ಬಿಜೆಪಿ ಕೈಹಿಡಿಯಲಿರುವ ಮಾಜಿ ಸಂಸದೆ ತೇಜಸ್ವಿನಿ

Congress ex MP Tejaswini Ramesh all set to join BJP
ಪುತ್ತೂರು, ಜ. 13: ಮಾಜಿ ಸಂಸದೆ ತೇಜಸ್ವಿನಿ ರಮೇಶ್‌ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಅತಂತ್ರಗೊಂಡಿದ್ದಾರಾ? ಎಂಬ ಪ್ರಶ್ನೆ ಎದುರಿಟ್ಟಾಗ 'ಅವರು ಯಾವತ್ತೋ ಅತಂತ್ರಗೊಂಡಿದ್ದರು' ಎನ್ನುವವರು ಕಾಂಗ್ರೆಸ್ಸಿನಲ್ಲಿ ಬಹಳ ಮಂದಿಯಿದ್ದಾರೆ.

ಆದರೆ ಇತ್ತೀಚೆಗೆ ಸಿದ್ದರಾಮಯ್ಯ ಮಂತ್ರಿಮಂಡಲ ಸೇರಿಕೊಂಡ ನಂತರ ಡಿಕೆ ಶಿವಕುಮಾರ್ ತಮ್ಮ ಪ್ರಭಾವ ಮತ್ತಷ್ಟು ಹೆಚ್ಚಿಸಿಕೊಂಡಿರುವುದು ಮಾಜಿ ಸಂಸದೆ ತೇಜಸ್ವಿನಿಗೆ ಮುಳುಗುನೀರು ತಂದಂತಿದೆ. ಹಾಗಾಗಿ ಕಾಂಗ್ರೆಸ್ಸಿನಲ್ಲಿ ಅನ್ಯಮಾರ್ಗವಿಲ್ಲದೆ ಅವರು ಅನ್ಯ ಪಕ್ಷಗಳತ್ತ ಕಣ್ಣಿಟ್ಟಿದ್ದಾರೆ ಎನ್ನುತ್ತಿವೆ ಪಕ್ಷದ ಮೂಲಗಳು. ( ತೇಜಸ್ವಿನಿ: ಬೆಂ.ದಕ್ಷಿಣ ಕ್ಷೇತ್ರದ ಸ್ವಘೋಷಿತ ಅಭ್ಯರ್ಥಿ )

ಹಾಗೆ ನೊಡಿದರೆ, ತೇಜಸ್ವಿನಿ ಶ್ರೀರಮೇಶ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಸಾಕಷ್ಟು ಕಸರತ್ತು ನಡೆಸಿದ್ದರು. ರಾಹುಲ್ ಗಾಂಧಿ ಮತ್ತು ಸೋನಿಯಾ ಮೇಡಂ ತಮಗೆ ಬಲು ಕ್ಲೋಸು ಎನ್ನುತ್ತಾ ತೇಜಸ್ವಿನಿ ಅವರ ಬಳಿ ಸುಳಿದಾಡಿದರಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮತ್ತು ಮುಂದಿನ ಲೋಕಸಭೆ ವೇಳೆಗೆ ಬೇರೆ ಪಕ್ಷ ಸೇರಿಕೊಳ್ಳಬೇಕು ಎಂದು ತೇಜಸ್ವಿನಿ ಆಗಲೇ ನಿರ್ಧರಿಸಿಯಾಗಿತ್ತು ಅನ್ನುವವರೂ ಇದ್ದಾರೆ.

ಈ ಮಧ್ಯೆ, ಬೆಂಗಳೂರು ಗ್ರಾಮಾಂತರಕ್ಕೆ ಹಾಲಿ ಸಂಸದ ಡಿಕೆ ಸುರೇಶ್ ಅವರು ಕಾಯಂ ಆಗಿದ್ದು, ಬೆಂಗಳೂರು ದಕ್ಷಿಣದಿಂದ ನಂದನ್ ನೀಲೇಕೇಣಿ ಅವರ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ತಮಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ದಕ್ಕದು ಎಂದೆಣೆಸಿದ ತೇಜಸ್ವಿನಿ ಶ್ರೀರಮೇಶ್, ಅನಿವಾರ್ಯವಾಗಿ ಅನ್ಯ ಪಕ್ಷಗಳತ್ತ ಮುಖ ಮಾಡುವಂತಾಗಿದೆ.

ಅತಂತ್ರ ತೇಜಸ್ವಿನಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ: ಇದೇ ಸಂರ್ದಭದಲ್ಲಿ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಅವರು 'ಕಾಂಗ್ರೆಸ್ಸಿನ ತೇಜಸ್ವಿನಿ ಅವರು ಬಿಜೆಪಿ ಸೇರುವುದು ಖಚಿತವಾಗಿದೆ' ಎಂದು ಪುತ್ತೂರಿನಲ್ಲಿ ಶನಿವಾರ ಹೇಳಿರುವುದು ಇಂಟರೆಸ್ಟಿಂಗ್ ಆಗಿದೆ.

'ಮಾಜಿ ಕಾಂಗ್ರೆಸ್‌ ಸಂಸದೆ ತೇಜಸ್ವಿನಿ ರಮೇಶ್‌ ಬಿಜೆಪಿ ಸೇರುವ ಕುರಿತಂತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನಾಯಕರು ಕೂಡ ಒಪ್ಪಿಗೆ ನೀಡಿದ್ದಾರೆ' ಎಂದು ಸದಾನಂದಗೌಡ ಹೇಳಿದ್ದಾರೆ. ಇದು ಒಕ್ಕಲಿಗ ಮತಗಳನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೆಳೆಯಲು ಸಹಕಾರಿಯಾಗಬಹುದಾಗಿದೆ ಎಣಿಕೆ ಬಿಜೆಪಿಯದ್ದಾಗಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಸಂಕ್ರಾತಿ ಮುಗಿಯುತ್ತಿದ್ದಂತೆ ತೇಜಸ್ವಿನಿ ರಮೇಶ್‌ ಅವರು ಬಿಜೆಪಿ ಸೇರುವುದು ಆಖೈರಾಗಲಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+