ಲೋಡ್‌ ಶೆಡ್ಡಿಂಗ್ ಮಾಡಿ ಸರ್ಕಾರದಿಂದ ರೈತರಿಗೆ ತೊಂದರೆ: ಬಿಜೆಪಿ

ಬೆಂಗಳೂರು, ಆಗಸ್ಟ್ 20: ಬರ ಹಾಗೂ ಬೆಲೆ ಏರಿಕೆಯಿಂದ ಬಸವಳಿದಿರುವ ರಾಜ್ಯದ ರೈತರ ಸಂಕಷ್ಟಗಳಿಗೆ ದನಿಯಾಗದೇ, ಅವರ ಮೇಲೆಯೇ ಎಟಿಎಂ ಸರ್ಕಾರ (ATMSarkara) ಗದಾಪ್ರಹಾರ ನಡೆಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ರಾಜ್ಯ ಬಿಜೆಪಿ ಪಕ್ಷವು, ಮಳೆ ಇಲ್ಲದೆ ರೈತರು ಬೆಳೆದ ಬೆಳೆಗಳು ಒಣಗುತ್ತಿರುವ ಈ ಸಂದರ್ಭದಲ್ಲಿ, ತುಘಲಕ್ ಸರ್ಕಾರವು ಲೋಡ್ ಶೆಡ್ಡಿಂಗ್ ಮೂಲಕ ರೈತರಿಗೆ ಗಾಯದ ಮೇಲೆ ಬರೆಯನ್ನು ಎಳೆಯುತ್ತಿದೆ.

Congress Government Is Troubling States Farmers By Power Load Shedding, Says BJP

ಬಿಜೆಪಿ ಸರ್ಕಾರ ಬೇಸಿಗೆ ಕಾಲದಲ್ಲಿಯೂ ರಾಜ್ಯದ 3 ಫೇಸ್ ವಿದ್ಯುತ್ ಒದಗಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿತ್ತು. ಆದರೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಳೆಗಾಲದಲ್ಲಿಯೇ ಲೋಡ್ ಶೆಡ್ಡಿಂಗ್ ಜಾರಿ ಮಾಡಿ, ನಾಡಿನ ರೈತ ಸಮುದಾಯಕ್ಕೆ ದ್ರೋಹ ಬಗೆಯುತ್ತಿದೆ ಎಂದು ದೂರಿದೆ.

ರಾಜ್ಯದಲ್ಲಿ ಸುಮಾಉ 45 ಲಕ್ಷ ಪಂಪ್‌ಸೆಟ್‌ಗಳಿದ್ದು, ನಿತ್ಯ 10-12ಗಂಟೆ ವಿದ್ಯುತ್ ಬೇಡಿಕೆ ಇದೆ. ಹೀಗಿದ್ದರೂ ಸಹ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಉಚಿತ ವಿದ್ಯುತ್ ಎನ್ನುತ್ತಿದೆ. ಮತ್ತೊಂದೆಡೆ ಅನಿಯಮಿತವಾಗಿ ಪಂಪ್‌ ಸೆಟ್‌ಗಳಿಗೆ ವಿದ್ಯುತ್ ಕಡಿತ ಮಾಡುತ್ತಿದೆ. ಈ ಲೋಡ್ ಶೆಡ್ಡಿಂಗ್‌ನಿಂದ ರೈತರಿಗೆ ತೊಂದರೆ ಆಗುತ್ತಿದೆ ಎಂದು ಬಿಜೆಪಿ ಕಿಡಿ ಕಾರಿದೆ.

ಕಾಂಗ್ರೆಸ್‌ನ 'ಗರೀಬಿ ಹಠಾವೋ' ಘೋಷಣೆಯಾಗೇ ಉಳಿಯಿತು
ಇದೇ ವೇಳೆ ಪ್ರಧಾನಿ ನರೇಂದ್ರ ಪರ ಕಾಂಗ್ರೆಸ್ ವಿರುದ್ಧ ಇತಿಹಾಸ ಕೆಣಕಿದ ರಾಜ್ಯ ಬಿಜೆಪಿಯು, ಮುತ್ತಾತನಿಂದ ಮರಿ ಮೊಮ್ಮಗನವರೆಗೂ ಕಾಂಗ್ರೆಸ್‌ನ ಗರೀಬಿ ಹಠಾವೋ ಎಂಬುದು ಘೋಷಣೆ ಆಗಿಯೇ ಉಳಿಯಿತು ಹೊರತು, ಕೊನೆಯವರೆಗೂ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ.

