ಕಾಂಗ್ರೆಸ್‌ನಿಂದ ಕರ್ನಾಟಕ ಅಶಾಂತಿಯ ಬೀಡು: ವಿಡಿಯೋ ಪೋಸ್ಟ್ ಮಾಡಿ ಬಿಜೆಪಿ ಕಿಡಿ
ಬೆಂಗಳೂರು, ಅಕ್ಟೋಬರ್ 04: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರಾಜ್ಯಾದ್ಯಂತ ಮತಾಂಧ ಸ್ಲೀಪರ್ ಸೆಲ್‌ಗಳು ಜಾಗೃತಗೊಂಡಿವೆ. ಈ ಕುರಿತು ವಾಗ್ದಾಳಿ ನಡೆಸಿರುವ ರಾಜ್ಯ ಬಿಜೆಪಿಯು ಶಿವಮೊಗ್ಗ ಸೇರಿದಂತೆ ವಿವಿಧ ಘಟನೆಗಳ ಮತ್ತು ಕಾಂಗ್ರೆಸ್ ನಾಯಕ ಹೇಳಿಕೆಗಳ ವಿಡಿಯೋ ಪೋಸ್ಟ್ ಮಾಡಿ ಸಮರ ಸಾರಿದೆ.
ಬುಧವಾರ ವಿಡಿಯೋ ಟ್ವೀಟ್ ಮಾಡಿರುವ ಬಿಜೆಪಿಯು, ಆಳುವ ಸರ್ಕಾರ ತನ್ನ ಮತಬ್ಯಾಂಕ್‌ಗಾಗಿ ಮಾಡುತ್ತಿರುವ ಷಡ್ಯಂತ್ರಕ್ಕೆ ಶಿವಮೊಗ್ಗ ಮಾತ್ರವೇ ಬಲಿಯಾಗಿಲ್ಲ. ಬದಲಾಗಿ ರಾಜ್ಯದ ಉಳಿದೆಡೆ ಕಾಂಗ್ರೆಸ್ ಮತಾಂಧ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದೆ. ಅಂತಹ ರಾಜಕಾರಣದಿಂದಾಗುವ ಅಪಾಯಗಳ ಸಂಭವಿಸಲಿವೆ. 'ಕಾಂಗ್ರೆಸ್‌ನಿಂದ ಕರ್ನಾಟಕ ಅಶಾಂತಿಯ ಬೀಡಾಗಿದೆ' ಎಂದು ಬಿಜೆಪಿ ದೂರಿದೆ.

ಬಿಜೆಪಿಯ ವಿಡಿಯೋದಲ್ಲಿ 'ಇತ್ತೀಚಿನ ಶಿವಮೊಗ್ಗದ ಗಲಾಟೆ ಉದ್ವಿಗ್ನ ಪರಿಸ್ಥಿತಿ, ಮಂಗಳೂರು ಕುಕ್ಕರ್ ಬಾಂಬ್ ಸ್ಟೋಟ, ಉಗ್ರರ ಬಂಧನ, ಮುಸಲ್ಮಾನ ವರ್ತನೆ, ತಲ್ವಾರ್ ಪ್ರದರ್ಶನ ಸೇರಿದಂತೆ ಅಹಿತಕರ ಘಟನೆಗಳನ್ನು ಉಲ್ಲೇಖಿಸಲಾಗಿದೆ.
ಕರ್ನಾಟಕದಲ್ಲಿ @INCKarnataka ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರಾಜ್ಯಾದ್ಯಂತ ಮತಾಂಧ ಸ್ಲೀಪರ್ ಸೆಲ್‌ಗಳು ಜಾಗೃತಗೊಂಡಿವೆ.
