20 ಕ್ಷೇತ್ರಗಳ ಬಿಜೆಪಿ ಟಿಕೆಟ್‌ ಘೋಷಣೆ: ಎಂಪಿ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಗೆ ಅಭ್ಯರ್ಥಿಗಳು ಸಿಗುತ್ತಿಲ್ಲ: ಮಾಜಿ ಸಿಎಂ

ಬೆಂಗಳೂರು, ಮಾರ್ಚ್‌ 14: ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಲು ಅಭ್ಯರ್ಥಿಗಳು ಸಿಗುತ್ತಿಲ್ಲ. ಸಚಿವರೂ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಪಕ್ಷದ ವರಿಷ್ಠರು ನಿರ್ಷಯ ಮಾಡಿ ಪ್ರಕಟಣೆ ಮಾಡಿದ್ದಾರೆ. ಸದಾಕಾಲ ರಾಜಕೀಯವಾಗಿ ಆಶಿರ್ವಾದ ಮಾಡಿ ಯಡಿಯೂರಪ್ಪ ಅವರು ಹರಸಿದ್ದಾರೆ. ಅವರ ಆಶಿರ್ವಾದ ಪಡೆದಿದ್ದೇನೆ. ಪ್ರಚಾರಕ್ಕೂ ಕೂಡ ಬರುತ್ತೇನೆ ಅಂತ ಹೇಳಿದ್ದಾರೆ ಎಂದು ಹೇಳಿದರು.

Congress Is Not Getting Candidates To Contest MP Elections Says Basavaraj Bommai

ಈ ಬಾರಿ ಅಭ್ಯರ್ಥಿಗಳ ಆಯ್ಕೆ ವಿನೂತನ ರೀತಿಯಾಗಿದೆ. ಡಾ. ಮಂಜುನಾಥ್ ಅವರು ಲಕ್ಷಾಂತರ ಜನರಿಗೆ ಆರೋಗ್ಯ ಕಾಪಾಡಿದ್ದಾರೆ. ಒಳ್ಳೆಯ ಕೆಲಸ ಮಾಡಿದವರಿಗೆ ಪಕ್ಷ ಪುರಸ್ಕಾರ ನೀಡುತ್ತದೆ ಅನ್ನುವ ಸಂದೇಶ ನೀಡಿದೆ. ಮತ್ತೆ ಮಹಾರಾಜ ಯದುವೀರ ಒಡೆಯರ್ ಅವರಿಗೆ ಟಿಕೆಟ್ ನೀಡಿರುವುದು ದಕ್ಷಿಣ ಕರ್ನಾಟಕದಲ್ಲಿ ಒಳ್ಳೆಯ ಸಂದೇಶ ನೀಡಿದಂತಾಗಿದೆ.

ದಕ್ಷಿಣ ಭಾರತದಲ್ಲಿ ಅಭಿವೃದ್ಧಿ ಆಗಿದ್ದರೆ ಅದಕ್ಕೆ ಒಡೆಯರ್ ಅವರು ಕಾರಣ. ಅವರು ಹಿಂದುಳಿದ ವರ್ಗದವರ ಅಭಿವೃದ್ಧಿ ಮಾಡಿದ್ದಾರೆ. ಆ ಮನೆತನಕ್ಕೆ ಟಿಕೆಟ್ ನೀಡಿರುವುದು ದಕ್ಷಿಣ ಕರ್ನಾಟಕಕ್ಕೆ ಸಂತಸ ತಂದಿದೆ. ಹಳೆ ಬೇರು, ಹೊಸ ಚಿಗುರಿಗೂ ಅವಕಾಶ ನೀಡಿದೆ. ಈ ರೀತಿ ನಿರ್ಣಯ ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದರು.

ಕಾಂಗ್ರೆಸ್ ನಲ್ಲಿ ಆ ಪರಿಸ್ಥಿತಿ ಇಲ್ಲ. ಸಚಿವರೂ ಸೋಲುವ ಭಯದಲ್ಲಿ ಇದ್ದಾರೆ. ಟಿಕೆಟ್ ಸಿಗದ ಸಂಸದರು ನಮ್ಮ ಸಂಪರ್ಕದಲ್ಲಿದ್ದಾರೆ ಅನ್ನುವುದು ಡಿಸಿಎಂ ಡಿಕೆಶಿವಕುಮಾರ್ ಅವರ ಚಾಳಿಯಾಗಿದೆ. ಅವರ ಪಕ್ಷದಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳು ಸಿಗುತ್ತಿಲ್ಲ ಎಂದರು.

ಬಿಜೆಪಿ ಎರಡನೇ ಪಟ್ಟಿಯಲ್ಲಿ ಯಾರಿಗೆ ಟಿಕೆಟ್!

ಚಿಕ್ಕೋಡಿ -ಅಣ್ಣಾ ಸಾಹೇಬ್ ಜೊಲ್ಲೆ

ಬಾಗಲಕೋಟೆ -ಪಿ.ಸಿ.ಗದ್ದಿಗೌಡರ್

ಉಡುಪಿ-ಚಿಕ್ಕಮಗಳೂರು -ಕೋಟ ಶ್ರೀನಿವಾಸ ಪೂಜಾರಿ

ಹಾವೇರಿ -ಬಸವರಾಜ ಬೊಮ್ಮಾಯಿ

ಮೈಸೂರು -ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಬೆಂಗಳೂರು ಗ್ರಾಮಾಂತರ -ಡಾ.ಸಿ.ಎನ್.ಮಂಜುನಾಥ

ಬೆಂಗಳೂರು ಉತ್ತರ -ಶೋಭಾ ಕರಂದ್ಲಾಜೆ

ಬೆಂಗಳೂರು ದಕ್ಷಿಣ -ತೇಜಸ್ವಿ ಸೂರ್ಯ

ಬೆಂಗಳೂರು ಕೇಂದ್ರ -ಪಿ.ಸಿ.ಮೋಹನ್

ತುಮಕೂರು -ವಿ.ಸೋಮಣ್ಣ

ದಕ್ಷಿಣ ಕನ್ನಡ -ಕ್ಯಾಪ್ಟನ್ ಬ್ರಿಜೇಶ್ ಚೌಟಾ

ಚಾಮರಾಜನಗರ -ಎಸ್.ಬಾಲರಾಜು

ಧಾರವಾಡ -ಪ್ರಹ್ಲಾದ್ ಜೋಶಿ

ಕೊಪ್ಪಳ -ಡಾ.ಬಸವರಾಜ ತ್ಯಾವಟೂರು

ದಾವಣಗೆರೆ -ಗಾಯತ್ರಿ ಸಿದ್ದೇಶ್ವರ್

ಬಳ್ಳಾರಿ -ಬಿ.ಶ್ರೀರಾಮುಲು

ಕಲಬುರಗಿ -ಡಾ.ಉಮೇಶ್ ಜಾಧವ್

ಬೀದರ್ -ಭಗವಂತ ಖೂಬಾ

ವಿಜಯಪುರ -ರಮೇಶ್ ಜಿಗಜಿಣಗಿ

ಶಿವಮೊಗ್ಗ -ಬಿ.ವೈ.ರಾಘವೇಂದ್ರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+