ಕಾಂಗ್ರೆಸ್ ನಾಯಕರು ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆ: ಮಾಜಿ ಸಿಎಂ

ಹುಬ್ಬಳ್ಳಿ, ಜನವರಿ 27: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ ನಾಯಕರು ಗಾಳ ಹಾಕಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಬಿಜೆಪಿಗೆ ವಾಪಸಾದಂತೆ ಇನ್ನಷ್ಟು ಕಾಂಗ್ರೆಸ್ ನಾಯಕರು ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲಕ್ಷ್ಮಣ ಸವದಿ, ಜನಾರ್ದನ ರೆಡ್ಡಿ ಮರಳಿ ಬಿಜೆಪಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇವರನ್ನು ಹೊರತುಪಡಿಸಿ ಹಲವರು ಬರುವ ನಿರೀಕ್ಚೆ ಇದೆ. ಹೆಸರು ಬಹಿರಂಗ ಪಡಿಸದಂತೆ ಮನವಿ ಮಾಡಿಕೊಂಡಿದ್ದಾರೆ‌. ಮೂಲ ಕಾಂಗ್ರೇಸಿಗರು ಬರುವುದಂತೂ ನಿಶ್ಚಿತ ಎಂದರು.

Congress Leaders Join BJP Soon Says Basavaraj Bommai

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೆಲಸ ಕಾರ್ಯಗಳನ್ನು‌ ಮೆಚ್ಚಿಕೊಂಡಿರುವ ಕಾಂಗ್ರೆಸ್ ನಾಯಕರು ಈಗಾಗಲೇ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ. ಜಗದೀಶ ಶೆಟ್ಟರ ಬಿಜೆಪಿ ಸೇರ್ಪಡೆ ವಿಚಾರ ನನಗೆ ಗೊತ್ತಿರಲಿಲ್ಲ. ಶೆಟ್ಟರ ನೇರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದರು.

I N D I A ಒಕ್ಕೂಟದಲ್ಲಿನ ಬಿರುಕು ಎಲ್ಲರಿಗೂ ಗೊತ್ತಿರುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹಲವಾರು ರಾಜ್ಯಗಳಲ್ಲಿ ಪರಸ್ಪರ ವಿರೋಧ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ವಿರೋಧಾಭಾಸ ಇರುವ ಪಕ್ಷಗಳನ್ನ ಒಗ್ಗೂಡಿಸಲು ಸಾಧ್ಯವಿಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ವಿರುದ್ಧವೇ ಹೋರಾಟ ಮಾಡಿವೆ. ಇದರಿಂದ ಕಾಂಗ್ರೆಸ್ ನಲ್ಲಿ ಈಗಾಗಲೇ ಆಂತರಿಕ ಕಚ್ಚಾಟ ಆರಂಭವಾಗಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಕಾಂಗ್ರೆಸ್ ಇಬ್ಭಾಗವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು

Congress Leaders Join BJP Soon Says Basavaraj Bommai

ಜಗದೀಶ ಶೆಟ್ಟರ ಬಿಜೆಪಿ ಸೇರ್ಪಡೆ: ಶಿವರಾಜ ತಂಗಡಗಿ ಹೇಳಿದ್ದೇನು?

