ಕೊರೊನಾ ವೈರಸ್: ಮುಂದಿನ ಭವಿಷ್ಯ, ಪರಿಹಾರ ನುಡಿದ ರವಿಶಂಕರ್ ಗುರೂಜಿ
ಮಾರಣಾಂತಿಕ ಕೊರೊನಾ ವೈರಸ್ ವಿಚಾರದಲ್ಲಿ ಹಲವರು ತಮ್ಮತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ. ಅದರಂತೇ, ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಕೂಡಾ ಈ ವಿಚಾರದಲ್ಲಿ ಭವಿಷ್ಯ ನುಡಿದಿದ್ದಾರೆ.
Recommended Video
ನಾಲ್ಕು ದಶಕಗಳ ಹಿಂದೆ ಇಂತದ್ದೊಂದು ವೈರಸ್ ವಿಶ್ವದಲ್ಲೆಡೆ ತಲ್ಲಣ ಮೂಡಿಸಲಿದೆ ಎನ್ನುವ ವಿಚಾರ ಪುಸ್ತಕವೊಂದರಲ್ಲಿ ಬಂದಿದ್ದು, ಕೆಲವು ದಿನಗಳಿಂದ ವೈರಲ್ ಆಗಿತ್ತು.
ಕೊರೊನಾವೈರಸ್ ಹರಡದಂತೆ ಎಲ್ಲೆಡೆ ಸ್ವಚ್ಛತೆ ಅಭಿಯಾನ
ಇದಾದ ನಂತರ, ಈ ವೈರಸ್ ನಿಂದ ವಿಶ್ವಕ್ಕೆ ಯಾವಾಗ ಮುಕ್ತಿ ಎನ್ನುವ ವಿಚಾರವನ್ನು ಜ್ಯೋತಿಷಿಗಳೊಬ್ಬರು ಹೇಳಿರುವ ಆಡಿಯೋ ವಾಟ್ಸಾಪ್ ನಲ್ಲಿ ಭಾರೀ ಸದ್ದು ಮಾಡಿತ್ತು.
"ಮನುಷ್ಯವನ್ನು ವೇಗವನ್ನು ತಗ್ಗಿಸಲು ಪ್ರಕೃತಿ ಕೆಲವೊಮ್ಮೆ ಈ ರೀತಿಯ ಕೆಲಸವನ್ನು ಮಾಡುತ್ತದೆ" ಎಂದಿರುವ ರವಿಶಂಕರ್ ಗುರೂಜಿ, ಈ ವೈರಸ್ ನ ಭವಿಷ್ಯ ಮತ್ತು ಇದಕ್ಕೆ ಪರಿಹಾರವನ್ನು ಸೂಚಿಸಿದ್ದಾರೆ.

ರವಿಶಂಕರ್ ಗುರೂಜಿ
ಕೆಲವು ದಿನಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡುತ್ತಿದ್ದ ರವಿಶಂಕರ್ ಗುರೂಜಿ, "ರೋಗ ನಿರೋಧಕ ಶಕ್ತಿಯನ್ನು ತಡೆಗಟ್ಟುವ ಶಕ್ತಿ ನಮ್ಮ ದೇಹಕ್ಕೆ ಇರಬೇಕು. ಅದು ಕಮ್ಮಿಯಾದಾಗ ಇಂತಹ ವೈರಸ್ ಗಳು ಸುಲಭವಾಗಿ ನಮ್ಮನ್ನು ಸೇರುತ್ತದೆ. ಕೊರೊನಾ ಬಗ್ಗೆ ಖಂಡಿತ ಜಾಗೃತಿ ವಹಿಸಬೇಕು, ಆದರೆ ಭಯ ಪಡುವ ಅವಶ್ಯಕತೆಯಿಲ್ಲ" ಎಂದು ಗುರೂಜಿ ಹೇಳಿದ್ದಾರೆ.

