Get Updates
Get notified of breaking news, exclusive insights, and must-see stories!

ರಾಜ್ಯದ ಪ್ರಮುಖ ಜಿಲ್ಲೆ ವಿಭಜನೆಗೆ ಒಂದಾದ ಕಾಂಗ್ರೆಸ್ - ಬಿಜೆಪಿ

ರಾಜ್ಯದಲ್ಲಿ ಮುಡಾ ಹಗರಣದ ಕಾವು ತೀವ್ರವಾಗಿದೆ. ಮುಡಾ ಹಗರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಇಡೀ ರಾಜಕೀಯವೇ ಈ ಪ್ರಕರಣದ ಸುತ್ತಕೇಂದ್ರೀಕೃತವಾಗಿದೆ. ಆದರೆ, ರಾಜ್ಯದಲ್ಲಿ ಸದ್ದಿಲ್ಲದೆ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆಯುತ್ತಿದೆ. ಅದು ಬೆಳಗಾವಿಯ ವಿಭಜನೆಗೆ ಸಂಬಂಧಿಸಿದ್ದು, ರಾಜ್ಯದ ಪ್ರಮುಖ ರಾಜಕೀಯ ಕೇಂದ್ರಗಳಲ್ಲಿ ಬೆಳಗಾವಿಯೂ ಒಂದಾಗಿದೆ.

ಬೆಳಗಾವಿ ರಾಜಕೀಯದಿಂದಲೇ ರಾಜ್ಯದಲ್ಲಿ ರಾಜ್ಯ ಸರ್ಕಾರಗಳಿಗೆ ಕುತ್ತು ಬಂದ ಉದಾಹರಣೆಗಳಿವೆ. ಬೆಳಗಾವಿಯನ್ನು ವಿಭಜನೆ ಮಾಡಬೇಕು ಎಂದು ಕಾಂಗ್ರೆಸ್‌ನ ಕೆಲವು ನಾಯಕರು ಈ ಹಿಂದೆಯಿಂದಲೂ ಪ್ರಯತ್ನಿಸುತ್ತಿದ್ದಾರೆ. ಆದರೆ, ಅದು ಸಹಕಾರವಾಗಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಬೆಳಗಾವಿ ರಾಜೀಯದಲ್ಲಿ ಅಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದರು. ಇದೇ ಕಾರಣಕ್ಕೆ ಬೆಳಗಾವಿಯ ಕಾಂಗ್ರೆಸ್‌ ನಾಯಕರಲ್ಲಿ ಅಸಮಾಧಾನ ಮೂಡಿದ್ದು ಸಹ ಇದೆ. ಇದೀಗ ಬೆಳಗಾವಿ ವಿಭಜನೆಯ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಈ ರೀತಿ ಬೆಳಗಾವಿಯನ್ನು ವಿಭಜನೆ ಮಾಡವುದರ ಹಿಂದೆ ರಾಜಕೀಯ ಉದ್ದೇಶವೇ ಮುಖ್ಯವಾಗಿದೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ.

Congress-BJP one in divide of major districts of Karnataka

ಅಖಂಡ ಬೆಳಗಾವಿ ವಿಭಜನೆ

ಅಖಂಡ ಬೆಳಗಾವಿ ವಿಭಜನೆ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರೇ ಈ ವಿಷಯವನ್ನು ಮುನ್ನೆಲೆಗೆ ತಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ದಸರಾ ನಂತರ ಈ ವಿಯಷವನ್ನು ಪ್ರಸ್ತಾವನೆ ಮಾಡಿ, ಒತ್ತಡ ತಂತ್ರ ಅನುಸರಿಸಲು ನಿರ್ಧರಿಸಲಾಗಿದೆ. ಅಖಂಡ ವಿಭಜನೆಗೆ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದೆಯಾದರೂ ಅದಕ್ಕೆ ಒಮ್ಮತದ ನಿರ್ಧಾರ ಸಾಧ್ಯವಾಗಿಲ್ಲ. ಅಖಂಡ ಬೆಳಗಾವಿ ವಿಭಜನೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವುದಕ್ಕೆ ಕಾಂಗ್ರೆಸ್‌ ನಾಯಕರು ಮಾತ್ರವಲ್ಲದೇ ಈ ಬಾರಿ ಬಿಜೆಪಿ ನಾಯಕರನ್ನೂ ಸೇರಿಸಿಕೊಳ್ಳಲು ಪ್ಲಾನ್‌ ಮಾಡಿಕೊಳ್ಳಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಬಿಜೆಪಿ ಶಾಸಕರ ವಿಶ್ವಾಸವನ್ನು ಸಹ ಗಳಿಸಿ ಮುಂದಿನ ಹೆಜ್ಜೆ ಇಡಲು ಕಾಂಗ್ರೆಸ್‌ ನಿರ್ಧರಿಸಿದೆ.

