Karnataka Elections 2023; ಕಾಂಗ್ರೆಸ್ ನಲ್ಲಿ 10 ಮಂದಿ ಸಿಎಂ ರೇಸ್ ನಲ್ಲಿದ್ದಾರೆ; ಆ ಫೈಕಿ ನಾನು ಒಬ್ಬ
ಕಾಂಗ್ರೆಸ್ ನಲ್ಲಿ 10 ಮಂದಿ ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ. ಆ ಫೈಕಿ ನಾನು ಒಬ್ಬ ಎಂದು ತುಮಕೂರಿನಲ್ಲಿ ಮಾಜಿ ಡಿಸಿಎಂ ಜಿ ಪರಮೇಶ್ವರ್ ಹೇಳಿದ್ದಾರೆ.
ತುಮಕೂರು,ಫೆಬ್ರವರಿ15: ಕಾಂಗ್ರೆಸ್ ಪಕ್ಷದಲ್ಲಿ ಪದೇ ಪದೇ ಬಾರಿ ಚರ್ಚೆಯಾಗುವ ವಿಷಯ ಅಂದ್ರೆ ಮುಂದಿನ ಮುಖ್ಯಮಂತ್ರಿ ವಿಚಾರ. ಈ ವಿಚಾರವಾಗಿ ಹೈಕಮಾಂಡ್ ಸಾಕಷ್ಟು ವಾರ್ನಿಂಗ್ ನೀಡಿದ್ದು, ಇದೀಗ ಚುನಾವಣೆ ಹೊತ್ತಲಿ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಕಾಂಗ್ರೆಸ್ ನಲ್ಲಿ 10 ಮಂದಿ ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ. ಆ ಫೈಕಿ ನಾನು ಒಬ್ಬ ಎಂದು ತುಮಕೂರಿನಲ್ಲಿ ಮಾಜಿ ಡಿಸಿಎಂ ಜಿ ಪರಮೇಶ್ವರ್ ಹೇಳಿದ್ದಾರೆ. ರಾಜಕೀಯ ಯಾಕೆ ಮಾಡ್ತಿದಿನಿ ಹೇಳಿ, ಅಧಿಕಾರಕ್ಕೆ ಬರಬೇಕು ಅಂತಾ ತಾನೇ. ಮುಖ್ಯಮಂತ್ರಿ ಆಗೋಕೆ ಎಲ್ಲಾರಿಗೂ ಆಸೆ ಇದೆ. ಹತ್ತು ಜನರಿಗೆ ಆಸೆಯಿದೆ ನಮ್ಮ ಪಕ್ಷದಲ್ಲಿ ಅದರಲ್ಲಿ ನಾನು ಒಬ್ಬ ಎಂದು ಹೇಳಿದ್ದಾರೆ.
ನಮ್ಮಲ್ಲಿ ಒಂದು ಪದ್ದತಿಯಿದೆ ಅಧಿಕಾರಕ್ಕೆ ಬಂದ ಮೇಲೆ ಹೈಕಮಾಂಡ್ ತಿರ್ಮಾನ ಮಾಡುತ್ತೆ. ಹೈಕಮಾಂಡ್ ತೀರ್ಮಾನದಂತೆ ವಿಶ್ವಾಸವಿಟ್ಟು ಹೋಗ್ತಿವಿ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ನೂರಕ್ಕೆ ನೂರು ಬರಲಿದೆ. 113 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಲ್ಲಿ ದಲಿತ ಮುಖ್ಯಮಂತ್ರಿ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿಎಂ ಆ ಸಿಎಂ ಅಂತ ಏನು ಇಲ್ಲ. ನಮ್ಮಲ್ಲಿ ಜಾತಿಯಾಧಾರಿತ ಸಿಎಂ ಮಾಡಲ್ಲ. ಆ ಸಂದರ್ಭ ಯಾರು ಸಮರ್ಥರಿದ್ದಾರೆ. ಯಾರು ಪಕ್ಷದ ಧ್ಯೇಯೋದ್ದೇಶಗಳನ್ನ ಮುನ್ನಡೆಸುವ ಸಾಮರ್ಥ್ಯ ಇದ್ದಾರೆ. ಅವರನ್ನ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.












Click it and Unblock the Notifications