• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ರೆಸ್ ಪ್ರತಿಭಟನೆ: ಆಗೊಮ್ಮೆ, ಈಗೊಮ್ಮೆ ನಾವೂ ಬದುಕಿದ್ದೇವೆ ಎಂದು ತೋರಿಸಬೇಕಲ್ಲವೇ!

|

ಬೆಂಗಳೂರು, ಜ 21: ನೂತನ ಕೃಷಿ ಕಾಯಿದೆಯನ್ನು ವಿರೋಧಿಸಿ ಕರ್ನಾಟಕ ಕಾಂಗ್ರೆಸ್ ಬುಧವಾರ (ಜ 20) ಬೃಹತ್ ಪ್ರತಿಭಟನೆಯನ್ನು ಮಾಡಿತ್ತು. ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಆರಂಭವಾದ ಪ್ರತಿಭಟನಾ ಜಾಥಾ, ರಾಜಭವನಕ್ಕೆ ತೆರಳಿ, ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಮೂಲಕ ಅಂತ್ಯಗೊಂಡಿತು. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ಸಿನ ಘಟಾನುಗಟಿ ನಾಯಕರು ಭಾಗವಹಿಸಿದ್ದರು.

ರೈತರ ಹೋರಾಟ ಬೆಂಬಲಿಸಿ, ಕಾಂಗ್ರೆಸ್‌ನಿಂದ ರಾಜಭವನ ಚಲೋ ರೈತರ ಹೋರಾಟ ಬೆಂಬಲಿಸಿ, ಕಾಂಗ್ರೆಸ್‌ನಿಂದ ರಾಜಭವನ ಚಲೋ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿಯ ವಿರುದ್ದ ಕಿಡಿಕಾರಿದರು. ರೈತರು ದಂಗೆ ಏಳುವ ಮುನ್ನ ಕಾಯಿದೆಯನ್ನು ಹಿಂದಕ್ಕೆ ಪಡೆಯಿರಿ ಎಂದು ಆಗ್ರಹಿಸಿದ್ದರು.

ಈ ಪ್ರತಿಭಟನೆಯ ವೇಳೆ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದೆ. ಇನ್ನು, ಬಿಜೆಪಿಯವರು "ಆಗೊಮ್ಮೆ, ಈಗೊಮ್ಮೆ, ನಾವೂ ಬದುಕಿದ್ದೇವೆ ಎಂದು ತೋರಿಸಬೇಕಲ್ಲವೇ. ಅದಕ್ಕಾಗಿ ಈ ಪ್ರತಿಭಟನೆ"ಎಂದು ಲೇವಡಿ ಮಾಡಿದ್ದಾರೆ. ಬಿಜೆಪಿ ನಾಯಕರ ಪ್ರತಿಕ್ರಿಯೆ ಹೀಗಿದೆ:

ಕಾಂಗ್ರೆಸ್‌ನಿಂದ ರಾಜಭವನ ಚಲೋ: ಹೆದ್ದಾರಿ ತಡೆದು ಪ್ರತಿಭಟನೆ ಕಾಂಗ್ರೆಸ್‌ನಿಂದ ರಾಜಭವನ ಚಲೋ: ಹೆದ್ದಾರಿ ತಡೆದು ಪ್ರತಿಭಟನೆ

   Vijayapura: ಉತ್ತರ ಕರ್ನಾಟಕ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ padayatraಗೆ ಚಾಲನೆ | Oneindia Kannada
   ಸಿಎಂ ಯಡಿಯೂರಪ್ಪ

   ಸಿಎಂ ಯಡಿಯೂರಪ್ಪ

   "ಕಾಂಗ್ರೆಸ್ ನಾಯಕರು ಭಾಷಣ ಮಾಡುತ್ತಿರುವಾಗ ಜನ ಎದ್ದು ಹೋಗುತ್ತಿರುವುದನ್ನು ನಾನು ಗಮನಿಸಿದ್ದೇನೆ. ನಾನು ಸತತವಾಗಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದೆ. ಕಾಂಗ್ರೆಸ್ ನವರು ಪ್ರತಿಭಟನೆ ನಡೆಸುತ್ತಿದ್ದರು. ಅವರ ಪ್ರತಿಭಟನೆಯನ್ನು ಅವರು ಮಾಡಿಕೊಳ್ಳಲಿ. ರಾಜಕೀಯ ಪಕ್ಷವಾಗಿ ನಾವೂ ಇದ್ದೇವೆ ಎಂದು ತೋರಿಸಿಕೊಳ್ಳಲು ಆಗೊಮ್ಮೆ, ಈಗೊಮ್ಮೆ ಎದ್ದು ಪ್ರತಿಭಟನೆ ನಡೆಸುತ್ತಾರೆ" - ಸಿಎಂ ಯಡಿಯೂರಪ್ಪ.

