ವಿಧಾನಸಭಾ ಚುನಾವಣೆ: ಕಳೆದ ಬಾರಿ ಸೋತವರಿಗಿಲ್ಲ ಕಾಂಗ್ರೆಸ್ ಟಿಕೆಟ್

ಕಳದೆ ಬಾರಿ ರಾಜ್ಯದಾದ್ಯಂತ ಕಾಂಗ್ರೆಸ್ ಅಲೆ ಇತ್ತು. ಹೀಗಿದ್ದೂ ಸೋತವರು ಈ ಬಾರಿ ಗೆಲ್ಲುವುದು ಕಷ್ಟ. ಕಡಿಮೆ ಅಂತರದಲ್ಲಿ ಪರಾಭವಗೊಂಡವರಿಗೆ ಮಣೆ ಹಾಕಿ, ದೊಡ್ಡ ಅಂತರದಲ್ಲಿ ಸೋತವರ ಬದಲಿಗೆ ಹೊಸ ಮುಖಗಳನ್ನು ಕಣಕ್ಕಿಳಿಸುವುದು ಕಾಂಗ್ರೆಸ್ ತಂತ್ರ.

ಬೆಂಗಳೂರು, ಮೇ 25: ಶತಾಯ ಗತಾಯ ಕರ್ನಾಟಕ ರಾಜ್ಯವನ್ನು ತನ್ನ ಕೈಯಲ್ಲೇ ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಿರುವ ಕಾಂಗ್ರೆಸ್ 2018ರ ವಿಧಾನಸಭಾ ಚುನಾವಣೆಗೆ ಭಾರೀ ರಣತಂತ್ರವನ್ನೇ ಹೆಣೆಯುತ್ತಿದೆ. ಈಗಾಗಲೇ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ರಾಜ್ಯಕ್ಕೆ ಬಂದು ಪಕ್ಷದೊಳಗೆ ಸಂಚಲನ ಮೂಡಿಸಿದ್ದಾರೆ.

ಇದೀಗ ಹೊಸ ಸುದ್ದಿಯಾಗಿ ಕಳೆದ ಅಂದರೆ 2013ರ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಅಂತರದಿಂದ ಸೋತವರಿಗೆ ಕಾಂಗ್ರೆಸ ಟಿಕಟ್ ನೀಡದಿರಲು ತೀರ್ಮಾನಿಸಿದೆ ಎನ್ನಲಾಗಿದೆ.

Congress decided not to give tickets for those who lost in 2013 election

ಕಾಂಗ್ರೆಸ್ ಸರ್ವೆ ಸಂಸ್ಥೆಯೊಂದರಿಂದ ರಾಜ್ಯಾದ್ಯಂತ ಪ್ರತೀಕ ಕ್ಷೇತ್ರದಲ್ಲೂ ಸಮೀಕ್ಷೆ ನಡೆಸಿತ್ತು. ಚುನಾವಣೆಗೆ ಸಂಬಂಧಿಸಿದಂತೆ ನಡೆಸದ ಈ ಸಮೀಕ್ಷೆಯ ಮಾಹಿತಿಗಳನ್ನು ಅವಲೋಕಿಸಿ ಹೊಸ ಹೊಸ ತೀರ್ಮಾನಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಇದರಲ್ಲಿ ಸೋತವರಿಗೆ ಟಿಕೆಟ್ ನೀಡದೇ ಇರುವುದೂ ಒಂದು.

ಕಳದೆ ಬಾರಿ ರಾಜ್ಯದಾದ್ಯಂತ ಕಾಂಗ್ರೆಸ್ ಅಲೆ ಇತ್ತು. ಹೀಗಿದ್ದೂ ಸೋತವರು ಈ ಬಾರಿ ಗೆಲ್ಲುವುದು ಕಷ್ಟ. ಕಡಿಮೆ ಅಂತರದಲ್ಲಿ ಕಳೆದ ಬಾರಿ ಪರಾಭವಗೊಂಡವರಿಗೆ ಮಾತ್ರ ಮಣೆ ಹಾಕಿ, ದೊಡ್ಡ ಅಂತರದಲ್ಲಿ ಸೋತವರಿಗೆ ಟಿಕೆಟ್ ನೀಡದೆ ಹೊಸ ಮುಖಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಇನ್ನು ಕೆ.ಸಿ ವೇಣುಗೋಪಾಲ್ ಸಲಹೆಯ ಮೇರೆಗೆ ಟಿಕೆಟ್ ಹಂಚಿಕೆ ಮಾಡಲು ಕಾಂಗ್ರೆಸ್ ತೀರ್ಮಾನಿಸಿದೆ.

ಕೆಪಿಸಿಸಿ ಅಧ್ಯಕ್ಷರ ನೇಮಕ, ಟಿಕೆಟ್ ಹಂಚಿಕೆ ಸೇರಿದಂತೆ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಪ್ರಮುಖ ತೀರ್ಮಾನಗಳನ್ನು ಕೈ ಪಕ್ಷ ಸದ್ಯದಲ್ಲೇ ತೆಗೆದುಕೊಳ್ಳುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+