ರಾಜೀನಾಮೆ ನೀಡಿದ ಸುಧಾಕರ್‌ ಗೆ ದಿಗ್ಬಂದನ ಹಾಕಿದ ಕೈ ಮುಖಂಡರು!

ಬೆಂಗಳೂರು, ಜುಲೈ 10: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರನ್ನು ಕಾಂಗ್ರೆಸ್‌ನ ಮುಖಂಡರು ವಿಧಾನಸೌಧದ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ!

ಹೌದು, ರಾಜೀನಾಮೆ ನೀಡಲು ಸ್ಪೀಕರ್ ಕಚೇರಿಗೆ ಆಗಮಿಸಿದ್ದ ಸುಧಾಕರ್ ಅವರನ್ನು ಸುತ್ತುವರೆದ ಕಾಂಗ್ರೆಸ್ ಮುಖಂಡರು, ಶಾಸಕರು ಸುಧಾಕರ್ ಅವರನ್ನು ಸಚಿವ ಜಾರ್ಜ್‌ ಕೊಠಡಿಗೆ ಕರೆದುಕೊಂಡು ಹೋಗಿ ಕೂಡಿಹಾಕಿದರು.

ಸುಧಾಕರ್ ಅವರನ್ನು ಸುತ್ತುವರೆದ ಕಾಂಗ್ರೆಸ್ ಮುಖಂಡರು ಮತ್ತು ಕೆಲವು ಶಾಸಕರು, ಸುಧಾಕರ್ ಅವರನ್ನು ಹೀನಾ-ಮಾನ ಜರಿದರು, ರಾಜೀನಾಮೆ ನೀಡಿದ್ದಕ್ಕೆ ಕಾರಣ ಕೇಳಿ ಬೈದರು.

Congress leaders locked down Chikkaballapur MLA Sudhakar

ಸುಧಾಕರ್ ಮತ್ತು ಎಂಟಿಬಿ ನಾಗರಾಜು ಒಟ್ಟಿಗೆ ರಾಜೀನಾಮೆ ನೀಡಲು ಆಗಮಿಸಿದ್ದರು, ಆದರೆ ನಾಗರಾಜು ರಾಜೀನಾಮೆ ನೀಡಿ ವಿಧಾನಸೌಧದಿಂದ ಕಾಲ್ಕಿತ್ತರು, ಆದರೆ ಸುಧಾಕರ್ ಅವರು ಕಾಂಗ್ರೆಸ್ ಶಾಸಕರ ಕೈಗೆ ಸಿಕ್ಕಿ ಹಾಕಿಕೊಂಡರು, ಅವರನ್ನು ಅಕ್ಷರಷಃ ಎಳೆತಂದು ಕೊಠಡಿಯಲ್ಲಿಟ್ಟರು. ಈ ಮಧ್ಯೆ ಪೊಲೀಸರು ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಸಿದ್ದರಾಮಯ್ಯ ಅವರಿಗೆ ವಿಧಾನಸೌಧಕ್ಕೆ ಬುಲಾವ್ ನೀಡಲಾಗಿದ್ದು, ಸಿದ್ದರಾಮಯ್ಯ ಅವರು ಸುಧಾಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಸುಧಾಕರ್ ಅವರನ್ನು ಒತ್ತೆ ಇರಿಸಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+