ದೇವಾಲಯದ ಮೇಲೂ ಕೊರೊನಾ ವಕ್ರದೃಷ್ಠಿ: ಅಲ್ಲೂ ಕೋಟಿ ಕೋಟಿ ನಷ್ಟ!

ಬೆಂಗಳೂರು, ಮೇ 15: ಕೊರೊನಾ ವೈರಸ್ ದೇವಸ್ಥಾನವನ್ನೂ ಬಿಟ್ಟಿಲ್ಲ. ನಾಡಿನ ಎಲ್ಲಾ ದೇವಾಲಯಗಳು ಬಂದ್ ಆಗಿ ಸುಮಾರು ಐವತ್ತು ದಿನದ ಮೇಲಾದವು.

Recommended Video

      ನಿಮ್ಮ ಕೈ ಬೆರಳುಗಳು ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತೆ ನೋಡಿ | Palmistry | Oneindia Kannada

      ಕೊರೊನಾ ಎಂತಹ ಟೈಂನಲ್ಲಿ ವಕ್ಕರಿಸಿದೆ ಎಂದರೆ, ಅದೂ ಬೇಸಿಗೆಯಲ್ಲಿ. ಮಾರ್ಚ್ ನಿಂದ ಮೇ ತಿಂಗಳು ಶುಭ ಸಮಾರಂಭ ಹೆಚ್ಚಾಗಿ ನಡೆಯುವಂತಹ ಸಮಯ. ಇನ್ನೂ, ಈ ಸಮಯದಲ್ಲಿ ದೇವಾಲಯಗಳಲ್ಲಿ ವಿಪರೀತ ಜನದಟ್ಟಣಿ ಇರುವಂತಹ ಸಮಯ ಕೂಡಾ..

      ಆದರೆ, ಕೊರೊನಾ ಎಲ್ಲದಕ್ಕೂ ಬ್ರೇಕ್ ಹಾಕಿದೆ. ನಾಡಿನ ಎಲ್ಲಾ ದೇವಾಲಯಗಳೂ ಭಕ್ತಾದಿಗಳಿಗೆ ಬಾಗಿಲು ಮುಚ್ಚಿವೆ. ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆ (ಮುಜರಾಯಿ) ವ್ಯಾಪ್ತಿಯಲ್ಲಿ ಬರುವ ಎಲ್ಲಾ ವರ್ಗದ ದೇವಾಲಗಳಿಗೆ, ಕಳೆದ ಐವತ್ತು ದಿನಗಳಿಂದ ಆಗಿರುವ ನಷ್ಟ ಸುಮಾರು ನೂರು ಕೋಟಿಯ ಮೇಲೆ.

      Coronaviurs Effect:Temples Shuts, Huge Loss For Karnataka Endowment Department

      ಇದರಿಂದ ದೇವಾಲಯದ ಆದಾಯವನ್ನೇ ನಂಬಿಕೊಂಡಿದ್ದಂತಹ ಮುಜರಾಯಿ ಇಲಾಖೆ ಏನೂ ಮಾಡಲಾಗದ ಸ್ಥಿತಿಯಲ್ಲಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಕನಸಿನ 'ಸಪ್ತಪದಿ' ಸರಳ ಸಾಮೂಹಿಕ ವಿವಾಹ ಯೋಜನೆಯೂ ಅನಿರ್ದಿಷ್ಟಾವದಿಗೆ ಮುಂದಕ್ಕೆ ಹಾಕಲಾಗಿದೆ.

      ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳನ್ನು, ಆಯಾಯ ದೇಗುಲದ ಆದಾಯದ ಮೇಲೆ ವರ್ಗದ ಮೇಲೆ ವಿಂಗಡಿಸಲಾಗಿದೆ. ಎ ವರ್ಗದ ದೇವಾಲಯಗಳಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು ಮೂವತ್ತು ಕೋಟಿ ಆದಾಯ ಬಂದಿತ್ತು.

      ಇನ್ನು ಬಿ ವರ್ಗದ ದೇವಾಲಯಗಳಲ್ಲಿ ಸುಮಾರು 36 ಕೋಟಿ ಮತ್ತು ಸಿ ವರ್ಗದ ದೇವಾಲಯಗಳಲ್ಲೂ ಅಷ್ಟೇ ಪ್ರಮಾಣದ ಆದಾಯ ಕಳೆದ ವರ್ಷದ ಈ ಸಮಯದಲ್ಲಿ ಬಂದಿತ್ತು. ಹಾಗಾಗಿ, ಕೊರೊನಾದಿಂದ ಇದುವರೆಗೆ ಮುಜರಾಯಿ ಇಲಾಖೆಗೆ ಆದ ನಷ್ಟ ನೂರು ಕೋಟಿಗೂ ಮೇಲು ಎಂದು ಅಂದಾಜಿಸಲಾಗಿದೆ.

      ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಸುಮಾರು 34 ಸಾವಿರ ದೇವಾಲಯಗಳಿವೆ. ಇದರಲ್ಲಿ ಎ ದರ್ಜೆಯ ದೇವಾಲಯಗಳು ಸುಮಾರು 145.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+