ಸತೀಶ್‌ ಜಾರಕಿಹೊಳಿ ನೇತೃತ್ವದಲ್ಲಿ ಸಭೆ

ಬೆಳಗಾವಿ ವಿಭಜನೆಗೆ ಸಂಬಂಧಿಸಿದಂತೆ ಬೆಳಗಾವಿಯ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ ಕಾಂಗ್ರೆಸ್‌ನೊಂದಿಗೆ ಬಿಜೆಪಿ ಶಾಸಕರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ನೇತೃತ್ವದಲ್ಲಿ ಇಷ್ಟರಲ್ಲೇ ಸಭೆ ನಡೆಯಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಳಗಾವಿ ವಿಭಜನೆ ಮಾಡುವ ವಿಚಾರವಾಗಿ ಇಷ್ಟರಲ್ಲೇ ಎಲ್ಲ ಬೆಳಗಾಗಿ ಶಾಸಕರು ಸಭೆ ಸೇರಲಿದ್ದಾರೆ.

ವಿಭಜನೆಯಾದರಷ್ಟೇ ಅಭಿವೃದ್ಧಿ: ಬೆಳಗಾವಿ ಅಭಿವೃದ್ಧಿಯಾಗಬೇಕಾದರೆ ಖಂಡಿತವಾಗಿಯೂ ಅಖಂಡ ಬೆಳಗಾವಿ ವಿಭಜನೆಯಾಗಬೇಕು. ಪ್ರದೇಶ ವ್ಯಾಪ್ತಿ ಹಾಗೂ ಜನಸಂಖ್ಯೆಯ ಆಧಾರದ ಮೇಲೆ ಬೆಳಗಾವಿ ದೊಡ್ಡ ಜಿಲ್ಲೆಯಾಗಿದೆ. ಹೀಗಾಗಿ, ಈ ಜಿಲ್ಲೆ ಅಭಿವೃದ್ಧಿಯಾಗಬೇಕಾದರೆ, ಜಿಲ್ಲೆಯ ವಿಭಜನೆ ಅನಿವಾರ್ಯವಾಗಿದೆ. ಬೆಳಗಾವಿಯನ್ನು ಎರಡು ಅಥವಾ ಮೂರು ಜಿಲ್ಲೆಗಳಾಗಿ ವಿಭಜನೆ ಮಾಡಬೇಕಿದೆ. ಆದರೆ, ಯಾವುದು ಜಿಲ್ಲೆಯಾಗಬೇಕು ಎಂದು ನಾನು ಹೇಳುವುದಿಲ್ಲ ಅದನ್ನು ಸರ್ಕಾರವೇ ನಿರ್ಧರಿಸಲಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದಾರೆ. ದಸರಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ.

ರಮೇಶ್‌ ಜಾರಕಿಹೊಳಿಯಿಂದಲೂ ಇದೇ ಆಗ್ರಹ: ಇನ್ನು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ರಮೇಶ್‌ ಜಾರಕಿಹೊಳಿ ಅವರೂ ದನಿಗೂಡಿಸಿದ್ದಾರೆ. ಬೆಳಗಾವಿ ಜಿಲ್ಲೆ ವಿಭಜನೆಯಾಗಬೇಕು ಅದಕ್ಕೂ ಮೊದಲು ಹೊಸ ತಾಲ್ಲೂಕು ರಚನೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ನಾನು ಈ ಹಿಂದೆ ಉಸ್ತುವಾರಿ ಸಚಿವನಾಗಿದ್ದಾಗಲೂ ಸಿದ್ದರಾಮಯ್ಯ ಅವರಿಗೆ ಇದನ್ನೇ ಹೇಳಿದ್ದೆ. ಹೊಸ ತಾಲ್ಲೂಕುಗಳ ರಚನೆ ಮಾಡಿದ ನಂತರ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಲಿ. ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ ಗೋಕಾಕ ಹಾಗೂ ಚಿಕ್ಕೋಡಿ ಜಿಲ್ಲೆಗಳನ್ನಾಗಿ ಮಾಡಬೇಕು. ಇನ್ನು ಬಿಜೆಪಿ ಶಾಸಕ ಅಭಯ ಪಾಟೀಲ ಅವರು ಸಹ ಜಿಲ್ಲೆಯ ವಿಭಜನೆಯ ಬಗ್ಗೆ ಮಾತನಾಡಿದ್ದು, ಚರ್ಚೆ ಮಾಡಿ ಬೆಳಗಾವಿ ವಿಭಜನೆ ಮಾಡಲಿ ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+