ಬಿಜೆಪಿಯಲ್ಲಿ ರೌಡಿಗಳಿಗೆ ರಾಜಮರ್ಯಾದೆ, ದಲಿತರಿಗೆ ಲಾಠಿಏಟು- ಕಾಂಗ್ರೆಸ್ ಕಿಡಿ
ಬೆಂಗಳೂರು, ಡಿಸೆಂಬರ್ 12: ಒಳಮೀಸಲಾತಿ ಜಾರಿಗಾಗಿ ಆಗ್ರಹಿಸಿ ಪ್ರತಿಭಟಿಸುತ್ತಿದ್ದ ದಲಿತ ಹೋರಾಟಗಾರರ ಮೇಲೆ ಲಾಠಿ ಬೀಸಿದ ಬಿಜೆಪಿ ಸರ್ಕಾರ ತನ್ನೊಳಗಿದ್ದ ದಲಿತರ ಮೇಲಿನ ದ್ವೇಷ, ಅಸಹನೆಯನ್ನು ಕಾರಿಕೊಂಡಿದೆ ಎಂದು ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
'@BJP4Karnataka ಸರ್ಕಾರದಲ್ಲಿ
— Karnataka Congress (@INCKarnataka) December 12, 2022
ಕೇಸರಿ ಶಾಲು ಹೊದ್ದು ಪುಂಡಾಟಿಕೆ ನಡೆಸುವವರಿಗೆ - ರಾಜಮರ್ಯಾದೆ
ಭ್ರಷ್ಟಾಚಾರ, ಅಕ್ರಮ ನಡೆಸುವವರಿಗೆ - ರಾಜಮರ್ಯಾದೆ
ರೌಡಿಗಳಿಗೆ, ಕ್ರಿಮಿನಲ್‌ಗಳಿಗೆ - ರಾಜಮರ್ಯಾದೆ
ಆದರೆ
ಶಾಂತಿಯಿಂದ ಪ್ರತಿಭಟಿಸುವ ದಲಿತ ಹೋರಾಟಗಾರರಿಗೆ ಮಾತ್ರ - ಲಾಠಿಏಟು
ಬಿಜೆಪಿ ದೃಷ್ಟಿಯಲ್ಲಿ ದಲಿತರು ಕ್ರಿಮಿನಲ್‌ಗಳಂತೆ ಕಾಣುವರೇ?
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುತ್ತೇವೆ ಎಂದಿದ್ದ ಬಿಜೆಪಿ ಸರ್ಕಾರವೇ ಇಂದು ಲಾಠಿಚಾರ್ಜ್ ನಡೆಸಿ ಜಾರಿಯನ್ನು ನಿರಾಕರಿಸುವ ಸಂದೇಶ ನೀಡಿದೆ ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದೆ.
ಬಿಜೆಪಿ ಸರ್ಕಾರದಲ್ಲಿ ಕೇಸರಿ ಶಾಲು ಹೊದ್ದು ಪುಂಡಾಟಿಕೆ ನಡೆಸುವವರಿಗೆ ರಾಜಮರ್ಯಾದೆ, ಭ್ರಷ್ಟಾಚಾರ, ಅಕ್ರಮ ನಡೆಸುವವರಿಗೆ ರಾಜಮರ್ಯಾದೆ, ರೌಡಿಗಳಿಗೆ, ಕ್ರಿಮಿನಲ್‌ಗಳಿಗೆ ರಾಜಮರ್ಯಾದೆ, ಆದರೆ ಶಾಂತಿಯಿಂದ ಪ್ರತಿಭಟಿಸುವ ದಲಿತ ಹೋರಾಟಗಾರರಿಗೆ ಮಾತ್ರ ಲಾಠಿಏಟು ಸಿಗುತ್ತದೆ. ಬಿಜೆಪಿ ದೃಷ್ಟಿಯಲ್ಲಿ ದಲಿತರು ಕ್ರಿಮಿನಲ್‌ಗಳಂತೆ ಕಾಣುವರೇ..? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇನ್ನು ರಾತ್ರಿ ಮನೆಗೆ ನಡೆದು ಹೋಗುತ್ತಿದ್ದ ಅಮಾಯಕ ದಂಪತಿಗೆ ಬೆದರಿಸಿ ಪೊಲೀಸರು ಹಣ ವಸೂಲಿ ಮಾಡಿರುವ ಘಟನೆ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಬೆಂಗಳೂರಲ್ಲಿ ರಾತ್ರಿ ಗಸ್ತು ತಿರುಗುತ್ತಾ ಜನತೆಗೆ ರಕ್ಷಣೆ ನೀಡಬೇಕಾದ ಪೋಲಿಸರು ರಾತ್ರಿ ಮನೆಗೆ ನಡೆದು ಹೋಗುತ್ತಿದ್ದ ಅಮಾಯಕ ದಂಪತಿಗೆ ಬೆದರಿಸಿ ಥೇಟ್ ದರೋಡೆ ಕೋರರಂತೆ ವರ್ತಿಸಿ ಹಣ ವಸೂಲಿ ಮಾಡಿರುವುದು ವರದಿಯಾಗಿದೆ. ಬಹುಶಃ ರಾಜ್ಯ ರೋಲ್ಕಾಲ್ ಸರ್ಕಾರದ ಪೊಲೀಸ್ ವ್ಯವಸ್ಥೆಯ ಇಂದಿನ ಪರಿಸ್ಥಿತಿ ಅರಿಯಲು ಈ ಒಂದು ಘಟನೆ ಸಾಕಾಗಿದೆ ಎಂದು ಲೇವಡಿ ಮಾಡಿದೆ.
ತನಗೂ ಇಲಾಖೆಗೂ ಸಂಬಂಧ ಇಲ್ಲದಂತೆ ವರ್ತಿಸುವ ಬೇಜವಾಬ್ದಾರಿ ಗೃಹ ಸಚಿವರ ಅಡಿಯಲ್ಲಿ ಲಕ್ಷ ಹಾಗೂ ಕೋಟಿಗಳ ಲೆಕ್ಕದಲ್ಲಿ ಲಂಚ ಕೊಟ್ಟು ಆಯಕಟ್ಟಿನ ಜಾಗಕ್ಕೆ ಬಂದಿರುವ ಅಧಿಕಾರಿಗಳು, ಅಕ್ಷರಶಃ ದರೋಡೆಕೋರಂತೆ ಜನರ ಲೂಟಿಗೆ ಇಳಿದಿದ್ದಾರೆ. 40% ಸರ್ಕಾರ ತನ್ನ ಕಮಿಷನ್ ಎಣಿಸಿಕೊಂಡು ಮೋದಿ ಭಜನೆ ಮಾಡುತ್ತಾ ಕಾಲಕಳೆಯುತ್ತಿದೆ ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದೆ.












Click it and Unblock the Notifications