ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯೋದಲ್ಲ;ಕಾಂಗ್ರೆಸ್ ನವರದ್ದು ಆಧಾರ ಇಲ್ಲದ ಆರೋಪ: ಸಿ ಟಿ ರವಿ
ಕಾಂಗ್ರೆಸ್ ನವರ ಬಳಿ ಯಾವುದೇ ಆಧಾರವಿಲ್ಲ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯೋದಿಲ್ಲ, ದಾಖಲೆ ಇಟ್ಟುಕೊಂಡು ದೂರು ನೀಡಲಿ ಎಂದು ಸಿ ಟಿ ರವಿ ಹೇಳಿದರು.
ಬೆಂಗಳೂರು,ಫೆಬ್ರವರಿ 15: ಆಧಾರವಿಲ್ಲದೆ ಕಾಂಗ್ರೆಸ್ ಆರೋಪ ಮಾಡ್ತಿದ್ದಾರೆ. ಆಧಾರವಿಟ್ಟುಕೊಂಡು ಆರೋಪ ಮಾಡಬೇಕು, ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯೋದಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಶಾಸಕರು ಸಚಿವರಿಗೆ ಟೆಂಡರ್ ಹಂಚಿ ಗೋಲ್ಮಾಲ್ ನಡೆಸುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪದ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಆಧಾರವಿಟ್ಟುಕೊಂಡು ಆರೋಪ ಮಾಡಬೇಕು, ಹಾಗಿದ್ರೆ ಅವರು ವಿಧಾನಸೌಧದಲ್ಲಿ ಯಾಕೆ ಮಾತನಾಡಲಿಲ್ಲ. ಹೊರಗಡೆ ಹೋಗಿ ಆರೋಪ ಮಾಡುತ್ತಿದ್ದಾರೆ ಅಷ್ಟೇ. ಅವರಿಗೆ ವಿಧಾನಸೌಧದಕ್ಕಿಂತ ಜಾಗ ಬೇಕಾ.? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನವರ ಬಳಿ ಯಾವುದೇ ಆಧಾರವಿಲ್ಲ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯೋದಿಲ್ಲ, ದಾಖಲೆ ಇಟ್ಟುಕೊಂಡು ದೂರು ನೀಡಲಿ. ಅವರು ಎಸಿಬಿ ಗದರೂ ಅಥವಾ ಲೋಕಾಯುಕ್ತಕ್ಕಾದ್ರೂ ಹೋಗಿ ದೂರು ನೀಡಲಿ ಎಂದು ಕಿಡಿಕಾರಿದರು.

ಗೂಳಿಹಟ್ಟಿ ಶೇಖರ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಗೂಳಿಹಟ್ಟಿ ಶೇಖರ್ ಬಳಿ ದಾಖಲೆ ಇದ್ದರೆ ಅವರು ದೂರು ಕೊಡಬಹುದು. ಯಾಕೆ ಗಾಳಿಯಲ್ಲಿ ಗುಂಡು ಹಾರಿಸಬೇಕು..?
ಯಾರನ್ನೂ ಕಟ್ಟಿ ಹಾಕಿಲ್ಲ ದಾಖಲೆ ಇದ್ರೆ ಹೋಗಿ ಕೊಡಲಿ.ಯಾರು ತಪ್ಪು ಮಾಡಿದ್ರೆ ಅವರಿಗೆ ಶಿಕ್ಷೆಯಾಗಲಿ. ಉಪ್ಪು ತಿಂದವ ನೀರು ಕುಡಿಯುತ್ತಾನೆ ಎಂದು ಹೇಳಿದರು.
ಗೂಳಿಹಟ್ಟಿ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಗೂಳಿಹಟ್ಟಿ ಬಗ್ಗೆ ರಾಜ್ಯದ ಘಟಕ ಏನು ಯೋಚನೆ ಮಾಡಬೇಕು ಅದನ್ನ ಮಾಡುತ್ತೆ. ಇನ್ನೂ ಕಾಂಗ್ರೆಸ್ ನವರ ಹತ್ತಿರ ಅಧಾರವಿದ್ದರೆ ಕಂಡಿತ ವಿಧಾನಸಭೆಯಲ್ಲಿ ದಾಖಲೆ ಕೊಡಲಿ. ಅವರ ಹೇಳಿಕೆಯನ್ನ ನಾನು ಗಮನಸಿದ್ದೇನೆ. 22 ಸಾವಿರ ಕೋಟಿ ನೀರಾವರಿ ಟೆಂಡರ್ ಅಕ್ರಮ ನಡೆದಿದೆ ಎಂದು ಹೇಳಿದ್ದಾರೆ.
ಅವರು ಸ್ವತಂತ್ರ ಇದ್ದಾರೆ, ವಿಧಾನಸಭೆಯಲ್ಲಿ ದಾಖಲೆ ಕೊಟ್ಟು ತೆನಿಖೆಗೆ ಆಗ್ರಹಿಸಬಹುದು ಎಂದು ಹೇಳಿದರು.
ಕಾಂಗ್ರೆಸ್ ನಾಯಕರ ಆರೋಪ ಏನು.?
ನೀತಿ ಸಂಹಿತೆ ಜಾರಿಯಾಗಲಿರುವ ಹಿನ್ನೆಲೆಯಲ್ಲಿ ಭ್ರಷ್ಟ BJP ಸರ್ಕಾರವು ಚುನಾವಣೆಗೆ ಹಣ ಹೊಂದಿಸಲು ಬೀದಿಯಲ್ಲಿ ನಿಂತು ಕಾಂಟ್ರಾಕ್ಟರ್‌ಗಳಿಂದ ಕಮಿಷನ್ ವಸೂಲಿ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ. ಕಾಂಟ್ರಾಕ್ಟರ್‌ಗಳ ಮನೆಬಾಗಿಲಿಗೆ ಹೋಗಿ ಟೆಂಡರ್ ನೀಡುತ್ತಿದೆ. ನೀರಾವರಿ, ಆರೋಗ್ಯ ಸೇರಿದಂತೆ ಹಲವು ಇಲಾಖೆಯಲ್ಲಿನ ₹500 ಕೋಟಿ ಟೆಂಡರ್ ಅನ್ನು ₹1000 ಕೋಟಿಗೆ ಮಾಡಿಸಿದೆ.

ಮಂತ್ರಿಗಿರಿ ತಪ್ಪಿದವರಿಗೆ ಸಾವಿರಾರು ಕೋಟಿ ರೂ. ಟೆಂಡರ್ ನೀಡಲಾಗುತ್ತಿದೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಭ್ರಷ್ಟ BJP ಸರ್ಕಾರ ಅಕ್ರಮವಾಗಿ ನೀಡಿರುವ ಎಲ್ಲ ಟೆಂಡರ್‌ಗಳನ್ನು ರದ್ದು ಮಾಡುತ್ತೇವೆ. ಗುತ್ತಿಗೆದಾರರು, ರಾಜಕಾರಣಿಗಳು, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಇದು ನಾವು ನೀಡುತ್ತಿರುವ ಕಡೆಯ ಎಚ್ಚರಿಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವ ಕುಮಾರ್ ಹೇಳಿದ್ದಾರೆ.











Click it and Unblock the Notifications