ಕಾಂಗ್ರೆಸ್‌ನ ಕಳಪೆ ಆಡಳಿತ; ಕರ್ನಾಟಕದಲ್ಲಿ ದಾಖಲೆ ಬಂದ್‌!

ಬೆಂಗಳೂರು, ಸೆಪ್ಟೆಂಬರ್ 25; ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿರುವುದು ಕರ್ನಾಟಕದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ನೀರು ಹರಿಸದಂತೆ ಸರ್ಕಾರವನ್ನು ಒತ್ತಾಯಿಸಲು ಸೆಪ್ಟೆಂಬರ್ 26ರ ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ.

ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. 'ಕಾಂಗ್ರೆಸ್‌ನ ನಾಲ್ಕು ತಿಂಗಳ ಕಳಪೆ ಆಡಳಿತದಲ್ಲಿ ಕರ್ನಾಟಕದಲ್ಲಿ ದಾಖಲೆ ಬಂದ್‌ಗಳು' ನಡೆದಿದೆ ಎಂದು ಪ್ರತಿಪಕ್ಷ ಆರೋಪ ಮಾಡಿದೆ.

Congress Government Administration Failure Bandh In Karnataka

ಬಿಜೆಪಿ ಟ್ವೀಟ್

* ವಿದ್ಯುತ್ ದರ ಏರಿಕೆಯನ್ನು ಪ್ರತಿಭಟಿಸಿ, ಕೈಗಾರಿಕೋದ್ಯಮಿಗಳಿಂದ ಕೈಗಾರಿಕೆಗಳ ಬಂದ್!

* ಸ್ಟಾಲಿನ್ ಮುಲಾಜಿಗೆ ಬೇಕಾಬಿಟ್ಟಿ ನೀರು ಹರಿಸಿದ ಪರಿಣಾಮ, ಮಂಡ್ಯ ಬಂದ್ - ಬೆಂಗಳೂರು ಬಂದ್ - ಕರ್ನಾಟಕ ಬಂದ್!

* ಸರ್ಕಾರದ ನಿರ್ಲಕ್ಷ್ಯ ಮಿತಿಮೀರಿ ಖಾಸಗಿ ಬಸ್, ಕ್ಯಾಬ್, ಆಟೋ ಚಾಲಕ- ಮಾಲೀಕರಿಂದ ಖಾಸಗಿ ಸಾರಿಗೆ ಬಂದ್!

* ಚುನಾವಣೆಗೆ ಮುನ್ನ ಹೇಳಿದ್ದ ಬೊಗಳೆಗಳನ್ನು ಈಡೇರಿಸದ ಸರ್ಕಾರದ ವಿರುದ್ಧ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳಿಂದ ಸಾರಿಗೆ ಬಂದ್!

* ಅಂಗನವಾಡಿ ಸಿಬ್ಬಂದಿಗಳ ವೇತನ ವಂಚಿಸಿದ ಸರ್ಕಾರದ ‌ವಿರುದ್ಧ ಎಲ್ಲಾ ಅಂಗನವಾಡಿಗಳು ಬಂದ್!

* ಭದ್ರಾ ನೀರು ಪೂರೈಕೆಯ ವೈಫಲ್ಯವನ್ನು ಖಂಡಿಸಿ ದಾವಣಗೆರೆ ಬಂದ್!

'ರಾಜ್ಯದ ಅಭಿವೃದ್ಧಿಯಂತೂ ಈಗಾಗಲೇ ಬಂದ್ ಮಾಡಿರುವ ಕಾಂಗ್ರೆಸ್ ಸರ್ಕಾರ, ತಾವು ಅಧಿಕಾರಕ್ಕೆ ಬಂದಿರುವುದೇ ಬಂದ್ ಮಾಡಿಸಲು ಎಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿದೆ' ಎಂದು ಬಿಜೆಪಿ ಟ್ವೀಟ್‌ನಲ್ಲಿ ಆರೋಪ ಮಾಡಿದೆ.

ಕಾವೇರಿ ವಿಚಾರದಲ್ಲಿ ಟೀಕೆ; ಕಾವೇರಿ ನದಿ ನೀರು ವಿವಾದದಲ್ಲಿ ಕರ್ನಾಟಕ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರ 'ನಾಡು ಮತ್ತು ನಾಡಿನ ರೈತರ ಹಿತ ಕಾಪಾಡುವ ನಮ್ಮ ಪ್ರಯತ್ನ ನಿರಂತರವಾಗಿದೆ' ಎಂಬ ಹೇಳಿಕೆಗೆ ಬಿಜೆಪಿ ವ್ಯಂಗ್ಯವಾಡಿತ್ತು.