ಜಗದೀಶ ಶೆಟ್ಟರ ಮರಳಿ ಬಿಜೆಪಿ ಸೇರ್ಪಡೆಯಾದ ನಂತರ ಕಾಂಗ್ರೆಸ್ ಏನು ಆಗಿಲ್ಲ. ಆದರೆ ಶೆಟ್ಟರ ಗೌರವ ಕಡಿಮೆಯಾಗಿದೆ. ಮಾಜಿ ಸಿಎಂ ಆಗಿದ್ದವರು ಈ ರೀತಿ ನಡೆದುಕೊಳ್ಳಬಾರದಿತ್ತು. ಅವರು ಹಿರಿಯರು ಹೋಗಿದ್ದು ನೋವಾಗಿದೆ.ನಮ್ಮಂಥವರ ಮಾಡಬೇಕಾಗಿತ್ತು.ಆದರೆ ಅವರು ಹೋಗಿದ್ದು ನೋವಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಬರ ಪರಿಹಾರ ಹಣವನ್ನು ಈಗ ರೈತರ ಖಾತೆಗೆ ಹಾಕುತ್ತೇವೆ. ಆದರೆ ಕೇಂದ್ರ ಸರಕಾರವು ಬರಪರಿಹಾರ ನೀಡಬೇಕು. ಈ ಕುರಿತು ಎಂ ಪಿಗಳು ಈ ಕುರಿತು ಮಾತನಾಡುತ್ತಿಲ್ಲ ಇದು ನೋವಿನ ಸಂಗತಿ. ಕೇಂದ್ರ ಸರಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ.ಅವರಿಗೆ ಬೇಕಿದ್ದು ಮಂತ್ರಾಕ್ಷತೆ, ಅಂತ್ರಾಕ್ಷತೆ ನೀಡುತ್ತಿದ್ದಾರೆ. ಮೋದಿ ಭೇಟಿಯಾದಾಗ ಸಿಎಂರವರಿಗೆ ಬರ ಕುರಿತು ಮಾತನಾಡಲು ಅವಕಾಶ ನೀಡಿಲ್ಲ.‌ ಮೋದಿ ಕೇವಲ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.ಅವರಿಗೆ ರೋಡ್ ಶೋ ಟೈಂ ಇದೆ. ಆದರೆ ಜನರ ರೈತರ ಸಮಸ್ಯೆ ಕೇಳುವ ಸಮಯವಿಲ್ಲ ಎಂದರು.

ಸಚಿವ ರಾಜಣ್ಣನವರ ನಾವೇನು ಹೈಕಮಾಂಡ ಗುಲಾಮರಾ ಎಂಬ ಹೇಳಿಕೆ ಗೊತ್ತಿಲ್ಲ. ಪ್ರಜಾಪ್ರಭುತ್ವ ಏನಾದರೂ ಇದ್ದರೆ ಅದು ಕಾಂಗ್ರೆಸ್ಸಿನಲ್ಲಿ ಮಾತ್ರ. ಕೇಂದ್ರದಲ್ಲಿ 10 ವರ್ಷದ ಆಡಳಿತ ಮಾಡಿದ ಮೋದಿ ತಮ್ಮ ಎಂ ಪಿಗಳೊಂದಿಗೆ ಮಾತನಾಡಿ ಸಮಸ್ಯೆ ಏನು ಎಂದು ಕೇಳಿದ್ದಾರಾ? ಎಂದು ಪ್ರಶ್ನಿಸಿದರು.

ರಾಹುಲ್ ಯಾತ್ರೆಯಿಂದ ಬಿಜೆಪಿ ನಡುಕಾಗುತ್ತದೆ. ಅದಕ್ಕಾಗಿ ತಡೆಯುವ ಯತ್ನ ಮಾಡಿದ್ದಾರೆ.ಮುಂದಿನ ದಿನಗಳಲ್ಲಿ ಬಿಜೆಪಿಯವರಿಗೂ ರಾಮನೂ ಸಹ ಶಾಪ ಹಾಕುತ್ತಾನೆ. ಶ್ರೀರಾಮ ಪವರಫುಲ್ ದೇವರು.ಇವರ ನಡಾವಳಿಕೆಗೆ ಕನಸಿನಲ್ಲಾದರೂ ಶಾಪ ಹಾಕುತ್ತಾನೆ ಎಂದರು.

ನಾವು ಜೈ ರಾಮ ಎಂದರೆ ಬಿಜೆಪಿಗ್ಯಾಕೆ ಆತಂಕ. ಸಂಸದ ಅನಂತಕುಮಾರ ಹೆಗ್ಡೆ ಅವನನ್ನು ಹುಚ್ಚ ಎಂದು ಬಿಜೆಪಿಯವರು ಬಿಟ್ಟಿದ್ದಾರೆ.ಅವರ ಬಗ್ಗೆ ನಾವ್ಯಾಕೆ ಮಾತನಾಡೋಣ. ಆನೇಗೊಂದಿ ಹಾಗು ಕನಕಗಿರಿ ಉತ್ಸವಕ್ಕೆ ಪ್ರಸ್ತಾವನೆ ತರಿಸಿಕೊಂಡಿದ್ದೇನೆ. ಈಗಾಗಲೇ 3.50 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ.ಅಂಜನಾದ್ರಿಗೆ ಈಗಾಗಲೇ 100 ಕೋಟಿ ನೀಡಲಾಗಿದೆ.ಇನ್ನೂ 100 ಕೋಟಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+