Cooking oil Prices Hike: ಅಡುಗೆ ಎಣ್ಣೆ ಬೆಲೆಯಲ್ಲಿ ದಿಢೀರ್ ಏರಿಕೆ, ಎಷ್ಟು ಬೆಲೆ ಏರಿಕೆ ಆಗಿದೆ ನೋಡಿ
ಗಣೇಶ ಹಬ್ಬವನ್ನು ಮುಗಿಸಿ ಮುಂದೆ ಕರ್ನಾಟಕದ ದೊಡ್ಡ ಹಬ್ಬಗಳಾದ ದಸರಾ, ದೀಪಾವಳಿ ಹಬ್ಬಕ್ಕೆ ಸಿದ್ಧತೆ ನಡೆದಿದೆ. ಇದರ ಬೆನ್ನಲ್ಲೇ ಸಣ್ಣಗೆ ವಿವಿಧ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಈಚೆಗಷ್ಟೇ ರಾಜ್ಯದಲ್ಲಿ ಹಾಲಿನ ದರವನ್ನು 5 ರೂಪಾಯಿ ವರೆಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಮುಂದಿಟ್ಟಿದೆ. ಈ ನಡುವೆ ಸದ್ದಿಲ್ಲದೆ ಅಡುಗೆ ಎಣ್ಣೆ ಬೆಲೆ ಏಕಾಏಕಿ ಹೆಚ್ಚಳವಾಗಿದ್ದು, ಜನರ ಜೇಬು ಸುಡುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯ ಸಂತಸ ಸುದ್ದಿ ಇತ್ತು. ಅದೂ ಸಹ ಜನರ ಕೈ ಸೇರಲಿಲ್ಲ. ಇದೀಗ ಅಡುಗೆ ಎಣ್ಣೆ ಜನರ ಕೈಸುಡುತ್ತಿದೆ.
ಸದ್ದೇ ಎಲ್ಲದೆ ಕಳೆದ ಒಂದು ವಾರದ ಅವಧಿಯಲ್ಲಿ ಅಡುಗೆ ಎಣ್ಣೆ ಬೆಲೆ ಏಕಾಏಕಿ ಏರಿಕೆಯಾಗಿದ್ದು, ಜನ ಕಂಗಾಲಾಗಿದ್ದಾರೆ. ಸೋಯಾಬೀನ್ ಎಣ್ಣೆ,ತಾಳೆ ಎಣ್ಣೆ ಹಾಗೂ ಸೂರ್ಯಕಾಂತಿ ರಿಫೈನ್ಡ್ ಅಡುಗೆ ಎಣ್ಣೆ ಬೆಲೆ ಎರಡು ದಿನದ ಅಂತರದಲ್ಲಿ ಹೆಚ್ಚಳವಾಗಿದೆ. ಅದರಲ್ಲೂ ಅಡುಗೆ ಎಣ್ಣೆ ಬೆಲೆ 1 ರೂಪಾಯಿ 2 ರೂಪಾಯಿ ಹೆಚ್ಚಳವಾಗಿಲ್ಲ. ಎರಡು ಮೂರು ದಿನಗಳ ಅವಧಿಯಲ್ಲಿ ಒಂದೇ ಸಲ ಅಡುಗೆ ಎಣ್ಣೆಯ ಬೆಲೆ ಹೆಚ್ಚಳವಾಗಿದೆ.

ಅಡುಗೆ ಎಣ್ಣೆ ಬೆಲೆಯು ಪ್ರತಿ ಲೀಟರ್ ಗೆ 20 ರೂಪಾಯಿಯಿಂದ 25 ರೂಪಾಯಿ ವರೆಗೆ ಹೆಚ್ಚಳವಾಗಿದೆ. ಈ ಬೆಲೆಯನ್ನು ನೋಡಿ ಜನ ಕಂಗಾಲಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಆದರೆ, ಯಾವುದೇ ವಸ್ತುವಿನ ಬೆಲೆ ಇಳಿಕೆಯಾಗಿರುವುದು ವರದಿಯಾಗಿಲ್ಲ. ಇದೀಗ ಅಡುಗೆ ಎಣ್ಣೆಯ ಸರದಿ. ಅಡುಗೆ ಎಣ್ಣೆ ಬೆಲೆ ಕಳೆದ ವಾರದ ವರೆಗೂ ಒಂದು ಹಂತದಲ್ಲಿ ಇತ್ತು.
