ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅಂತ ಗೊತ್ತಿದ್ದು, ಜನರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ: ಆರಗ ಜ್ಞಾನೇಂದ್ರ

|
Google Oneindia Kannada News

ಬೆಂಗಳೂರು,ಜನವರಿ 17: ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅಂತ ಅವರಿಗೆ ಗೊತ್ತಿದೆ. ಹೀಗಾಗಿ ಅವರು ರಾಜ್ಯದ ಜನರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಕಾಂಗ್ರೆಸ್ ನ ಭರವಸೆಗಳ ಕುರಿತು ಲೇವಡಿ ಮಾಡಿದ್ದಾರೆ.

ಈ ಕುರಿತು ನಗರದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜವಾಬ್ದಾರಿಯುತವಾಗಿರುವ ಪಕ್ಷ ಉಚಿತ ಕೊಡುಗೆ ಕೊಡೋಕೆ ಹೋಗಲ್ಲ. ಹೀಗೆ ಉಚಿತ ಘೋಷಣೆ ಮಾಡೋಕೆ ಬೊಕ್ಕಸಕ್ಕೆ ಹಣ ಎಲ್ಲಿಂದ ಬರುತ್ತದೆ. ಹೀಗೆ ಸುಳ್ಳು ಭರವಸೆ ಕೊಟ್ಟರೆ ರೈತರು, ನೀರಾವರಿ, ರಸ್ತೆಗಳು ಇದಕ್ಕೆಲ್ಲ ಎಲ್ಲಿಂದ ದುಡ್ಡು ತರುತ್ತಾರೆ ಎಂದು ಪ್ರಶ್ನಿಸಿದರು.

ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳಿಗೆ ರೂ. 2000 : ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಘೋಷಣೆಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳಿಗೆ ರೂ. 2000 : ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಘೋಷಣೆ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರು ಅನೇಕ ಕಾರ್ಯಕ್ರಮಗಳನ್ನ ಜಾರಿಗೆ ತಮದರು, ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದರು. ಕಾಂಗ್ರೆಸ್ ನವರು ವೋಟಿಗಾಗಿ ಸುಳ್ಳು ಭರವಸೆ ನೀಡುತ್ತಿದ್ದಾರೆ. ಸುಳ್ಳು ಭರವಸೆ ಕೊಟ್ಟು ಚುನಾವಣೆ ಎದುರಿಸುತ್ತಿದ್ದಾರೆ. ಇವರ ಸುಳ್ಳು ಭರವಸೆಯನ್ನ ಜನರು ನಂಬಲ್ಲ. ಜನರಿಗೆ ಎಲ್ಲವೂ ಗೊತ್ತಾಗಲಿದೆ ಅವರೇ ಪಾಠ ಕಲಿಸುತ್ತಾರೆ ಎಂದು ಟಾಂಗ್ ನೀಡಿದರು.

Congress Is Giving False Promises To People Araga Jnanendra Said

ಇನ್ನೂ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಭ್ರಷ್ಟಾಚಾರ ಆರೋಪ ಕುರಿತು ಪ್ರತಿಕ್ರಿಯಿಸಿ, ಕೆಂಪಣ್ಣ ವಿರುದ್ದವೂ ಕೇಸ್ ನಡೆಯುತ್ತಿದೆ. ತಿಪ್ಪಾರೆಡ್ಡಿ ವಿರುದ್ದ ಆರೋಪ ಮಾಡಿದ್ದಾರೆ. ಸಾಕ್ಷ್ಯಾದಾರ ಇಲ್ಲದೆ ಸುಳ್ಳು ಆರೋಪ ಮಾಡಿದ್ದಾರೆ. ಸುಖಾಸುಮ್ಮನೆ ಆರೋಪ ಮಾಡಬಾರದು. ಸುಳ್ಳು ಆರೋಪ ಮಾಡಿದವರು ಅನುಭವಿಸುತ್ತಾರೆ ಎಂದು ಕಿಡಿಕಾರಿದರು.