— BJP Karnataka (@BJP4Karnataka) October 4, 2023
ಆಳುವ ಸರ್ಕಾರ ತನ್ನ ಮತಬ್ಯಾಂಕ್‌ಗಾಗಿ ಮಾಡುತ್ತಿರುವ ಷಡ್ಯಂತ್ರಕ್ಕೆ ಶಿವಮೊಗ್ಗ ಮಾತ್ರವೇ ಬಲಿಯಾಗಿಲ್ಲ, ರಾಜ್ಯದ ಉಳಿದೆಡೆ ಕಾಂಗ್ರೆಸ್ ಮಾಡುತ್ತಿರುವ ಮತಾಂಧ ರಾಜಕಾರಣದ ಅಪಾಯಗಳನ್ನು ಈ ವಿಡಿಯೋ… pic.twitter.com/ha66yC9VUX
ಪಶ್ಚಿಮ ಘಟ್ಟಗಳಲ್ಲಿ ಬಾಂಬ್ ಸ್ಟೋಟಕ್ಕೆ ಯತ್ನ?
ಈದ್ ಮಿಲಾದ್ ಆಚರಣೆ ವೇಳೆ ಕೋಲಾರ ಮತ್ತು ಶಿವಮೊಗ್ಗದಲ್ಲಿ ತಲ್ವಾರ್ ಪ್ರದರ್ಶಿಸಲಾಗಿದೆ. ಶಿವಮೊಗ್ಗದಲ್ಲಿ ಕಲ್ಲೆ ತೂರಾಟ ನಡೆದಿದೆ. PFI ಅನ್ನು ರಾಷ್ಟ್ರೀಯ ತನಿಖಾ ದಳ ನಿಷೇಧಿಸಿದ ಬಳಿಕ ರಾಷ್ಟ್ರವಿರೋಧಿ, ವಿಧ್ವಂಸಕ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿತ್ತು. ಇದೀಗ ಇಸ್ಲಾಮಿಕ್ ಸ್ಟೇಟ್ ಉಗ್ರರು ಪಶ್ಚಿಮ ಘಟ್ಟಗಳಲ್ಲಿ ಬಾಂಬ್ ಸ್ಟೋಟ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.
ಈ ಹಿಂದೆ ಮಂಗಳೂರಿನಲ್ಲಿ ಹಾಡು ಹಗರಲೇ ಕುಕ್ಕರ್ ಬಾಂಬ್ ಸ್ಟೋಟಿಸಿದ್ದ ವ್ಯಕ್ತಿ ಪರ ಇದೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಉತ್ತೇಜನಾತ್ಮಕವಾಗಿ ಮಾತನಾಡಿದ್ದರು. ಕುಕ್ಕರ್ ಬಾಂಬ್ ಸ್ಟೋಟಿಸಿದ್ದ ವ್ಯಕ್ತಿ ಮನೆಯಲ್ಲಿ ಸಾಕ್ಷ್ಯಾಧಾರಗಳು ಸಿಕ್ಕರು ನಡೆಯುತ್ತೇ ಬಿಡಿ ಎಂದು ಡಿಕೆ ಶಿವಕುಮಾರ್ ಬೇಜವಾಬ್ದಾರಿಯಾಗಿ ಹೇಳಿದ್ದರು ಎಂದು ಬಿಜೆಪಿ ವಿವರಿಸಿದೆ.

ಗಲಭೆಯಲ್ಲಿ ಪಾಲ್ಗೊಂಡವರ ಬಿಡಲು ಡಿಸಿಎಂ ಸೂಚನೆ
ಹುಬ್ಬಳ್ಳಿ ಕೋಮುಗಲಭೆಯಲ್ಲಿ ಭಾಗಿಯಾದವರನ್ನು ಬಿಟ್ಟು ಕಳುಹಿಸುವಂತೆ ಪೊಲೀಸರುಗೆ ಡಿಕೆ ಶಿವಕುಮಾರ್ ಲಿಖಿತವಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಪುಷ್ಠಿಕರಣಕ್ಕೆ ಇಳಿದ ಪರಿಣಾಮವೇ ಇಂತಹ ಅವಘಡಗಳು, ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ಬಿಜೆಪಿ ದೂರಿದೆ.
