ಬಿಜೆಪಿ ಮರ್ಮಕ್ಕೆ ತಾಗುವಂತಾ ಟ್ವೀಟ್ ಮಾಡಿದ ಕಾಂಗ್ರೆಸ್
ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಮುಖಂಡರ ಆರೋಪ ಪ್ರತ್ಯಾರೋಪಗಳು ತಾರಕ್ಕೆಕೇರಿವೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲದಿದ್ದ ಆದರೆ ಈ ಬಾರಿ ಚುನಾವಣೆಯಲ್ಲಿ ಅತಿ ಮುಖ್ಯ ಪಾತ್ರವಹಿಸುತ್ತಿರುವ ಸಾಮಾಜಿಕ ಜಾಲತಾಣದಲ್ಲೂ ಆರೋಪ ಪ್ರತ್ಯಾರೋಪಗಳು ತಾರಕದಲ್ಲೇ ಇವೆ.
ಚುನಾವಣೆಗೆ ಬಹಳ ತಿಂಗಳುಗಳ ಹಿಂದೆಯೇ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಸೋಷಿಯಲ್ ಮೀಡಿಯಾ ವಾರ್ ಪ್ರಾರಂಭಗೊಂಡಿತ್ತು. ಈಗ ಚುನಾವಣೆ ಹತ್ತಿರವಾದಾಗ ಆ ವಾರ್ ಮತ್ತೊಂದು ಮಜಲಿಗೆ ಹೊರಳಿದೆ. ಎರಡೂ ಪಕ್ಷಗಳು ಶಕ್ತಿಮೀರಿ ಪರಸ್ಪರ ಪಕ್ಷಗಳ ಹುಳುಕಗಳನ್ನು ಎತ್ತಿ ತೋರುತ್ತಿವೆ.

ಇಂದು ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ವಿಡಿಯೋ ಒಂದನ್ನು ಟ್ವೀಟ್ ಮಾಡಿದೆ. ವಿಡಿಯೋನಲ್ಲಿ ನೈತಿಕ ಪೊಲೀಸ್ ಗಿರಿಯ ವಿರುದ್ಧ ಮಾಡಿರುವ ಈ ಟ್ವೀಟ್ ರಾಜ್ಯದ ಮಾತ್ರವಲ್ಲ ದೇಶದ ಹಲವು ಜನರನ್ನು ಸೆಳೆದಿದೆ. ಪ್ರಸಕ್ತದಲ್ಲಿ ರಾಜ್ಯದಲ್ಲೂ ಈ ರೀತಿಯ ಘಟನೆಗಳು ನಡೆದಿದ್ದು ಬಿಜೆಪಿಯ ಸೋದರ ಸಂಘಟನೆಗಳೇ ಎಂದು ಹೇಳಲಾಗುವ ಸಂಘಟನೆಗಳ ಸದಸ್ಯರ ನೈತಿಕ ಗೂಂಡಾಗಿರಿಯನ್ನು ಪರಿಣಾಮಕಾರಿಯಾಗಿ ವಿಡಿಯೋದಲ್ಲಿ ತೋರಿಸಲಾಗಿದೆ.
Here's what the BJP would do to the people of Karnataka if it had its way. The vote is a powerful instrument for protection of your civil rights. Vote wisely & responsibly. #VoteCongress
— Congress (@INCIndia) May 2, 2018
Credits: FB/YoungINDYI pic.twitter.com/mjwXebM2SR
ನಮ್ಮ ತಿನ್ನುವ ಹಕ್ಕನ್ನು, ಬಟ್ಟೆ ತೊಡುವ ಹಕ್ಕನ್ನು, ಪ್ರೀತಿಸುವ ಹಾಗೂ ಮಾತನಾಡುವ ಹಕ್ಕನ್ನು ಹೇಗೆ ಸಂಸ್ಕೃತಿ ಹೆಸರಿನಲ್ಲಿ ಕಸಿದುಕೊಳ್ಳಲಾಗುತ್ತಿದೆ ಎಂಬ ಗಂಭೀರ ವಿಷಯವನ್ನು ವಿಡಿಯೋ ಒಳಗೊಂಡಿದೆ.
ಯಂಗ್ ಇಂಡಿಯನ್ ಎಂಬ ಸಂಸ್ಥೆ ಈ ವಿಡಿಯೋವನ್ನು ತಯಾರಿಸಿದ್ದು, ಕಾಂಗ್ರೆಸ್‌ನ ಟ್ವಿಟ್ಟರ್ ಖಾತೆಯಲ್ಲಿನ ಈ ವಿಡಿಯೋವನ್ನು ಸಾವಿರಾರು ಮಂದಿ ನೋಡಿ ಮೆಚ್ಚಿದ್ದಾರೆ.












Click it and Unblock the Notifications