Cabinet Ministers: ಎರಡು ಹಂತದಲ್ಲಿ ಸಚಿವ ಸಂಪುಟ ರಚನೆ; ಜಾತಿವಾರು ಲೆಕ್ಕಾಚಾರದಲ್ಲಿ ಮಂತ್ರಿ ಭಾಗ್ಯ!?

ಬೆಂಗಳೂರು, ಮೇ 19: ರಾಜ್ಯದಲ್ಲಿ ಕಾಂಗ್ರೆಸ್‌ ಭರ್ಜರಿ ಜಯಗಳಿಸಿದ ಬಳಿಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಕಾಂಗ್ರೆಸ್‌ ಅಧಿಕೃತ ಘೋಷಣೆ ಮಾಡಿದ್ದು, ಮೇ 20 ರಂದು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಸಿದ್ದತೆಯನ್ನ ನಡೆಸುತ್ತಿದೆ.

ಇತ್ತ ಸಿಎಂ ಹಾಗೂ ಡಿಸಿಎಂ ಪ್ರಮಾಣ ವಚನ ಕಾರ್ಯಕ್ರಮದಲ್ಲೇ ಹಲವು ಶಾಸಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್‌ ಪಾಳಯದಲ್ಲಿ ಲಾಬಿ ಶುರುವಾಗಿದೆ. ಜಾತಿ ಲೆಕ್ಕಾಚಾರದಲ್ಲಿ ಮಂತ್ರಿ ಸ್ಥಾನವನ್ನ ನೀಡಲು ಕಾಂಗ್ರೆಸ್‌ ಪಾಳಯದಲ್ಲಿ ಚರ್ಚೆಗಳು ಶುರುವಾಗಿದೆ.

Cabinet Formation In Two Phases

ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್‌ ಬಣದಲ್ಲಿ ಮಂತ್ರಿ ಸ್ಥಾನಕ್ಕಾಗಿ ಲಾಬಿ ಆರಂಭಿದ್ದಾರೆ. ಇತ್ತ ಗ್ಯಾರಂಟಿ ಘೋಷಣೆಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ತನ್ನ 5 ಗ್ಯಾರಂಟಿಗಳನ್ನ ಮೊದಲ ಸಂಪುಟದಲ್ಲೇ ಘೋಷಿಸುವುದಾಗಿ ಹೇಳಿದ್ದು, ಮೇ 20 ರಂದು 10 ಜನರನ್ನ ಸಂಪುಟದಲ್ಲಿ ಸೇರಿಸಿಕೊಳ್ಳಲು ಚಿಂತನೆಯನ್ನ ನಡೆಸಿದೆ.

ಇನ್ನೂ ಲೋಕಸಭಾ ಚುನಾವಣೆ ಹಿನ್ನಲೆ ನಿಧಾನವಾದರೂ ಪರವಾಗಿಲ್ಲ ಎಂದು ಎರಡು ಹಂತದಲ್ಲಿ ಸಂಪುಟ ರಚನೆ ಮಾಡಲು ಕಾಂಗ್ರೆಸ್ ನಿರ್ಧಾರಿಸಿದ್ದೆ ಎನ್ನಲಾಗಿದ್ದು, ಶುಕ್ರವಾರ ಸಿದ್ದರಾಮಯ್ಯ ಅವರು ಸಂಭಾವ್ಯ ಪಟ್ಟಿಯನ್ನ ಹೈಕಮಾಂಡ್‌ ಗೆ ತೆಗೆದುಕೊಂಡು ಹೋಗಲಿದ್ದಾರೆ ಎನ್ನಲಾಗಿದೆ. ಮೊದಲ ಹಂತದಲ್ಲಿ 10 ರಿಂದ 15 ಸಚಿವರ ಪ್ರಮಾಣ ವಚನ ನಡೆಯಲಿದ್ದು ಎರಡನೇ ಹಂತದಲ್ಲಿ ಪೂರ್ಣ ಪ್ರಮಾಣದ ಸಚಿವ ಸ್ಥಾನ ಭರ್ತಿಗೆ ಚಿಂತನೆ ನಡೆಸಲಾಗಿದೆ.

Cabinet Formation In Two Phases

ಜಾತಿವಾರು ಲೆಕ್ಕಾಚಾರದಲ್ಲಿ ಮಂತ್ರಿ ಭಾಗ್ಯ!?

ಲಿಂಗಾಯತ : 7
ಒಕ್ಕಲಿಗ: 6
ಮುಸ್ಲಿಂ: 4
ಎಸ್ಟಿ: 3
ಎಸ್ಸಿ(ಬಲ): 3
ಎಸ್ಸಿ ( ಎಡ): 2
ಬ್ರಾಹ್ಮಣ: 1
ಈಡಿಗ: 1
ರೆಡ್ಡಿ: 2
ಕುರುಬ :2

ಯಾರಿಗೆ ಯಾವ ಹುದ್ದೆ?

ಮುಖ್ಯಮಂತ್ರಿ: ಸಿದ್ದರಾಮಯ್ಯ

ಉಪ ಮುಖ್ಯಮಂತ್ರಿ: ಡಿ.ಕೆ. ಶಿವಕುಮಾರ್

ಕಾಂಗ್ರೆಸ್‌ ಸಂಪುಟದಲ್ಲಿರುವ ಸಂಭಾವ್ಯ ಸಚಿವರ ಪಟ್ಟಿ?

ಬಿ.ಕೆ. ಹರಿಪ್ರಸಾದ್

ಕೆ.ಎಚ್. ಮುನಿಯಪ್ಪ

ಆರ್.ವಿ. ದೇಶಪಾಂಡೆ

ಯು.ಟಿ. ಖಾದರ್

ಎಂ.ಬಿ.ಪಾಟೀಲ್

ರಾಮಲಿಂಗಾರೆಡ್ಡಿ

ಕೃಷ್ಣ ಬೈರೇಗೌಡ

ಕೆ.ಜೆ. ಜಾರ್ಜ್

ಎಚ್.ಸಿ. ಮಹದೇವಪ್ಪ

ಲಕ್ಷ್ಮಣ ಸವದಿ

ಶಿವಲಿಂಗೇಗೌಡ

ಚಲುವರಾಯಸ್ವಾಮಿ

ಡಾ. ಜಿ. ಪರಮೇಶ್ವರ್

ಪ್ರಿಯಾಂಕ್ ಖರ್ಗೆ

ಸತೀಶ್ ಜಾರಕಿಹೊಳಿ

ಎಚ್.ಕೆ. ಪಾಟೀಲ್

ಲಕ್ಷ್ಮೀ ಹೆಬ್ಬಾಳ್ಕರ್

ಎಚ್.ವೈ, ಮೇಟಿ

ಅಬ್ಬಯ್ಯ ಪ್ರಸಾದ್

ನಾಗೇಂದ್ರ

ಎಸ್.ಎಸ್. ಮಲ್ಲಿಕಾರ್ಜುನ್

ಕೊತ್ತೂರು ಮಂಜುನಾಥ್

ನರೇಂದ್ರ ಸ್ವಾಮಿ

ಆರ್‌ ವಿ ತಿಮ್ಮಾಪುರ.

ಈಶ್ವರ್‌ ಖಂಡ್ರೆ

ದಿನೇಶ್‌ ಗುಂಡೂರಾವ್‌

ತನ್ವೀರ್‌ ಸೇಠ್‌

ಅಜಯ್‌ ಸಿಂಗ್‌

ಪುಟ್ಟರಂಗ ಶೆಟ್ಟಿ

ಜಮೀರ್‌ ಅಹಮ್ಮದ್‌ ಖಾನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+