ಇಂದು ಕೈ ಶಾಸಕರ ಸಭೆ, ರೆಸಾರ್ಟ್ ವಾಸ್ತವ್ಯ ಮುಕ್ತಾಯ ಸಾಧ್ಯತೆ

ಬೆಂಗಳೂರು, ಜನವರಿ 21: ರಾಜ್ಯ ಕಾಂಗ್ರೆಸ್‌ ಇನ್ನೂ ಆಪರೇಷನ್ ಕಮಲದ ಭೀತಿಯಿಂದ ಹೊರಬಂದಿಲ್ಲ. ಶಾಸಕರ ರೆಸಾರ್ಟ್‌ ವಾಸ್ತವ್ಯ ಇನ್ನೂ ಮುಗಿದಿಲ್ಲ.

ಇಂದು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯುತ್ತಿದ್ದು, ಇಂದು ಕೈ ನಾಯಕರ ರೆಸಾರ್ಟ್ ವಾಸ್ತವ್ಯ ಅಂತ್ಯವಾಗುವ ಸಾಧ್ಯತೆ ಇದೆ.

ನಿನ್ನೆ ರೆಸಾರ್ಟ್‌ನಲ್ಲಿ ಶಾಸಕ ಆನಂದ್‌ ಸಿಂಗ್ ಮತ್ತು ಗಣೇಶ್ ನಡುವೆ ನಡೆದಿರುವ ಮಾರಾ-ಮಾರಿಯಿಂದ ಕಾಂಗ್ರೆಸ್‌ಗೆ ಮುಜುಗರವಾಗಿದ್ದು, ಆ ನಿಟ್ಟಿನಲ್ಲಿ ಇಂದಿನ ಸಭೆ ಮಹತ್ವದ್ದಾಗಿದೆ.

Congress CLP meeting in Eaglton resort, may end resort stay

ಮೊನ್ನೆ ನಡೆದ ಸಿಎಲ್‌ಪಿ ಸಭೆಗೆ ಗೈರಾದ ನಾಲ್ಕು ಶಾಸಕರ ವಿರುದ್ಧ ಕೈಗೊಳ್ಳುವ ಕ್ರಮದ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆ ಆಗಲಿದೆ. ಸಿದ್ದರಾಮಯ್ಯ ಅವರು ನೇತೃತ್ವದಲ್ಲಿ ಸಭೆ ನಡೆಯಲಿದೆ.

ಬಿಜೆಪಿಯು ರೆಸಾರ್ಟ್ ವಾಸ್ತವ್ಯ ಕೈಬಿಟ್ಟು ಬರ ಪ್ರವಾಸ ಕೈಗೊಂಡಿರುವ ಕಾರಣ, ಆಪರೇಷನ್ ಕಮಲದ ಭೀತಿ ಸ್ವಲ್ಪ ತಿಳಿಯಾಗಿದೆ. ಹಾಗಾಗಿ ಇಂದಿನ ಸಭೆ ಬಳಿಕ ಕಾಂಗ್ರೆಸ್ ನಾಯಕರು ಸಹ ರೆಸಾರ್ಟ್‌ ವಾಸ್ತವ್ಯ ಅಂತಿಮಗೊಳಿಸಬಹುದು ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+