ಪಠ್ಯದಲ್ಲಿ ಎಲ್ಲಾ ಸರ್ಕಾರಗಳೂ ರಾಜಕೀಯ ಮಾಡಿಲ್ಲ, ಆದ್ರೆ ಕಾಂಗ್ರೆಸ್ ಮಾಡಿದೆ: ಬಿ ಸಿ ನಾಗೇಶ್
ಬೆಂಗಳೂರು, ಅಕ್ಟೋಬರ್10: ನಾವು ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದರಲ್ಲಿ ತಪ್ಪಿದ್ದರೆ ಮರು ಪರಿಷ್ಕರಿಸಿ ನಮ್ಮದೇನು ಅಭ್ಯಂತರ ಇಲ್ಲ. ಪಠ್ಯ ವಿಚಾರದಲ್ಲಿ ಎಲ್ಲ ಸರ್ಕಾರಗಳು ರಾಜಕೀಯ ಮಾಡಿಲ್ಲ, ಆದರೆ ಕಾಂಗ್ರೆಸ್ ಮಾಡಿದೆ ಎಂದು ಮಾಜಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
ಈ ಕುರಿತು ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿ, 5-6 ತರಗತಿಯ ಮಕ್ಕಳಿಗೆ ಜಾತಿವಾದದ, ಜಾತಿ ವಿಭಜನೆಯ ಬೀಜ ಬಿತ್ತುವ ಅವಶ್ಯಕತೆ ಇರುವ ಪಠ್ಯ ತರುವ ಹುನ್ನಾರ ನಡೆದಿದೆ. ರಾಜಕೀಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಈ ಹುನ್ನಾರ ನಡೆದಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು.

ಪಠ್ಯದ ಮೂಲಕ ಮಕ್ಕಳನ್ನು ಮುಂದಕ್ಕೆ ಕರೆದೊಯ್ಯದೆ ಹಿಂದಕ್ಕೆ ಕರೆದೊಯ್ಯುವುದು ಮೂರ್ಖತನ. 2009ರಲ್ಲಿ ಮಕ್ಕಳ ಮಾನಸಿಕ ಶಕ್ತಿ ವಿಕಸನಕ್ಕೆ ಸಂಬಂಧಿಸಿ ವಿವಿಧ ಪುಸ್ತಕಗಳನ್ನು ಹೊರತರಲಾಗಿದೆ ಎಂದರು.
511 ಪಠ್ಯಗಳನ್ನು ಬದಲಿಸಿದ ಸಮಿತಿಯಲ್ಲಿ ಒಬ್ಬನೇ ಒಬ್ಬ ರಾಜಕಾರಣಿ ಇರಲಿಲ್ಲ ಎಂದು ವಿವರಿಸಿದ ಅವರು, ಎಲ್ಲರೂ ಶಿಕ್ಷಣ ತಜ್ಞರಿದ್ದರು ಎಂದು ಸ್ಪಷ್ಟಪಡಿಸಿದರು. ಅದಕ್ಕೆ ಕೇಸರೀಕರಣ, ಭಾರತೀಕರಣದ ಒತ್ತು ಕೊಟ್ಟರು. ಕಾಂಗ್ರೆಸ್ಸಿನ ಮೂಲಕ ಎಂಎಲ್‍ಸಿ ಆದ ಬರಗೂರು ರಾಮಚಂದ್ರಪ್ಪನವರ ಅವಧಿಯಲ್ಲಿ ಹೊರತುಪಡಿಸಿದರೆ ರಾಜಕಾರಣಿ ಪಠ್ಯಪುಸ್ತಕ ಸಮಿತಿಯಲ್ಲಿ ಇರಲಿಲ್ಲ ಎಂದು ಹೇಳಿದರು.