ಸ್ಯಾಂಟ್ರೋ ರವಿ ಕೇಸ್ ಸಿಐಡಿಗೆ ವಹಿಸಿರುವ ವಿಚಾರವಾಗಿ ಮಾತನಾಡಿ, ಸ್ಯಾಂಟ್ರೋ ರವಿ ಕೇಸ್ ಮೈಸೂರು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಆದರೆ ತನಿಖೆ ಪಾರದರ್ಶಕವಾಗಿ ನಡೆಯಬೇಕು, ಯಾವುದೇ ಒತ್ತಡ ಇರಬಾರದು. ಹೀಗಾಗಿ ಈ ಪ್ರಕರಣವನ್ನು ಸಿಐಡಿಗೆ ವಹಿಸುವ ನಿರ್ಣಯ ತೆಗೆದುಕೊಂಡಿದ್ದೇನೆ. ಸಿಐಡಿ ಪಿಎಸ್ ಐ ಹಗರಣ ತನಿಖೆ ಮಾಡಿದ್ರು ಅವರಿಗೆ ನಿಖೆಗೆ ವಹಿಸಿದ್ದೇವೆ. ಬಹಳ ಚನ್ನಾಗಿ ತನಿಖೆ ಮಾಡಬೇಕು, ಶಿಕ್ಷೆ ಆಗಬೇಕು ಎಂಬ ಬದ್ಧತೆಯಿಂದ ತನಿಖೆ ನಡೆಯಬೇಕು. ಅವನ ಮೇಲೆ ಅತ್ಯಾಚಾರ, ಕೊಲೆ ಬೆದರಿಕೆ ಹಲ್ಲೆ, ವರದಕ್ಷಿಣೆ ಕಿರುಕುಳ ಪ್ರಕರಣದ ತನಿಖೆ ಆಗುತ್ತೆ ಎಂದು ಹೇಳಿದರು.

Congress Is Giving False Promises To People Araga Jnanendra Said

ಸ್ಯಾಂಟ್ರೋ ರವಿ ಕೇಸ್ ಸಿಐಡಿಗೆ ಒಪ್ಪಿಸುವಷ್ಟು ಗಂಭೀರತೆ ಇತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಯಾವುದು ಗಂಭೀರವಾದ ಕೇಸ್..? ಯಾವುದು ಗಂಭೀರ ಕೇಸ್ ಇಲ್ಲ ಅಂತ ಅಲ್ಲ. ಸಾರ್ವಜನಿಕವಾಗಿ ಚರ್ಚೆ ಆಗಿರುವ ಪ್ರಕರಣ ಇದು, ಇದೊಂದು ಪಾರದರ್ಶಕವಾಗಿ ತನಿಖೆ ಮಾಡಿ ಮುಖವಾಡ ಕಳಚಿ ಹೊರಗೆ ತರಬೇಕು. ಕಳೆದ 20 ವರ್ಷಗಳಲ್ಲಿ ರವಿ ಯಾರೆಲ್ಲ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದ..? ಏನಾಗಿದೆ ಎಂಬುದು ಇದರ ಜೊತೆಗೆ ತನಿಖೆಯಿಂದ ಹೊರಬರಬೇಕು. ಹೀಗಾಗಿ ಸಿಐಡಿಗೆ ತನಿಖೆಗೆ ಒಪ್ಪಿಸಿದ್ದೇನೆ, ತನಿಖೆ ಮಾಡಿಸಿದ್ರು‌ ಕಷ್ಟ, ತನಿಖೆ ಮಾಡಸಿದಿದ್ದರೂ ಕಷ್ಟ. ಹೀಗೆ ಹೇಳಿದ್ರೆ ಏನು ಮಾಡೋಕೆ ಆಗಲ್ಲ. ಸರ್ಕಾರ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಿದರು.

ಮಲೆನಾಡಿನ ಮಿತ್ರರ ಕಾರ್ಯಕ್ರಮದಲ್ಲಿ ಆರಗ ಜ್ಞಾನೇಂದ್ರ ಬಾವುಕರಾದ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಾನು ಪ್ರಾಮಣಿಕ, ನನ್ನ ಪೋಟೋ ಇಟ್ಟು ರಾಜಕೀಯ ಮಾಡಿದರು. ಅದು ಮನಸ್ಸಿಗೆ ನೋವಾಯ್ತು, ಹಾಗಾಗಿ ಬಾವುಕ ಆದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದರು ಕಷ್ಟವಾಗುತ್ತೆ, ನನ್ನ ಜೊತೆ ಎಲ್ಲ ಪೋಟೋ ತೆಗೆಸಿಕೊಳ್ತಾರೆ. ಕೆಲವರು ಇದರಲ್ಲಿ ಬ್ಯೂಸಿನೆಸ್ ಮಾಡಿಕೊಂಡಿದ್ದಾರೆ. ವೃತ್ತಿ ಮಾಡಿಕೊಂಡಿದ್ದರೆ ಅವರಿಗೆ ಹತ್ತರಲ್ಲಿ ಹನ್ನೊಂದು ಇದು, ನನ್ನಂತ ಪ್ರಯಾಣಿಕರಿಗೆ ನೋವಾಗುತ್ತೆ ಎಂದು ಹೇಳಿದರು.

English summary
I know that Congress will not come to power. Thus they are giving false promises to people Home Minister araga jnanendra said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X