ಎಣ್ಣೆಯ ಬೆಲೆ ಪ್ರತಿ ಲೀಟರ್‌ಗೆ 15 ರೂಪಾಯಿಂದ 25 ರೂಪಾಯಿಯ ವರೆಗೂ ಹೆಚ್ಚಳವಾಗಿರುವುದು ವರದಿಯಾಗಿದೆ. ಅಂದರೆ ಶೇಕಡವಾರು 10 ರಿಂದ ಶೇಕಡ 15 ಪ್ರತಿಶತದ ವರೆಗೆ ಕೆಲವೇ ದಿನಗಳಲ್ಲಿ ಹೆಚ್ಚಳವಾಗಿದೆ. ಕಳೆದ ವಾರದ ತಾಳೆ ಎಣ್ಣೆಯ ಪ್ರತಿ ಬಾಕ್ಸ್‌ನ ಬೆಲೆಯು 1,450 ರೂಪಾಯಿಯ ಆಸುಪಾಸಿತ್ತು. ಇದೀಗ ಎರಡು ದಿನಗಳ ಅಂತರದಲ್ಲಿ 1,650 ರೂಪಾಯಿಯಿಂದ 1,700 ರೂಪಾಯಿಯ ವರೆಗೆ ತಲುಪಿದೆ. ಪ್ರತಿ ಲೀಟರ್ ಪ್ಯಾಕೆಟ್ ಬೆಲೆಯು 98 ರೂಪಾಯಿ ಇತ್ತು. ಅದರ ಬೆಲೆ ಇದೀಗ 120 ರೂಪಾಯಿ ಮುಟ್ಟಿದೆ.
ಅಡುಗೆ ಎಣ್ಣೆ ಬೆಲೆ ಏರಿಕೆಗೆ ಕಾರಣವೇನು ?
ಅಡುಗೆ ಎಣ್ಣೆ ಬೆಲೆ ಈ ರೀತಿ ಏಕಾಏಕಿ ಹೆಚ್ಚಳವಾಗುವುದಕ್ಕೆ ಮುಖ್ಯ ಕಾರಣ. ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ. ಕೇಂದ್ರ ಸರ್ಕಾರವು ಅಡುಗೆ ಎಣ್ಣೆಯ ಆಮದು ಸುಂಕವನ್ನು ಶೇಕಡ 20ರಷ್ಟು ಹೆಚ್ಚಳ ಮಾಡಿದೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ಏಕಾಏಕಿ ಅಡುಗೆ ಎಣ್ಣೆ ಬೆಲೆ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ. ಇನ್ನು ಅಡುಗೆ ಎಣ್ಣೆಯನ್ನು ಸಹ ಕೇಂದ್ರ ಸರ್ಕಾರ ಈಗಾಗಲೇ ಜಿಎಸ್‌ಟಿ ವ್ಯಾಪಿಗೆ ಒಳಪಡಿಸಿತ್ತು. ಇದರ ನಡುವೆ ಆಮದು ಸುಂಕ ಹೆಚ್ಚಳವಾಗಿದೆ. ಹೀಗಾಗಿ, ಅನಿವಾರ್ಯವಾಗಿ ಬೆಲೆ ಏರಿಕೆ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹೋಟೆಲ್ ಉತ್ಪನ್ನ ದುಬಾರಿ
ಅಡುಗೆ ಎಣ್ಣೆ ಬೆಲೆ ಹೆಚ್ಚಳವಾದ ಬೆನ್ನಲ್ಲೇ ಕರ್ನಾಟಕದಲ್ಲಿ ಹೋಟೆಲ್ ತಿನಿಸು ಹಾಗೂ ಆಹಾರದ ಬೆಲೆ ಹೆಚ್ಚಳವಾಗುವ ವಿಷಯವೂ ಚರ್ಚೆಯಾಗುತ್ತಿದೆ. ಈಗಾಗಲೇ ಹಾನಿನ ದರ ಹೆಚ್ಚಳದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಇದರ ನಡುವೆ ಇದೀಗ ಅಡುಗೆ ಎಣ್ಣೆಯ ಬೆಲೆಯೂ ಸಹ ಹೆಚ್ಚಳವಾಗಿದೆ. ಹೀಗಾಗಿ, ಹೋಟೆಲ್ ಊಟ, ಬೇಕರಿ ಆಹಾರ ಪದಾರ್ಥಗಳ ಬೆಲೆಯೂ ಗಗನಮುಖಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.












Click it and Unblock the Notifications