   ಸಿ.ಟಿ.ರವಿ ಟ್ವೀಟ್

   "ಎಪಿಎಂಸಿಯಲ್ಲಿ ಆಗುತ್ತಿರುವ ಶೋಷಣೆಯನ್ನು ತಡೆಯಲು ರೈತರಿಗೆ ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಆಗಬೇಕು ಎಂದು ದೇಶದ ಸಂಸತ್ತಿನಲ್ಲಿ ಟೊಮೆಟೊ, ಆಲೂಗಡ್ಡೆಯ ಉದಾಹರಣೆ ಕೊಟ್ಟಿದ್ದ ರಾಹುಲ್ ಗಾಂಧಿ ಈಗ ಅದೇ ಕಾನೂನನ್ನು ವಿರೋಧ ಮಾಡುತ್ತಿರುವುದು ಯಾಕೆ? ನೂತನ ಕೃಷಿ ಕಾಯಿದೆಗಳ ಮುಖಾಂತರ ಕೇಂದ್ರ ಸರಕಾರ ಅವರೇ ಗುರುತಿಸಿದ ತೊಂದರೆಗಳನ್ನು ಹೋಗಲಾಡಿಸಿದಾಗ ವಿರೋಧ ಮಾಡುತ್ತಿರುವುದ್ಯಾಕೆ?" - ಸಿ.ಟಿ.ರವಿ ಟ್ವೀಟ್.

   ಡಿ.ವಿ.ಸದಾನಂದ ಗೌಡ ಟ್ವೀಟ್

   ಡಿ.ವಿ.ಸದಾನಂದ ಗೌಡ ಟ್ವೀಟ್

   "ನಿಮ್ಮ @INCIndia & @INCKarnataka ಆಡಳಿತದಲ್ಲಿ ‌ಅತಿಹೆಚ್ಚು ರೈತರ ಆತ್ಮಹತ್ಯೆ ನಡೆದಿದೆ. ಅಧಿಕಾರದಲ್ಲಿದ್ದಾಗ ರೈತರ ಮೇಲೆ ಇನ್ನಿಲ್ಲದ ದೌರ್ಜನ್ಯ ಎಸಗಿದ ನಿಮಗೀಗ ರೈತರ ಬಗ್ಗೆ ಅಗಾಧ ಪ್ರೀತಿ. ಇದು ಮಾಹಿತಿಯುಗ. ಬಹುಕಾಲ ನೀವು ರೈತರಿಗೆ ಮಂಕುಬೂದಿ ಎರಚಲಾರಿರಿ" - ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಟ್ವೀಟ್.

   ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

   ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

   "ಎಪಿಎಂಸಿಯ ಪ್ರಸ್ತುತ ಸ್ಥಿತಿ ಏನಿದೆ ಎಂಬುದನ್ನು ಇವತ್ತು ಅವಶ್ಯವಾಗಿ ಅರಿಯಬೇಕಾಗಿದೆ. ಅವ್ಯವಸ್ಥೆ ಮತ್ತು ಶುಲ್ಕಗಳ ಆಗರವಾಗಿದ್ದ ಎಪಿಎಂಸಿಯ ದೌರ್ಜನ್ಯಕ್ಕೆ ತಡೆಹೇರಲು ರೈತ ಕಾಯ್ದೆ ತಂದಿರುವ ಮೋದಿ ಸರಕಾರ ಸ್ಥೂಲವಾಗಿ ಅಧ್ಯಯನ ನಡೆಸಿಯೇ ನಿರ್ಧಾರ ಕೈಗೊಂಡಿದೆ" - ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್.

   ಆರೋಗ್ಯ ಸಚಿವ ಡಾ.ಸುಧಾಕರ್

   ಆರೋಗ್ಯ ಸಚಿವ ಡಾ.ಸುಧಾಕರ್

   "ಚುನಾವಣಾ ಪ್ರಣಾಳಿಕೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಪರಿವರ್ತನೆ ತರುವ ಭರವಸೆ ನೀಡಿದ್ದ ಕಾಂಗ್ರೆಸ್‍, ಈಗ PM @narendramodi ರವರ ರೈತಪರ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿದೆ. ಈ ಹೋರಾಟ ಕೇವಲ ಬೂಟಾಟಿಕೆಯೇ ಹೊರತು ರೈತಪರ ಕಾಳಜಿಯಲ್ಲ. ರೈತರ ಹಾದಿತಪ್ಪಿಸಿ @INCKarnataka ಅವರ ಅಭ್ಯುದಯಕ್ಕೆ ಮುಳುವಾಗಿದೆ.

   English summary
   Congress Massive Protest In Bengaluru Against New Farm Law: Karnataka BJP Leaders Reaction,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X