Congress Danger Poster: ಡೇಂಜರ್ ಕಾಂಗ್ರೆಸ್ ಎಂದ ಬಿವೈ ವಿಜಯೇಂದ್ರ, ಜೆಪಿ ನಡ್ಡಾ ವಿರುದ್ಧ ದೂರು ದಾಖಲು

ಬೆಂಗಳೂರು, ಏಪ್ರಿಲ್. 28: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಬಿರುಸಿನಿಂದ ಸಾಗಿದೆ. ಇದೇ ವೇಳೆ ಜಾಹೀರಾತಿಗಳು ಕೂಡ ಕಮಾಲ್ ಮಾಡುತ್ತಿವೆ. ಇತ್ತೀಚೆಗೆ ಕರ್ನಾಟಕ ಕಾಂಗ್ರೆಸ್ ಕೊಟ್ಟ ಚೊಂಬು ಜಾಹೀರಾತು ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿತ್ತು. ಇದೆ ಬೆನ್ನಲ್ಲೇ ಬಿಜೆಪಿ ಕೂಡ ಹಲವು 'ಡೇಂಜರ್ ಕಾಂಗ್ರೆಸ್' ಜಾಹೀರಾತಿಗಳನ್ನು ಬಿಡುಗಡೆ ಮಾಡಿತ್ತು.

ರಾಜ್ಯ ಬಿಜೆಪಿ ಘಟಕ ಡೇಂಜರ್ ಕಾಂಗ್ರೆಸ್ ಎಂಬ ಜಾಹಿರಾತಿಗಳ ಮೂಲಕ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ತಿರುಚಿ ಸಮುದಾಯಗಳ ನಡುವೆ ದ್ವೇಷ ಬಿತ್ತುವ ಪ್ರಚೋದನಾತ್ಮಕ ಪೋಸ್ಟ್ ಹರಡುತ್ತಿದೆ ಎಂದು ಕಾಂಗ್ರೆಸ್ ದೂರು ದಾಖಲಿಸಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರ ವಿರುದ್ಧ ಕರ್ನಾಟಕ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದೆ.

Congress Danger Poster Congress lodged complaint against bjp leaders


ಬಿಜೆಪಿಯ ಅಪಪ್ರಚಾರ, ಸುಳ್ಳುಗಳನ್ನು ಸಹಿಸುವ ಮಾತೇ ಇಲ್ಲ!

"ಸುಳ್ಳು ಪ್ರಾಪಗಂಡಾ ಮಾಡುವ ಬಿಜೆಪಿಗೆ ಅದು ಅಭ್ಯಾಸವಾಗಿ ಮಾರ್ಪಟ್ಟಿದೆ, ಅದೇ ಅಭ್ಯಾಸದಂತೆ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ತಿರುಚಿ ಸಮುದಾಯಗಳ ನಡುವೆ ದ್ವೇಷ ಬಿತ್ತುವ ಪ್ರಚೋದನಾತ್ಮಕ ಪೋಸ್ಟ್ ಮಾಡಿದ್ದ ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಲಾಗಿದೆ. ಬಿಜೆಪಿಯ ಯಾವುದೇ ಅಪಪ್ರಚಾರ, ಸುಳ್ಳುಗಳನ್ನು ಸಹಿಸುವ ಮಾತೇ ಇಲ್ಲ, ನಮ್ಮ ಕಾನೂನು ರೀತಿಯ ಹೋರಾಟ ಮುಂದುವರೆಯುತ್ತಲೇ ಇರುತ್ತದೆ" ಎಂದು ಕಾಂಗ್ರೆಸ್ ದೂರಿನ ಪ್ರತಿಯನ್ನು ಹಂಚಿಕೊಂಡಿದೆ.

ಕಾಂಗ್ರೆಸ್ ದೂರಿನಲ್ಲಿ ಇರುವುದೇನು?

"ಬಿಜೆಪಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯು ಮುಸ್ಲಿಂ ಲೀಗ್ ನ ಪ್ರಣಾಳಿಕೆಯೆಂದು ಸುಳ್ಳು ವಿಚಾರ ಹಂಚಿಕೊಂಡಿರುವ ಮತ್ತು ದಿನಾಂಕ 27-4-24 ರಂದು ರಾಜ್ಯ ಬಿಜೆಪಿ ಘಟಕ ನೀಡಿರುವ ಪತ್ರಿಕಾ ಜಾಹೀರಾತಿನಲ್ಲಿ ಸಮುದಾಯಗಳನ್ನು ಎತ್ತಿ ಕಟ್ಟುವ ಮೂಲಕ ನೀತಿ ಸಮಿತಿ ಉಲ್ಲಂಘನೆ ಮಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರ ವಿರುದ್ಧ ದೂರು".

Congress Danger Poster Congress lodged complaint against bjp leaders

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಎರಡನೇ ಹಂತದ ಚುನಾವಣೆ ನಡೆಯುವ ಲೋಕಸಭಾ ಕ್ಷೇತ್ರಗಳ ಮತದಾರರ ಮೇಲೆ ಪ್ರಭಾವ ಬೀರಲು ರಾಜ್ಯದ ಪ್ರಮುಖ ದಿನಪತ್ರಿಕೆಗಳ ಪ್ರಾದೇಶಿಕ ಪ್ರಕಟಣೆಯಲ್ಲಿ ಬಿಜೆಪಿ ರಾಜ್ಯ ಘಟಕ ಈ ಕೆಳಕಂಡಂತೆ ಜಾಹಿರಾತು ನೀಡಿರುತ್ತದೆ. "ಕಾಂಗ್ರೆಸ್ ಡೇಂಜರ್" ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಮುಸ್ಲಿಮರ ಸೇರ್ಪಡೆ.

ವಿಶ್ವಕರ್ಮ, ಈಡಿಗ, ಗಾಣಿಗ ಕ್ಷತ್ರಿಯ, ಹಡಪದ, ಸವಿತಾ, ಕೋಲಿ, ಕುರುಬ, ಕುಂಬಾರ ಉಪ್ಪಾರ, ಮಡಿವಾಳ, ನೇಕಾರ ಇತರ ಹಿಂದುಳಿದ ಸಮುದಾಯಗಳು ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್ ಚಿಪ್ಪು ಕಾಂಗ್ರೆಸ್ ಪಾಪದ ಪುರಾಣ ತಿಳಿಯಲು ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡಿ ವಿಕಸಿತ ಭಾರತಕ್ಕಾಗಿ ಬಿಜೆಪಿಗೆ ಮತ ನೀಡಿ ಕಮಲದ ಬಟನ್ ಒತ್ತಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಜಾಹೀರಾತು ನೀಡಲಾಗಿದೆ. ಸದರಿ ಜಾಹೀರಾತಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ರಾಜ್ಯದ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮಂತ್ರಿಗಳನ್ನು ಅವಹೇಳನಕಾರಿಯಾಗಿ ಚಿತ್ರಿಸಿ ಚಿಪ್ಪು ನೀಡಿದ್ದಾರೆ ಎಂದು ಹಾಡನ್ನು ರಚಿಸಿ ಶೇರ್ ಮಾಡಲಾಗಿರುತ್ತದೆ. ಬಿಜೆಪಿ ರಾಜ್ಯಘಟಕ ನೀಡಿರುವ ಜಾಹೀರಾತು ಧರ್ಮ ಹಾಗೂ ಜಾತಿಗಳ ಆಧಾರದ ಮೇಲೆ ಮತ ಕೇಳುವುದು ಅಪರಾಧ.

ಅಲ್ಲದೆ ದಿನಾಂಕ 23.04.2024 ರಂದು ಬಿಜೆಪಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಲಾದ ವಿಚಾರ ಸುಳ್ಳು ಎಂದು ಹಿಂದೂ ಪತ್ರಿಕೆಯು ವರದಿ ಮಾಡಿದೆ.ಒಂದು ಸಮುದಾಯವನ್ನು ಎತ್ತಿ ಕಟ್ಟುವ ಸಲುವಾಗಿ ಜಾಹೀರಾತು ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ನ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷರ ವಿರುದ್‌ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದು ದೂರು ದಾಖಲಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+