ಬರಗೂರು ಅವರನ್ನೂ ನಾನು ರಾಜಕಾರಣಿ ಎನ್ನುವುದಿಲ್ಲ. ಆದರೆ, ಅವರು ಒಂದು ಪಕ್ಷದಿಂದ ಎಂಎಲ್‍ಸಿ ಆದವರು ಎಂದು ತಿಳಿಸಿದರು. ಪ್ರಾಥಮಿಕ ಶಿಕ್ಷಣದಲ್ಲಿ ಪಾಠ ಮಾಡಿದವರು, ಮಕ್ಕಳನ್ನು ಅರ್ಥ ಮಾಡಿಕೊಂಡವರನ್ನು ನೇಮಿಸಬೇಕಿತ್ತು. ಬರಗೂರು ಅವರ ಪಠ್ಯಪುಸ್ತಕಗಳನ್ನು ಆಕ್ಷೇಪ ಬಂದಾಗ ಎನ್‍ಸಿಇಆರ್‍ಟಿಗೆ ಕಳಿಸಲಾಗಿತ್ತು. ಆಗ ಬಂದ ವರದಿಯಲ್ಲಿ ಇದು ಮಕ್ಕಳ ಮಟ್ಟಕ್ಕಿಲ್ಲ. ಆಗ ಎನ್‍ಇಪಿ ಬರಲಿದೆ ಎಂಬ ಕಾರಣಕ್ಕೆ ಸೋಷಿಯಲ್ ಸೈನ್ಸ್ ಮತ್ತು ಕನ್ನಡದಲ್ಲಿ ಮಾತ್ರ ಬದಲಾವಣೆ ಮಾಡಿದ್ದರು ಎಂದು ತಿಳಿಸಿದರು.
2009ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ 511 ಪಾಠಗಳನ್ನು ಸಮಗ್ರ ಬದಲಾವಣೆಯ ಚಿಂತನೆ ನಡೆಯಿತು. ಶಿಕ್ಷಣ ಎಂದರೆ ಮುಂದೆ ಹೋಗುವಂಥದ್ದು, ಹಿಂದೆ ಬರುವಂಥದ್ದಲ್ಲ. 2023ರ ರಾಷ್ಟ್ರೀಯ ಪಠ್ಯಕ್ರಮ ನೀತಿ ಬಂದಿದೆ. 2005ರ ಶಿಫಾರಸಿನಡಿ ಮತ್ತೆ ಪಠ್ಯಕ್ರಮ ರಚಿಸುವ ಮೂರ್ಖ ಕ್ರಮ ನಡೆದಿದೆ ಎಂದು ಟೀಕಿಸಿದರು. ನಮ್ಮ ಮಕ್ಕಳನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಬರಗೂರು ಅವರ ಕಮಿಟಿಗೆ ಸುಮಾರು 2.5 ಕೋಟಿಯಷ್ಟು ಖರ್ಚಾಗಿತ್ತು. ಅದೇ ಶಿಫಾರಸನ್ನು ತರುವುದಾದರೆ ಮತ್ತೆ ಇನ್ನಷ್ಟು ಖರ್ಚು ಬೇಕೇ ಎಂದೂ ಅವರು ಕೇಳಿದರು. ಶಿಕ್ಷಣ ಎಂದರೆ ನಿಂತ ನೀರಲ್ಲ. ಮುಂದೆ ಹರಿಯುವಂಥದ್ದು. ಶಿಕ್ಷಣ ಎನ್ನುವುದು ಆಯಾ ಕಾಲಕ್ಕೆ ತಕ್ಕಂತೆ ಇರಬೇಕು ಎಂದು ತಿಳಿಸಿದರು.
