ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ: ಜಗದೀಶ್ ಶೆಟ್ಟರ್ ಮಹತ್ವದ ಹೇಳಿಕೆ
ಹುಬ್ಬಳ್ಳಿ, ಜನವರಿ 29: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಭರ್ಜರಿ ಸಿದ್ದತೆ ನಡೆಸಿರುವ ರಾಜ್ಯ ಬಿಜೆಪಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನ ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಂಡಿದೆ. ಅಲ್ಲದೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಅವರನ್ನ ಕಣಕ್ಕಿಳಿಸಬೇಕು ಎನ್ನುವ ಚರ್ಚೆ ಹುಟ್ಟಿಕೊಂಡಿದ್ದು, ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಹೌದು, ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಜಗದೀಶ್ ಶೆಟ್ಟರ್, ಲೋಕಸಾಭಾ ಚುನಾವಣೆಗೆ ವರಿಷ್ಠರು ಹೇಳಿದರೆ ಸ್ಪರ್ಧೆ ಮಾಡುವೆ, ಯಾವ ಕ್ಷೇತ್ರ ಅಂತಿಲ್ಲ ಹೈಕಮಾಂಡ್ ನಾಯಕರ ಮಾತಿಗೆ ನಾನು ಬದ್ಧನಾಗಿರುತ್ತೇನೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಗೆ ಘರ್ ವಾಪ್ಸಿ ಬಳಿಕ ಮೊದಲ ಬಾರಿಗೆ ಆಗಮಿಸಿರುವ ಜಗದೀಶ್ ಶೆಟ್ಟರ್ ಮಾತು ಮುಂದುವರೆಸಿ, ಮೂರ್ನಾಲ್ಕು ತಿಂಗಳಿಂದ ನಾನು ಪ್ರವಾಸ ಮಾಡಿದಾಗ ಅನೇಕರ ವಾಪಸ್ ಬರಬೇಕು ಅಂತಿದ್ರು. ಎಲ್ಲೇ ಪ್ರವಾಸ ಮಾಡಿದ್ರು ನಮಗೆ ಒತ್ತಡ ಬರ್ತಿತ್ತು. ಹಿರಿಯರಾಗಿ ಮನೆಗೆ ಬರಬೇಕು ಎಂದು ಹೇಳತೀದ್ರು, ನಾನು ಅವರಿಗೆ ನಾನು ಅಸಹಾಯಕ ನೀವು ಅಸಹಾಯಕರು ಎಂದು ಹೇಳಿದ್ದೆ. ಮುಂದೆ ವಿಜಯೇಂದ್ರ ಅಧ್ಯಕ್ಷರಾದ ಮೇಲೆ ನನಗೆ ಮಾತಾಡಿದ್ರು. ರಾಷ್ಟ್ರೀಯ ನಾಯಕರು ಮನಸು ಮಾಡಿದ ಮೇಲೆ ನಾನು ಹೋಗಿದೆ ಎಂದರು.
ಕೇಂದ್ರ ನಾಯಕರಾದ ಅಮಿತ್ ಶಾ ಹಾಗೂ ಜೆ ಪಿ ನಡ್ಡಾ ಅವರನ್ನು ಭೇಟಿಯಾದಾಗ ಹಿಂದೆ ಆಗಿರೋದನ್ನ ಮರೆತು ಬಿಡಿ ಎಂದಿದ್ರು. ನನಗೆ ಗೌರವ ಕೊಡ್ತೀನಿ ಎಂದು ಹೇಳಿದ್ರು, ಹಾಗಾಗಿ ನಾನು ಬಿಜೆಪಿ ಸೇರಿದ್ದೇನೆ. ನಿನ್ನೆ ಕಾರ್ಯಕಾರಿಣಿಯಲ್ಲಿ ಅನೇಕರು ಸಿಕ್ಕಿದ್ರು, ಎಲ್ಲರೂ ಪ್ರೀತಿ ವಿಶ್ವಾಸ ತೋರಿದ್ದಾರೆ. ಬಿಜೆಪಿ ಗೆ ಬಂದಿದ್ದು ಖುಷಿಯಾಗಿದೆ ಎಂದು ಆತ್ಮೀಯವಾಗಿ ಮಾತನಾಡಿದ್ದಾರೆ. ನನ್ನಗೂ ಬಹಳ ಖುಷಿಯಾಗಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ತುಮಕೂರ,ದಾವಣಗೆರೆಯಲ್ಲಿ ನನಗೆ ಸ್ವಾಗತ ಮಾಡಿದರು. ಎಲ್ಲ ಕಡೆ ಕಾರ್ಯಕರ್ತರು ಪ್ರೀತಿ ತೋರಿದ್ರು, ಹಾವೇರಿ ಜಿಲ್ಲೆಯಲ್ಲಿ ಅನೇಕರು ನಮಗೆ ಏನೋ ಒಂದು ಕಳೆದುಕೊಂಡ ಹಾಗೆ ಆಗಿತ್ತು. ನೀವು ಬಂದಿರೋದು ಖುಷಿಯಾಯ್ತು ಎಂದರು. ಹುಬ್ಬಳ್ಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಜನ ಸೇರಿದ್ರು. ಬಿಜೆಪಿ ನಾಯಕರು ಕರೆಯದೆ ಹೋದ್ರೆ ನಾವು ಹೋಗತಿರಲಿಲ್ಲ, ಅನೇಕರ ಒತ್ತಡ ಹಾಕಿತ್ತು. ವಿಜಯೇಂದ್ರ ಅಧ್ಯಕ್ಷ ಆದ ಮೇಲೆ ಇದು ಬೇಗ ಪ್ರೊಸೆಸ್ ಆಯ್ತು. ನಮ್ಮಲ್ಲಿ ಯಾವ ಬಣ ಇಲ್ಲ,ಕೊನೆಗೆ ಬಿಜೆಪಿ ಬಣ. ಜೋಶಿ ಬಣ ಇಲ್ಲ,ಶೆಟ್ಟರ್ ಬಣ ಇಲ್ಲ ಎಂದು ತಿಳಿಸಿದರು.

ನನ್ನ ಪಕ್ಷದ ಕಚೇರಿಕೆ ಕರೆದಿದ್ದಾರೆ, ನಾನು ಪಕ್ಷದ ಕಚೇರಿಗೆ ಹೋಗ್ತೀನಿ. ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಇದೆಲ್ಲವೂ ಆಗಿದ್ದು, ಯಡಿಯೂರಪ್ಪ ಮಾರ್ಗದರ್ಶನ ಇದರಲ್ಲಿ ಆಗಿದ್ದು. ರಾಷ್ಟ್ರೀಯ ನಾಯಕರ ಜೊತೆ ಮಾತಾಡೋವಾಗ ಯಡಿಯೂರಪ್ಪ,ವಿಜಯೇಂದ್ರ ಮುನೇನಕೊಪ್ಪ ಇದ್ರು. ಅಲ್ಲಿ ಯಾರ ವಿರೋಧವೂ ಬಗ್ಗೆಯೂ ಚರ್ಚೆ ಆಗಿಲ್ಲ. ನಡ್ಡಾ ಹೇಳಿದ ಮೇಲೆ ನಾನು ಹೋಗಿದ್ದೆ. ರಾಷ್ಟ್ರೀಯ ನಾಯಕರು ಕರೆದ ಮೇಲೆ ಯಾವ ಮಾತು ಬರಲ್ಲ ಎಂದರು.












Click it and Unblock the Notifications