ನಿಮ್ಮ ಹುಡುಗನ ಹಾಸನ್ ಬ್ಲೂ ಚಿತ್ರ ವರ್ಲ್ಡ್ ಫೇಮಸ್: ಕಾಂಗ್ರೆಸ್-ಜೆಡಿಎಸ್ ನಡುವೆ ಎಕ್ಸ್ ವಾರ್
ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಎಕ್ಸ್‌ನಲ್ಲಿ ವಾಗ್ಯುದ್ಧ ಜೋರಾಗಿ ನಡೆಯುತ್ತಿದೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪರ ಪಕ್ಷಗಳು ದಾಳಿಗೆ ಪ್ರತಿದಾಳಿ ನಡೆಸುತ್ತಿವೆ. ಆರಂಭದಲ್ಲಿ ಆರೋಗ್ಯಕರ ಚರ್ಚೆಯಂತಿದ್ದ ಈ ಜಗಳ ಇದೀಗ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ನಿಮ್ಮ ಹುಡುಗ ನಟಿಸಿದ "ಹಾಸನ್ ಬ್ಲೂ ಚಿತ್ರ" ವರ್ಲ್ಡ್ ಫೇಮಸ್ ಆಗಿದೆ ಎಂದು ಕಾಂಗ್ರೆಸ್ ಜೆಡಿಎಸ್‌ಗೆ ತಿರುಗೇಟು ನೀಡಿದೆ.
ಮೊದಲಿಗೆ ಡಿ.ಕೆ.ಶಿವಕುಮಾರ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಕಾಂಗ್ರೆಸ್ ತಿರುಗೇಟು ನೀಡಿತ್ತು. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಪಕ್ಷ ಕೂಡ ಕಣಕ್ಕಿಳಿದಿದೆ. ಸಿಡಿ ಫ್ಯಾಕ್ಟರಿ ಮಾಲೀಕನ "ಮನೆಹಾಳು ಆತ್ಮರತಿ" ಬಗ್ಗೆ ಕಾಂಗ್ರೆಸ್ ಮರೆತಿದೆ! ಟೆಂಟ್‌ನಲ್ಲಿ ನೀಲಿ ಸಿನಿಮಾ ತೋರಿಸಿದ "ದಂಧೆಕೋರನ ಆತ್ಮರತಿ" ಎಂತಹದ್ದು? "ಕಲೆಕ್ಷನ್ ಗಿರಾಕಿಯ ಆತ್ಮರತಿ" ಇರುವುದು ಮಸಾಜ್ ಪಾರ್ಲರ್‌ಗಳಲ್ಲಿ ಅಲ್ಲವೇ? "ಹನಿಟ್ರಾಪ್ ಅಧ್ಯಕ್ಷನ ಆತ್ಮರತಿ"ಗೆ ಸಂಪುಟದ ಮಂತ್ರಿಗಳು, ಶಾಸಕರೇ ಬಲಿಪಶುಗಳಲ್ಲವೇ? ಎಂದು ಜೆಡಿಎಸ್ ತಿರುಗುಬಾಣ ಬಿಟ್ಟಿದೆ.

ದೀನ ದಲಿತರು, ಬಡವರು, ಮಹಿಳೆಯರ ಜಮೀನು ಕಬಳಿಸುವ ರಿಯಲ್ ಎಸ್ಟೇಟ್ ಏಜೆಂಟ್'ನ ಆತ್ಮರತಿ ಬಗ್ಗೆ ಬೆಂಗಳೂರಿಗೇ ಚಿರಪರಿಚಿತ. "ಸ್ವಾರ್ಥ ಸಾಧನೆಗೆ ಬ್ಲ್ಯಾಕ್ ಮೇಲ್" ಮಾಡುವ ಆತ್ಮರತಿಯ ರಾಜಕಾರಣಿಯ ಅನಾಚಾರಗಳ ದೊಡ್ಡ ಪಟ್ಟಿಯೇ ಇದೆ. ರೌಡಿ ರಾಜಕಾರಣಿಯ ಅನುಭವದ ಕೊಚ್ಚೆಗೆ ಯಾರು ತಾನೆ ಸಮ. ನಿಮಗೆ ಯಾರೂ ಪ್ರತಿಸ್ಪರ್ಧಿಗಳೇ ಇಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ರೋಲ್ ಕಾಲ್ ಅಧ್ಯಕ್ಷ ಡಿ.ಕೆ.ಶಿವಕುಮಾರ್? ಎಂದು ಕೇಳಿದೆ.
