೌಡಾಯಿಸುತ್ತಾರೆ, ಆಕ್ಸಿಜನ್ ಖರೀದಿಸಲು ಮುಗಿಬೀಳುತ್ತಿದ್ದಾರೆ"ಎಂದು ಡಾ.ಸುರೇಶ್ ಬುಡಾಮಟ್ ಹೇಳಿದ್ದಾರೆ.

 ಆಸ್ಪತ್ರೆಯಲ್ಲಿ ಹಾಸಿಗೆ ಬ್ಲಾಕ್ ಮಾಡಲು ಮುಂದಾಗುತ್ತಾರೆ

ಆಸ್ಪತ್ರೆಯಲ್ಲಿ ಹಾಸಿಗೆ ಬ್ಲಾಕ್ ಮಾಡಲು ಮುಂದಾಗುತ್ತಾರೆ

"ಆಸ್ಪತ್ರೆಯಲ್ಲಿ ಹಾಸಿಗೆ ಬ್ಲಾಕ್ ಮಾಡಲು ಮುಂದಾಗುತ್ತಾರೆ. ನನ್ನ ಪತ್ರಕರ್ತ ಸ್ನೇಹಿತರೊಬ್ಬರ ತಂದೆಗೆ ಪಾಸಿಟೀವ್ ಬಂದಿತ್ತು, ಆದರೆ ಆಮ್ಲಜನಕದ ಪ್ರಮಾಣ ಸರಿಯಾಗಿಯೇ ಇತ್ತು. ಮನೆಯಲ್ಲೇ ಔಷಧಿ ತೆಗೆದುಕೊಂಡರೆ ಸಾಕು ಎಂದು ಹೇಳಿದರೂ, ಎರಡು ಬೆಡ್ ಬ್ಲಾಕ್ ಮಾಡಿದ್ದರು. ಮಾಧ್ಯಮಗಳ ವರದಿಯನ್ನುನೋಡಿ ನೋಡಿ ಪತ್ರಕರ್ತರಾದ ಅವರೇ ಭಯ ಪಟ್ಟಿದ್ದರು. ಇನ್ನು ಸಾಮಾನ್ಯರ ಪಾಡೇನು" ಎಂದು ಡಾ.ಸುರೇಶ್ ಪ್ರಶ್ನಿಸಿದ್ದಾರೆ. (ಚಿತ್ರ:ಪಿಟಿಐ)

 ಸತ್ಯಾಂಶವನ್ನು ಜನರಿಗೆ ತಲುಪಿಸುವ ಹೊಣೆ ಮಾಧ್ಯಮದವರ ಮೇಲೆ ಇದೆ

ಸತ್ಯಾಂಶವನ್ನು ಜನರಿಗೆ ತಲುಪಿಸುವ ಹೊಣೆ ಮಾಧ್ಯಮದವರ ಮೇಲೆ ಇದೆ

"ಮಾಧ್ಯಮಗಳ ಈ ರೀತಿಯ ವರದಿಯಿಂದ ಯಾರಿಗೂ ಉಪಯೋಗವಾಗುವುದಿಲ್ಲ. ಸತ್ಯಾಂಶವನ್ನು ಜನರಿಗೆ ತಲುಪಿಸುವ ಹೊಣೆ ಮಾಧ್ಯಮದವರ ಮೇಲೆ ಇದೆ ಎನ್ನುವುದು ಒಪ್ಪಿಕೊಳ್ಳುವ ಮಾತು, ಆದರೆ ಉತ್ತಮ ಅಂಕಿಅಂಶದೊಂದಿಗೆ ಜನರ ಮುಂದೆ ಬನ್ನಿ. ಶೇ. 90ರಷ್ಟು ಸೋಂಕಿತರು ಮನೆಯಿಂದಲೇ ಗುಣಮುಖರಾಗಬಹುದು. ಕೆಲವೇ ಕೆಲವರಿಗೆ ಮಾತ್ರ ಐಸಿಯು ಬೇಕಾಗಿರುತ್ತದೆ"ಎಂದು ಡಾ.ಸುರೇಶ್ ಹೇಳಿದ್ದಾರೆ. (ಚಿತ್ರ:ಪಿಟಿಐ)

  Covid 19 ಪರಿಸ್ಥಿತಿಯಲ್ಲು Tax ಬರೇ ಎಳಿತಿರೋ Nirmala Sitharaman | Oneindia Kannada
   ಸ್ಮಶಾನದ ದೃಶ್ಯವನ್ನು ತೋರಿಸುತ್ತಾ ಹೋಗುವುದು ಎಷ್ಟು ಸರಿ

  ಸ್ಮಶಾನದ ದೃಶ್ಯವನ್ನು ತೋರಿಸುತ್ತಾ ಹೋಗುವುದು ಎಷ್ಟು ಸರಿ

  ಇಂತಹ ವರದಿಯನ್ನು ಮತ್ತೆಮತ್ತೆ ಜನರಿಗೆ ಮನದಟ್ಟು ಮಾಡಬೇಕೇ ವಿನಃ, ಸ್ಮಶಾನದ ದೃಶ್ಯವನ್ನು ತೋರಿಸುತ್ತಾ ಹೋಗುವುದು ಎಷ್ಟು ಸರಿ.ಕೊರೊನಾ ವೈರಸಿಗಿಂತ ಜಾಸ್ತಿ ವೇಗವಾಗಿ ಹರಡುತ್ತಿರುವುದು ಪ್ಯಾನಿಕ್. ಈ ಭಯವೇ ಜನರ ದಿಕ್ಕುತಪ್ಪಿಸುತ್ತಿದೆ, ಆರೋಗ್ಯಕ್ಕೆ ತೊಂದರ ಮಾಡುತ್ತಿವೆ, ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ, ಹೆಚ್ಚುಹೆಚ್ಚು ಪಾಸಿಟೀವ್ ಸುದ್ದಿಯನ್ನು ಕೊಡಿ" ಎಂದು ಡಾ.ಸುರೇಶ್ ತಮ್ಮ ತಂಡದ ಪರವಾಗಿ ಮಾಧ್ಯಮ ಲೋಕಕ್ಕೆ ಮನವಿ ಮಾಡಿದ್ದಾರೆ. (ಚಿತ್ರ:ಪಿಟಿಐ)

  English summary
  Covid-19 Crisis in Karnataka: NIMHANS Doctor request Media.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X