ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Tejasvi Surya; ಮಾನಸಿಕ ಆರೋಗ್ಯ ತಪಾಸಣೆ ನಡೆಸಲು ಅದೇಶಿಸಬೇಕು!

|
Google Oneindia Kannada News

ಬೆಂಗಳೂರು, ಜನವರಿ 18; ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸುದ್ದಿಯಲ್ಲಿದ್ದಾರೆ. ವಿಮಾನದ ತುರ್ತು ನಿರ್ಗಮನ ದ್ವಾರ ತೆಗೆದು ಅವರು ಟೀಕೆಗೆ ಗುರಿಯಾಗಿದ್ದಾರೆ.

ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ತೇಜಸ್ವಿ ಸೂರ್ಯ ವಿರುದ್ಧ ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನೆ ಮಾಡಿದೆ.

ಬುಧವಾರ ಕಾಂಗ್ರೆಸ್ ಸರಣಿ ಟ್ವೀಟ್‌ ಮಾಡಿದ್ದು, 'ದೆಹಲಿ ಸಿಎಂ ಮನೆ ದಾಳಿಯಿಂದ ಹಿಡಿದು ವಿಮಾನದ ತುರ್ತು ಬಾಗಿಲು ತೆಗೆಯುವವರೆಗೂ ಸಂಸದ ತೇಜಸ್ವಿ ಸೂರ್ಯನ ಹಲವು ಅತಿರೇಕದ ಪ್ರಕರಣಗಳು ಕಂಡುಬಂದಿವೆ' ಎಂದು ಹೇಳಿದೆ.

Tejasvi Surya: ಇಂಡಿಗೋ ವಿಮಾನದ ತುರ್ತು ನಿರ್ಗಮನ ಬಾಗಿಲು ತೆಗೆದು ತೇಜಸ್ವಿ ಸೂರ್ಯ ಎಡವಟ್ಟುTejasvi Surya: ಇಂಡಿಗೋ ವಿಮಾನದ ತುರ್ತು ನಿರ್ಗಮನ ಬಾಗಿಲು ತೆಗೆದು ತೇಜಸ್ವಿ ಸೂರ್ಯ ಎಡವಟ್ಟು

Congress Urged MP Tejasvi Surya Mental Health Check Up

'ಮಾನ್ಯ ಲೋಕಸಭಾ ಸ್ಪೀಕರ್ ಅವರು Tejasvi Suryaನ ಮಾನಸಿಕ ಆರೋಗ್ಯದ ತಪಾಸಣೆ ನಡೆಸಲು ಅದೇಶಿಸಬೇಕು, ಮಾನಸಿಕ ಲೋಪವಿದ್ದಲ್ಲಿ ಸಂಸದ ಸ್ಥಾನದಿಂದ ವಜಾಗೊಳಿಸಿ, ಸೂಕ್ತ ಚಿಕಿತ್ಸೆ ನೀಡಬೇಕು' ಎಂದು ಕಾಂಗ್ರೆಸ್ ಟ್ವೀಟ್‌ನಲ್ಲಿ ಒತ್ತಾಯಿಸಿದೆ.

ದೈವಾರಾಧನೆಗೆ ಅವಮಾನ ಮಾಡಿದ ಆರೋಪ: ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶದೈವಾರಾಧನೆಗೆ ಅವಮಾನ ಮಾಡಿದ ಆರೋಪ: ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ

ಶಿಕ್ಷಾರ್ಹ ಅಪರಾಧ; ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ, 'ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆದದ್ದು ಶಿಕ್ಷಾರ್ಹ ಅಪರಾಧವಾಗಿದೆ, ವಿಮಾನಯಾನ ಸಂಸ್ಥೆ ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದೇಕೆ?' ಎಂದು ಕೇಳಿದೆ.

ಖರ್ಗೆ, ಶ್ರೀನಿವಾಸ, ಸಂತೋಷ, ತೇಜಸ್ವಿ ಸೂರ್ಯ: ರಾಷ್ಟ್ರ ರಾಜಕಾರಣದಲ್ಲಿ ಕನ್ನಡಿಗರ ಹವಾಖರ್ಗೆ, ಶ್ರೀನಿವಾಸ, ಸಂತೋಷ, ತೇಜಸ್ವಿ ಸೂರ್ಯ: ರಾಷ್ಟ್ರ ರಾಜಕಾರಣದಲ್ಲಿ ಕನ್ನಡಿಗರ ಹವಾ

'ಬಿಜೆಪಿಗೊಂದು ಕಾನೂನು, ಇತರರಿಗೊಂದು ಕಾನೂನು ಇದೆಯೇ BJP Karnataka?. ಎದೆ ಸೀಳಿದರೆ ನಾಲ್ಕಕ್ಷರ ಬರುವುದಿಲ್ಲ ಎನ್ನುವ Tejasvi Surya ಅವರಲ್ಲಿ ಈಗ ಬಾಯಿ ತೆರೆದರೆ ನಾಲ್ಕು ಮಾತೇ ಹೊರಡುತ್ತಿಲ್ಲವೇಕೆ?' ಎಂದು ಕಾಂಗ್ರೆಸ್ ದೂರಿದೆ.