ಒಂದೆಡೆ ರಾಮಲಿಂಗಾರೆಡ್ಡಿ, ಇನ್ನೊಂದೆಡೆ ಶಿವಕುಮಾರ್, ಮತ್ತೊಂದು ಕಡೆ ಮುಖ್ಯಮಂತ್ರಿಗಳು ಮಾತನಾಡುತ್ತಾರೆ. ಮಕ್ಕಳಿಗೆ ಏನು ಬೇಕು ಎಂಬ ಪ್ರಶ್ನೆಯೇ ಇಲ್ಲ. ಕನ್ನಡದ ಶಾಲೆಗಳಲ್ಲಿ ಮಾತ್ರ ರಾಜ್ಯ ಶಿಕ್ಷಣ ನಿತಿ (ಎಸ್‍ಇಪಿ) ಬರಲಿದೆ. ಇವರು ನಡೆಸುವ ಶಾಲೆಗಳಲ್ಲಿ ಎಸ್‍ಇಪಿ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ದೇಶದ, ರಾಜ್ಯದ ಭವಿಷ್ಯವನ್ನು ನಿರ್ಧರಿಸುವುದು ಶಿಕ್ಷಣ ಇಲಾಖೆ. ನಮ್ಮ ಬಡ ಮಕ್ಕಳ ಭವಿಷ್ಯ ನಿರ್ಧರಿಸುವ ಇಲಾಖೆ ಇದು. ಯಾರೋ ಕೇಳಿದರು; ಯಾರೋ ಹೇಳಿದರೆಂದು, ಪ್ರಣಾಳಿಕೆ ವೇಳೆ ತಿಳಿಸಿದೆ ಎಂಬ ಕಾರಣಕ್ಕೆ ಪಠ್ಯದಲ್ಲಿ ಬದಲಾವಣೆ ಮಾಡಬಾರದು ಎಂದು ತಿಳಿಸಿದರು. ಪಠ್ಯ ಬದಲಾವಣೆ ಎಂಬುದು ಹುಡುಗಾಟದ ವಿಚಾರ ಆಗದಿರಲಿ ಎಂದು ಎಚ್ಚರಿಸಿದರು.
ಸುಮಾರು 3 ಸಾವಿರ ಜನ ಶಿಕ್ಷಣ ತಜ್ಞರು ಸೇರಿ ಶಿಕ್ಷಣಕ್ಕೆ ಸಂಬಂಧಿಸಿ ತಯಾರಿಸಿದ 511 ಪಠ್ಯಪುಸ್ತಕಗಳಲ್ಲಿ ಬದಲಾವಣೆ ತರಲು ಯತ್ನಿಸುವುದು ಖಂಡನೀಯ ಎಂದರು. ಶಿಕ್ಷಣವು ಶಿಕ್ಷಣ ತಜ್ಞರ ವಿಚಕ್ಷಣ ಜ್ಞಾನಕ್ಕೆ ಸಂಬಂಧಿಸಿದೆಯೇ ಹೊರತು ಅದು ರಾಜಕಾರಣಿಗಳ ವಿಚಕ್ಷಣ ಜ್ಞಾನಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿಸಿದರು. ಇನ್ನೂ 5-6 ತರಗತಿಯ ಮಕ್ಕಳಿಗೆ ಜಾತಿವಾದದ, ಜಾತಿ ವಿಭಜನೆಯ ಬೀಜ ಬಿತ್ತುವ ಅವಶ್ಯಕತೆ ಇರುವ ಪಠ್ಯ ತರುವ ಹುನ್ನಾರ ನಡೆದಿದೆ. ರಾಜಕೀಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಈ ಹುನ್ನಾರ ನಡೆದಿದೆ ಎಂದು ಟೀಕಿಸಿದರು.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
"ಕಾಂಗ್ರೆಸ್ನಿಂದ ದಲಿತ ದ್ರೋಹ: 14,200 ಕೋಟಿ ರೂ ಎಸ್ಸಿಎಸ್ಪಿ/ಟಿಎಸ್ಪಿ ಹಣ ಗ್ಯಾರಂಟಿ ಪಾಲು'' -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
"ಬೆಂಗಳೂರು: 370 ಎಕ್ರೆ ಜಕ್ಕೂರು ವೈಮಾನಿಕ ಶಾಲೆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ಗೆ ಪ್ಲ್ಯಾನ್'' -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು












Click it and Unblock the Notifications