ಕೊರೊನಾ ಸೋಂಕಿನ ಪ್ರಭಾವ ಹೆಚ್ಚುದಿನ ಇರುವುದಿಲ್ಲ
"ಮಾನವನ ವೇಗಕ್ಕೆ ಕಡಿವಾಣ ಹಾಕಲು ಪ್ರಕೃತಿ ಈ ರೀತಿ ಮಾಡುತ್ತದೆ. ಕೊರೊನಾ ಸೋಂಕಿನ ಪ್ರಭಾವ ಹೆಚ್ಚುದಿನ ಇರುವುದಿಲ್ಲ. ಬಿಸಿಲು ಹೆಚ್ಚಾದಂತೆ, ಈ ವೈರಸ್ ನ ಪ್ರಭಾವ ಕಮ್ಮಿಯಾಗುತ್ತದೆ. ಈ ಸಮಯದಲ್ಲಿ ಗುಂಪು ಸೇರುವುದನ್ನು ಕಮ್ಮಿ ಮಾಡಿದರೆ ಒಳ್ಲೆಯದು" ಎಂದು ಗುರೂಜಿ ನುಡಿದಿದ್ದಾರೆ.

ಅರಸಿಣ ಉಪಯೋಗಿಸುವುದರಿಂದ, ನಮ್ಮವರಿಗೆ ಇದು ಹೆಚ್ಚಾಗಿ ತಟ್ಟುವುದಿಲ್ಲ
"ಭಾರತೀಯರು ಅರಸಿಣ ಉಪಯೋಗಿಸುವುದರಿಂದ, ನಮ್ಮವರಿಗೆ ಇದು ಹೆಚ್ಚಾಗಿ ತಟ್ಟುವುದಿಲ್ಲ. ಈ ವೇಳೆ, ಸಕ್ಕರೆ ಬಳಸುವುದನ್ನು ಕಮ್ಮಿ ಮಾಡಿದರೆ ಒಳ್ಳೆಯದು. ಅರಸಿಣಕ್ಕೆ ಸ್ವಲ್ಪ ಮೆಣಸು ಸೇರಿಸಿ ಸೇವಿಸಬಹುದು. ಬೆಲ್ಲ, ಜೇನುತುಪ್ಪ, ನಿಂಬೆ ಹೆಚ್ಚಾಗಿ ಬಳಸುವುದು ಸೂಕ್ತ" ಎನ್ನುವ ಸಲಹೆಯನ್ನು ರವಿಶಂಕರ್ ಗುರೂಜಿ ನೀಡಿದ್ದಾರೆ.

ಕೊರೊನಾ ವೈರಸ್ ನಿಂದ ಮುಕ್ತಿ ಸಿಗಲಿದೆ, ವಿಷ್ಣು ಸಹಸ್ರನಾಮ ಪಠಿಸಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವೈರಸ್ ಎಂದರೆ ರಾಹು. ಇವನು ಮಿಥುನ ರಾಶಿ, ಆದ್ರಾ ನಕ್ಷತ್ರದಲ್ಲಿದ್ದಾನೆ. ರಾಹು ಇನ್ನೊಂದು ನಕ್ಷತ್ರಕ್ಕೆ ತನ್ನ ಪಥವನ್ನು ಬದಲಿಸಿದಾಗ, ಈ ವೈರಸ್ ನಿಂದ ಮುಕ್ತಿ ಸಿಗುತ್ತದೆ. ಆದ್ರಾ ನಕ್ಷತ್ರನಿಂದ ಮೃಗಶಿರಾ ನಕ್ಷತ್ರಕ್ಕೆ ರಾಹು ಹೋದಾಗ, ಅಂದರೆ, ಮೇ 12-15ರ ಅವಧಿಯಲ್ಲಿ ರಾಹು ಆ ರಾಶಿಗೆ ಸಂಚರಿಸಲಿದ್ದಾನೆ. ಏಪ್ರಿಲ್ ಕೊನೆಯ ಅಥವಾ ಮೇ ಮೊದಲ ವಾರದಿಂದ ಕೊರೊನಾ ವೈರಸ್ ನಿಂದ ಮುಕ್ತಿ ಸಿಗಲಿದೆ. ಅಲ್ಲಿಯವರೆಗೆ ವಿಷ್ಣು ಸಹಸ್ರನಾಮ ಪಠಿಸಿ" ಎಂದು ಜ್ಯೋತಿಷಿಗಳೊಬ್ಬರು ಸಲಹೆಯನ್ನು ನೀಡಿದ್ದರು.












Click it and Unblock the Notifications