ಮಡಿಕೇರಿ ಅಭ್ಯರ್ಥಿಗೆ ಮೆಹುಲ್ ಚೋಕ್ಸಿ ನಂಟು, ಒಟ್ಟು 4 ಬಿ-ಫಾರಂಗೆ ತಡೆ

Subscribe to Oneindia Kannada

ಮಡಿಕೇರಿ, ಏಪ್ರಿಲ್ 17: ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕರ್ನಾಟಕದ ಮಾಜಿ ಸರ್ಕಾರಿ ಅಭಿಯೋಜಕ ಎಚ್.ಎಸ್ ಚಂದ್ರಮೌಳಿಯವರ ಟಿಕೆಟ್ ನ್ನು ತಡೆ ಹಿಡಿಯಲಾಗಿದೆ.

ಚಂದ್ರಮೌಳಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ರೂವಾರಿ ನೀರವ್ ಮೋದಿ ಮಾವ ಹಾಗೂ ಗೀತಾಂಜಲಿ ಜ್ಯುವೆಲ್ಲರ್ಸ್ ಮಾಲಿಕ ಮೆಹುಲ್ ಚೋಕ್ಸಿಯ ವಕೀಲರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಟಿಕೆಟ್ ಗೆ ಕಾಂಗ್ರೆಸ್ ತಡೆ ನೀಡಿದೆ. ಹಾಗಾಗಿ ಅವರಿಗೆ ಬಿ-ಫಾರ್ಮ್ ನ್ನು ಕಾಂಗ್ರೆಸ್ ನೀಡುತ್ತಿಲ್ಲ.

ಕೈತಪ್ಪಿದ ಮಡಿಕೇರಿ ಟಿಕೆಟ್: ರಾಜೇಶ್ ಖನ್ನಾ ಡೈಲಾಗ್ ಹೇಳಿದ ಕಾಳಪ್ಪ

ಈ ಹಿಂದೆ ಚಂದ್ರಮೌಳಿಯವರಿಗೆ ಟಿಕೆಟ್ ನೀಡಿದ್ದಕ್ಕೆ ಸುಪ್ರೀಂ ಕೋರ್ಟ್ ವಕೀಲ ಹಾಗೂ ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅಸಮಧಾನಗೊಂಡಿದ್ದರು. ಇದೀಗ ಅವರು ಟಿಕೆಟ್ ಪಡೆಯುತ್ತಾರಾ ಕಾದು ನೋಡಬೇಕಿದೆ.

Congress puts Bengaluru South, Badami, Madikeri seat on hold

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂದೇ ಹೇಳಲಾಗಿದ್ದ ಬಾಗಲಕೋಟೆಯ ಬಾದಾಮಿ ಕ್ಷೇತ್ರದ ಟಿಕೆಟ್ ನ್ನು ಹಾಲಿ ಡಾ. ದೇವರಾಜ್ ಪಾಟೀಲ್ ಗೆ ನೀಡಲಾಗಿತ್ತು. ಹಾಲಿ ಶಾಸಕ ಬಿಬಿ ಚಿಮ್ಮನಕಟ್ಟಿಯವರಿಗೆ ಟಿಕೆಟ್ ನೀಡದೆ, ಅತ್ತ ಸಿಎಂಗೂ ಅವಕಾಶ ನೀಡದರೆ ಮೂರನೆಯವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ ದೇವರಾಜ್ ಪಾಟೀಲ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರ ಬಿ-ಫಾರ್ಮ್ ಗೆ ನೀಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರ ಸೂಚನೆ ಮೇರೆಗೆ ಬಿ-ಫಾರ್ಮ್ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಪಕ್ಕಕ್ಕೆ ಎತ್ತಿಟ್ಟಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಬಿ-ಫಾರ್ಮ್ ಹಂಚುತ್ತಿದ್ದು, ಬೊಮ್ಮನಹಳ್ಳಿಯ ಟಿಕೆಟ್ ಪಡೆದಿದ್ದ ಪುಷ್ಪ ರಾಜಗೋಪಾಲರೆಡ್ಡಿ ಕೂಡ ಉಮೇದುವಾರಿಕೆ ಪಡೆದುಕೊಳ್ಳಲು ನಿರಾಕರಿಸಿದ್ದಾರೆ.

12 ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ರಣತಂತ್ರ ಹೂಡಿದ ಕಾಂಗ್ರೆಸ್

ಪುಷ್ಮಾ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರಿಗೆ ಬೊಮ್ಮನಹಳ್ಳಿಯ ಟಿಕೆಟ್ ನೀಡಲಾಗಿತ್ತು. ಹೀಗಾಗಿ ಬೊಮ್ಮನಹಳ್ಳಿಯ ಟಿಕೆಟ್ ಪಡೆಯಲು ಅವರು ನಿರಾಕರಿಸಿದ್ದಾರೆ.

ಇದೇ ವೇಳೆ ತಿಪಟೂರು ಕ್ಷೇತ್ರದ ಬಿ-ಫಾರ್ಮ್ ನ್ನು ಕೂಡ ತಡೆ ಹಿಡಿಯಲಾಗಿದೆ. ಇಲ್ಲಿ ಹಾಲಿ ಶಾಸಕ ಕೆ. ಷಡಕ್ಷರಿಯವರಿಗೆ ಟಿಕೆಟ್ ನೀಡಿರಲಿಲ್ಲ. ಇದರಿಂದ ಅವರು ಬಂಡಾಯವೇಳುವ ಬೆದರಿಕೆ ಹಾಕಿದ್ದರು. ಈ ಹಿನ್ನಲೆಯಲ್ಲಿ ಈ ಟಿಕೆಟ್ ಗೆ ತಡೆ ಹಿಡಿಯಲಾಗಿದೆ. ಇಲ್ಲಿ ಬಿ. ನಂಜಮರಿಯವರಿಗೆ ಟಿಕೆಟ್ ನೀಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress puts Madikeri seat on hold after reports that the candidate HS Chandramouli had been Mehul Chowksi's lawyer. At the same time Badami and Bengaluru South constituency tickets also kept hold.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