'ಸ್ವಾಮಿ ಸಿದ್ದರಾಮಯ್ಯರವರೇ, "ಎಂ.ಕೆ.ಸ್ಟಾಲಿನ್ ಮತ್ತು I.N.D.I.alliance ಮೈತ್ರಿಕೂಟದ ಹಿತ ಕಾಪಾಡುವ ನಮ್ಮ ಪ್ರಯತ್ನ ನಿರಂತರವಾಗಿದೆ", ಎಂದು ತಮ್ಮ ಹೇಳಿಕೆಯನ್ನು ಬದಲಿಸುವುದು ಸೂಕ್ತ!' ಎಂದು ಟ್ವೀಟ್ ಮಾಡಿತ್ತು.

ಮತ್ತೊಂದು ಟ್ವೀಟ್‌ನಲ್ಲಿ, 'ಕದ್ದುಮುಚ್ಚಿ ಕಾವೇರಿಯನ್ನು ತಮಿಳುನಾಡಿಗೆ ಹರಿಸಿ, ಕೆ.ಆರ್.ಎಸ್ ಅನ್ನು ಬರಿದು ಮಾಡಿರುವ ಕಾಂಗ್ರೆಸ್ ಸರ್ಕಾರ, ಈಗ ತೇಪೆ ಹಚ್ಚುವ ಕೆಲಸ ಮಾಡುತ್ತಿದೆ. ನ್ಯಾಯಾಲಯದ ಆದೇಶಕ್ಕೂ ಮುನ್ನವೇ ಬೇಕಾಬಿಟ್ಟಿಯಾಗಿ ನೀರು ಬಿಟ್ಟು, ಈಗ ನ್ಯಾಯಾಲಯದ ಆದೇಶ ಪಾಲಿಸುತ್ತಿದ್ದೇವೆ ಎಂದು ಸಬೂಬು ಹೇಳುತ್ತಿದೆ. ರಾಜ್ಯದ ರೈತರ ಹಿತಾಸಕ್ತಿಯನ್ನು ಕಡೆಗಣಿಸಿ, ಸ್ಟಾಲಿನ್ ಸರ್ಕಾರಕ್ಕೆ ಪೂರ್ಣ ಸಹಕಾರವನ್ನು ಸಿದ್ದರಾಮಯ್ಯ ಸರ್ಕಾರ ನಿಲ್ಲಿಸದಿದ್ದರೆ, ರಾಜ್ಯಾದ್ಯಂತ ಬೀದಿಗಿಳಿದು ಬಿಜೆಪಿ ಹೋರಾಟ ಮುಂದುವರಿಸಲಿದೆ' ಎಂದು ಬಿಜೆಪಿ ಹೇಳಿತ್ತು.

ಬಿಜೆಪಿ ಮತ್ತೊಂದು ಟ್ವೀಟ್‌ ಮಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೆಲ್ಲ...
* ಕಾವೇರಿ ನೀರು ಕುಡಿಯುವುದಕ್ಕೂ ಸಿಗುವುದಿಲ್ಲ..!
* ಮಹದಾಯಿಗಂತೂ ಸೋನಿಯಾ ಗಾಂಧಿ ಒಪ್ಪುವುದೇ ಇಲ್ಲ..!
* ಕೇಂದ್ರ ಸರ್ಕಾರದ ಯೋಜನೆಗಳು ರಾಜ್ಯದ ಜನರಿಗೆ ಸಿಗುವುದಕ್ಕೆ ಬಿಡುವುದಿಲ್ಲ..!
* ಕನ್ನಡ, ಕರ್ನಾಟಕದ ಆಸ್ಮಿತೆಯಂತೂ ಉಳಿಯುವುದೇ ಇಲ್ಲ..!
* ರಾಜ್ಯದ ಆರ್ಥಿಕತೆ ಪಾತಾಳಕ್ಕೆ ತಲುಪಿಸುವವರೆಗೂ ಬಿಡುವುದಿಲ್ಲ..!
* ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡದೆ ಇರುವುದಿಲ್ಲ..!
* ಅರಾಜಕತೆ ಸೃಷ್ಟಿಸದೆ ಇರುವುದಕ್ಕೆ ಆಗುವುದೇ ಇಲ್ಲ..!

'ರಾಜ್ಯದ ಜನರು, ರೈತರು, ಅಧಿಕಾರಿಗಳು, ಪೊಲೀಸರು ನೆಮ್ಮದಿಯಾಗಿ ಬದುಕುವುದಕ್ಕೆ ಬಿಡುವುದಿಲ್ಲ..!
ಕನ್ನಡಿಗರ ಕಿವಿ ಮೇಲೆ ಹೂವಿಟ್ಟು ಇನ್ನೂ ಹತ್ತು ಹಲವು ಕೃತ್ಯಗಳನ್ನು ಮಾಡುವುದೊಂದೆ ಸಿದ್ದರಾಮಯ್ಯ ಅವರ ಸರ್ಕಾರದ ಗ್ಯಾರಂಟಿ..!' ಎಂದು ಹೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+