ಆದರೆ ಪ್ರಧಾನಿ ನರೇಂದ್ರ ಮೋದಿಯವರು ಮತ್ತವರ ಸರ್ಕಾರ ಭಾರತದ ಆಡಳಿತ ಚುಕ್ಕಾಣಿ ಹಿಡಿದ ನಂತರ, ಕೋವಿಡ್‌ನಂತಹ ಆರ್ಥಿಕ ಸಂಕಷ್ಟದ ನಡುವೆಯೂ ಭಾರತೀಯರ ಆರ್ಥಿಕತೆ ಗಣನೀಯವಾಗಿ ಪ್ರಗತಿ ಸಾಧಿಸಿತು ಎಂದು ಹೇಳಿದೆ.

Congress Government Is Troubling States Farmers By Power Load Shedding, Says BJP

ಪ್ರಧಾನಿ ಕಾಲದಲ್ಲಿ ದೇಶ ಆರ್ಥಿಕ ಪ್ರಗತಿ
ಈ ಅವಧಿಯಲ್ಲಿ ಬಡತನದ ರೇಖೆಯಲ್ಲಿದ್ದ ಕುಟುಂಬಗಳು ಆರ್ಥಿಕ ಪ್ರಗತಿ ಸಾಧಿಸಿ ಮಧ್ಯಮ ವರ್ಗದ ಕುಟುಂಬಗಳಾಗಿ ತೇರ್ಗಡೆ ಹೊಂದಿವೆ. ಈ ಬಗ್ಗೆ ಎಸ್.ಬಿ.ಐ ಒಂದು ಸಂಶೋಧನಾ ವರದಿ ಪ್ರಕಟಿಸಿದೆ. ಭವಿಷ್ಯದ ಭಾರತದ ಆರ್ಥಿಕ ಸ್ಥಿತಿಗತಿಯನ್ನು ಆ ವರದಿ ಹೊಂದಿದೆ.

ಎಸ್.ಬಿ.ಐ ಸಂಶೋಧನಾ ವರದಿ ಪ್ರಕಾರ, 2012-13 ನೇ ಆರ್ಥಿಕ ವರ್ಷದಲ್ಲಿ ₹4.4 ಲಕ್ಷ ಇದ್ದ ಭಾರತದ ಸರಾಸರಿ ಆದಾಯವು, 2022-23 ನೇ ಸಾಲಿಗೆ ₹13 ಲಕ್ಷಕ್ಕೆ ಏರಿದೆ. ಅಂದರೆ ಕಳೆದ ವರ್ಷಗಳಲ್ಲಿ ಭಾರತದ ಸರಾಸರಿ ಆದಾಯವು ಮೂರು ಪಟ್ಟು ಹೆಚ್ಚಳ ಕಂಡಿದೆ ಎಂದು ಬಿಜೆಪಿ ವಿವರಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ರೂಪಾಯಿ 5 ಲಕ್ಷದಿಂದ ₹10 ಲಕ್ಷವರೆಗೆ ಆದಾಯದ ಗುಂಪಿನಲ್ಲಿ ಶೇಕಡಾ 8.1ರಷ್ಟು ಜನಸಂಖ್ಯೆ ಹೆಚ್ಚಿದೆ. ರೂಪಾಯಿ10 ಲಕ್ಷದಿಂದ 20 ಲಕ್ಷ ರೂಪಾಯಿ ಆದಾಯದ ಗುಂಪಿನಲ್ಲಿ ಶೇ.3.8ರಷ್ಟು ಜನಸಂಖ್ಯೆ ಹೆಚ್ಚಿದೆ. ಇದೇ ರೀತಿ ₹20 ಲಕ್ಷದಿಂದ ₹50 ಲಕ್ಷ ಆದಾಯದ ಗುಂಪಿನಲ್ಲಿ ಶೇ.1.5ರಷ್ಟು ಜನಸಂಖ್ಯೆ ಹೆಚ್ಚಾಗಿದ್ದರ ವರದಿ ವಿವರಿಸಿದೆ ಎಂದು ತಿಳಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರದ ಆಡಳಿತವು ಭಾರತದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ದಶಕದಲ್ಲಾದ ಭಾರತೀಯರ ಆರ್ಥಿಕ ಪ್ರಗತಿಯೇ, ಮೋದಿ ಸರ್ಕಾರದ ಸಾಧನೆಗೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಬಣ್ಣಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+