'ತೇಜಸ್ವಿ ಸೂರ್ಯರಿಗೆ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವಂತಹ ತುರ್ತು ಏನಿತ್ತು?. ಎದೆ ಸೀಳಿದರೆ ನಾಲ್ಕಕ್ಷರ ಇಲ್ಲ ಎಂದವರ ತಲೆ ಸೀಳಿದರೆ ನಯಾಪೈಸೆ ಬುದ್ದಿ ಇಲ್ಲದಾಗಿದೆ! ಅನಾಹುತ ಸಂಭವಿಸಿದ್ದರೆ ಬಲಿಯಾಗುವ ಜೀವಗಳಿಗೆ ಹೊಣೆ ಯಾರಾಗುತ್ತಿದ್ದರು? ತೇಜಸ್ವಿ ಸೂರ್ಯ ಎಲ್ಲಾ ಕಡೆಯೂ ತನ್ನ ಮಕ್ಕಳಾಟ ಆಡಲು ಹೋಗುವುದೇಕೆ?' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

surya

ಮತ್ತೊಂದು ಟ್ವೀಟ್‌ನಲ್ಲಿ
* ಮಂಗನ ಕೈಗೆ ಮಾಣಿಕ್ಯ ಕೊಡಬಾರದು
* ಆಡುವ ಮಕ್ಕಳಿಗೆ ಯಜಮಾನಿಕೆ ಕೊಡಬಾರದು
* ಕಳ್ಳನಿಗೆ ಕಾವಲು ಕೊಡಬಾರದು
* ಶ್ವಾನವನ್ನು ಪಲ್ಲಕ್ಕಿಗೆ ಏರಿಸಬಾರದು
* ಬಿಜೆಪಿಗೆ ಆಡಳಿತ ಕೊಡಬಾರದು ಹಾಗೂ ದೋಸೆಪ್ರೇಮಿ @Tejasvi_Surya
ನಂತವರಿಗೆ ಹುದ್ದೆ, ಅಧಿಕಾರ ಕೊಡಬಾರದು. ಕೊಟ್ಟರೆ ಏನಾಗಲಿದೆ ಎಂಬುದಕ್ಕೆ ಉದಾಹರಣೆ ಇದು! ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ, 'ವಿಮಾನದಲ್ಲಿ ಚೇಷ್ಟೆ ನಡೆಸಿ ಒಂದು ತಿಂಗಳಾದರೂ ಘಟನೆ ಬಗ್ಗೆ ವಿಮಾನಯಾನ ಸಚಿವಾಲಯ ಕ್ರಮ ಕೈಗೊಳ್ಳದಿರುವುದೇಕೆ?. ಇದು ಶಿಕ್ಷಾರ್ಹ ಹಾಗೂ ಗಂಭೀರ ಪ್ರಕರಣವಾಗಿದ್ದರೂ ಮುಚ್ಚುಮರೆ ಮಾಡಿದ್ದೇಕೆ?. ಈತನ ಚೇಷ್ಟೆಯಿಂದ ಇತರ ಪ್ರಯಾಣಿಕರಿಗಾದ ವಿಳಂಬಕ್ಕೆ, ಅವರಿಗಾದ ನಷ್ಟಕ್ಕೆ ಪರಿಹಾರವೇನು? @BJP4Karnataka ಉತ್ತರಿಸುವುದೇ?' ಎಂದು ಹೇಳಿದೆ.

ಮಂಗಳವಾರ ಟ್ವೀಟ್ ಮಾಡಿದ್ದ ಕರ್ನಾಟಕ ಕಾಂಗ್ರೆಸ್, 'ಸಂಸದ @Tejasvi_Surya ತುರ್ತು ನಿರ್ಗಮನದ ದ್ವಾರವನ್ನು ವಿಮಾನ ನಿಲ್ದಾಣದಲ್ಲಿ ಅಲ್ಲದೆ, ಟೇಕಾಫ್ ಆದ ನಂತರ ಈ "ಕಪಿಚೇಷ್ಟೆ" ನಡೆಸಿದ್ದಿದ್ದರೆ ಸಂಭವಿಸುವ ಅನಾಹುತಕ್ಕೆ ಯಾರು ಹೊಣೆಯಾಗುತ್ತಿದ್ದರು @narendramodi ಅವರೇ? ಈ ಬಗ್ಗೆ ತನಿಖೆ ಮಾಡುತ್ತಿಲ್ಲವೇಕೆ?. ತೇಜಸ್ವಿ ಸೂರ್ಯ ಸಂಸದನಾಗಿದ್ದು ಮಕ್ಕಳ ಕೈಗೆ ಆಟಿಕೆ ಸಿಕ್ಕಂತಾಗಿದೆ' ಎಂದು ಟೀಕಿಸಿತ್ತು.

ಕ್ಷಮಾಪಣೆ ಕೋರಿದ್ದು ಏಕೆ?; ಮಂಗಳವಾರದ ಟ್ವೀಟ್‌ನಲ್ಲಿ, 'ಸಂಸದ @Tejasvi_Surya ವಿಮಾನದ ಸುರಕ್ಷಾ ನಿಯಮಗಳ ವಿರುದ್ಧವಾಗಿ ತೂರಿ ಎಮರ್ಜೆನ್ಸಿ ಎಕ್ಸಿಟ್ ಬಾಗಿಲನ್ನು ತೆರೆದಿದ್ದ ಸಂಗತಿಯನ್ನು ಸರ್ಕಾರ ಮುಚ್ಚಿಟ್ಟಿದ್ದೇಕೆ?. ಸಂಸದರ ಉದ್ದೇಶವೇನಿತ್ತು? ಯಾವ ಅನಾಹುತ ಸೃಷ್ಟಿಸುವ ಯೋಜನೆ ಇತ್ತು? ನಂತರ ಕ್ಷಮಾಪಣೆ ಕೋರಿ ಹಿಂದಿನ ಸೀಟಿಗೆ ವರ್ಗಾವಣೆಯಾಗಿದ್ದೇಕೆ?' ಎಂದು ಕೇಳಿತ್ತು.

English summary
In a tweet Karnataka Congress urged for Bengaluru south BJP MP Tejasvi Surya mental health check up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X