ಬ್ಲೂ ಫಿಲಂ ಪಾತ್ರಧಾರಿಗಳು ತುಂಬಿದ್ದಾರೆ
ಇದಕ್ಕೆ ಕೌಂಟರ್ ನೀಡಿರುವ ಕಾಂಗ್ರೆಸ್, ಅಕಟಕಟಾ.. ನಿಮ್ಮದು ಸೆಕ್ಯೂರ್ಡ್ "ಬ್ಲೂ ಬಾಯ್ಸ್" ಪಾರ್ಟಿ ಅನ್ನೋದು ಮರೆತು ಹೋಯ್ತೆ..?! ಅದೂ ಇಷ್ಟು ಬೇಗ..? ಶಾಂತಂ ಪಾಪಂ..!! ಎಂದು ಅಣಕಿಸಿದೆ. ನಿಮ್ಮಲ್ಲಿ ಬ್ಲೂ ಫಿಲಂ ನಿರ್ಮಾಪಕರು, ನಿರ್ದೇಶಕರು, ಎಲ್ಲಕ್ಕಿಂತ ಮಿಗಿಲಾಗಿ ಪಾತ್ರಧಾರಿಗಳು ತುಂಬಿ ತುಳುಕುತಿದ್ದಾರೆ. ನಿಮ್ಮ ಹುಡುಗ ನಿರ್ಮಿಸಿ, ನಟಿಸಿದ 'ಹಾಸನ್ ಬ್ಲೂ' ಚಿತ್ರ ವರ್ಲ್ಡ್ ಫೇಮಸ್. ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾಲಿವುಡ್‌ವರೆಗೂ ಹಾರಾಡಿಸಿದೆ. ಅವರು ಈಗಲೂ ಜೈಲಲ್ಲಿ "ನೀಲ ಮೇಘ ಶ್ಯಾಮ.." ಹಾಡುತ್ತಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನು ಉಲ್ಲೇಖಿಸಿ ತಿರುಗೇಟು ನೀಡಿದೆ.
ಅಟಕಟಾ.. ನಿಮ್ಮದು ಸೆಕ್ಯೂರ್ಡ್ "ಬ್ಲೂ ಬಾಯ್ಸ್" ಪಾರ್ಟಿ ಅನ್ನೋದು ಮರೆತು ಹೋಯ್ತೆ..?! ಅದೂ ಇಷ್ಟು ಬೇಗ..? ಶಾಂತಂ ಪಾಪಂ..!!
— Karnataka Congress (@INCKarnataka) January 10, 2026
ನಿಮ್ಮಲ್ಲಿ ಬ್ಲೂ ಫಿಲಂ ನಿರ್ಮಾಪಕರು, ನಿರ್ದೇಶಕರು, ಎಲ್ಲಕ್ಕಿಂತ ಮಿಗಿಲಾಗಿ ಪಾತ್ರಧಾರಿಗಳು ತುಂಬಿ ತುಳುಕುತಿದ್ದಾರೆ.
ನಿಮ್ಮ ಹುಡುಗ ನಿರ್ಮಿಸಿ, ನಟಿಸಿದ 'ಹಾಸನ್ ಬ್ಲೂ' ಚಿತ್ರ ವರ್ಲ್ಡ್ ಫೇಮಸ್! ಕರ್ನಾಟಕದ… https://t.co/uc3Vpdskml
ನಿಮ್ಮ ಇನ್ನೊಬ್ಬ ಲಿಂಬಿಯ ಬನದ ನಾಯಕರು "ಲಿಂಬೆ ಹಣ್ಣಿನಂತ..." ಹಾಡು ಹೇಳಲು ಹೋಗಿ ಜೈಲಲ್ಲಿ ಮುದ್ದೆ ಮುರಿದು ಬಂದಿದ್ದಾರೆ. ಇನ್ನೊಬ್ಬ "ರಾಧಾ ಮಾಧವ ಮನೋ ವಿಲಾಸ.." ನಾಯಕರು ಜಸ್ಟ್ ಎಸ್ಕೇಪ್ ಆಗಿದ್ದಾರೆ. ನಿಮ್ಮ ನಾಯಕರೇ ನಿರ್ಮಿಸಿ, ನಿರ್ದೇಶಿಸಿ, ನಟಿಸಿ ಸಿನಿಮಾ ತೆಗೆದು ಜಗತ್ತಿಗೆ ತೋರಿಸಿರುವಾಗ ಬೇರೆಯವರಿಗೆ ಟೆಂಟಲ್ಲಿ ತೋರಿಸುವ ಅವಕಾಶವೆಲ್ಲಿದೇ? ನಿಜಕ್ಕೂ ನಿಮ್ಮ ಸಿನಿಮಾ ಚನ್ನಾಗಿದೆ. ಅದರ ಮೇಲೆ ಮತ್ತೊಂದು ಕತೆ ಕಟ್ಟಲು ಹೋಗಬೇಡಿ. ಸುಮ್ಮನೇ ಆಕಾಶಕ್ಕೆ ಉಗುಳಿ ಮುಖಕ್ಕೆ ಸಿಂಪಡಿಸಿಕೊಳ್ಳಬೇಡಿ ಎಂದು ಕಾಂಗ್ರೆಸ್ ಟಾಂಗ್ ನೀಡಿದೆ.












Click it and Unblock the Notifications