ಶಿವಮೊಗ್ಗದಲ್ಲಿ ಕೋಮು ಸೌಹಾರ್ಧತೆ ಕದಡಲಾಗಿದೆ. ರಾಮನಗರದಲ್ಲಿ ಕಾಂಗ್ರೆಸ್ ಶಾಸಕ ಅಧಿಕಾರದಲ್ಲಿದ್ದಾರೆ. ಹೀಗಾಗಿ ಜಿಹಾದಿಗಳು ಕೊಟ್ಟಿಗೆಗೆ ಬಂದು ಕಟ್ಟಿದ್ದ ಹಸು ಕಳ್ಳತನ ಮಾಡಿ ನಂತರ ಗೋ ಹತ್ಯೆ ಮಾಡಿ ಅದರ ಮಾಂಸ ಜಮೀನಿನಲ್ಲಿ ಸುರಿದು ಜಿಹಾದಿಗಳು ಅಟ್ಟಹಾಸ ಮೆರೆದಿದ್ದಾರೆ.
ಹಾಸನದಲ್ಲಿ ಕೈಲಿ ಪಿಸ್ತೂಲ್ ಹಿಡಿದು ಓಡಾಟ
ಹಾಸನದಲ್ಲಿಯೂ ಅಶಾಂತಿ ಎಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಜಿಲ್ಲೆಯಲ್ಲಿ ಕೈಯಲ್ಲಿ ಪಿಸ್ತೂಲ್ ಹಿಡಿದು ಯುವಕರು ಸಂಚರಿಸುತ್ತಿದ್ದಾರೆ. ಇದಕ್ಕೆ ತಮ್ಮ ಕಾಂಗ್ರೆಸ್ ಪಕ್ಷ ಸರ್ಕಾರ ಅಧಿಕಾರಲ್ಲಿದೆ ಎಂಬುದೇ ಕಾರಣವಾಗಿದೆ. ಸಣ್ಣ ವಿಚಾರಗಳಿಗೆ ವಾಹನ ಸವಾರರನ್ನು ಅಡ್ಡಗಟ್ಟುವ ಪೊಲೀಸರು ಇಂತವರನ್ನು ಏನು ಮಾಡುತ್ತಿಲ್ಲ.
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬೃಹತ್ ತಲ್ವಾರ್ ಗಳು ಪ್ರತ್ಯಕ್ಷವಾಗುತ್ತಿವೆ. ಔರಂಗಜೇಬ, ಟಿಪ್ಪುವಿನನ್ನು ಒಂದು ಸಮುದಾಯದ ಹಿರೋಗಳಾಗಿ ಕಾಂಗ್ರೆಸ್ ಸರ್ಕಾರ ಬಿಂಬಿಸುತ್ತಿದೆ. ಈ ಮೂಲಕ ಶಾಂತಿ ಹಾಳು ಮಾಡುವ ಮೂಲಕ ಕಾಂಗ್ರೆಸ್ ರಾಜಕಾರಣಕ್ಕಾಗಿ ವೋಟ್ ಬ್ಯಾಂಕ್ ರೂಪಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಕಟುವಾಗಿ ಟೀಕಿಸಿದೆ.
-
Bihar: ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ, ನೂತನ ಸಿಎಂ ಆಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಆಯ್ಕೆ -
ಏಪ್ರಿಲ್ 14ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
ಬೆಂಗಳೂರಲ್ಲಿ ಹೆಚ್ಚಾದ ಏಪ್ರಿಲ್ ಬಿಸಿಲಿನ ಕಾವು: 37°C ತಾಪಮಾನ ದಾಖಲು, 40 ಡಿಗ್ರಿ ತಲುಪುವ ನಿರೀಕ್ಷೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್












Click it and Unblock the Notifications