ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಮೋಟ್ ಕಂಟ್ರೋಲ್ ಸಿಎಂ : ಮೋದಿ ಹೇಳಿಕೆಗೆ ಕಾಂಗ್ರೆಸ್‌ ತಿರುಗೇಟು

|
Google Oneindia Kannada News

Recommended Video

Lok Sabha Elections 2019 : ರಿಮೋಟ್ ಕಂಟ್ರೋಲ್ ಸಿಎಂ : ಮೋದಿ ಹೇಳಿಕೆಗೆ ಕಾಂಗ್ರೆಸ್‌ ತಿರುಗೇಟು

ಬೆಂಗಳೂರು, ಮಾರ್ಚ್ 06 : 'ನೀವು ಶ್ರೀಮಂತ ಉದ್ಯಮಿಗಳ ರಿಮೋಟ್ ಕಂಟ್ರೋಲ್ ಪ್ರಧಾನಿಯೇ?' ಎಂದು ಕರ್ನಾಟಕ ಕಾಂಗ್ರೆಸ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಮಾಡಿದೆ.

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು 'ರಿಮೋಟ್ ಕಂಟ್ರೋಲ್ ಸಿಎಂ' ಎಂದು ವ್ಯಂಗ್ಯವಾಡಿದರು.

ಕುಮಾರಸ್ವಾಮಿ ರಿಮೋಟ್ ಕಂಟ್ರೋಲ್ ಸಿಎಂ : ಮೋದಿಕುಮಾರಸ್ವಾಮಿ ರಿಮೋಟ್ ಕಂಟ್ರೋಲ್ ಸಿಎಂ : ಮೋದಿ

ಕರ್ನಾಟಕ ಕಾಂಗ್ರೆಸ್‌ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿದೆ. 'ಸುಳ್ಳಿನ ಸರದಾರನಿಗೆ ಧಿಕ್ಕಾರ' ಎಂದು ಮೋದಿ ಅವರ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ.

ಕಲಬುರಗಿಯಲ್ಲಿ ನರೇಂದ್ರ ಮೋದಿ ಹೇಳಿದ್ದೇನು?ಕಲಬುರಗಿಯಲ್ಲಿ ನರೇಂದ್ರ ಮೋದಿ ಹೇಳಿದ್ದೇನು?

'ನರೇಂದ್ರ ಮೋದಿ ಅವರೇ ಕಳ್ಳರ ಅಂಗಡಿ ಬಂದ್ ಎಂದು ಕೊಚ್ಚಿಕೊಳ್ಳುತ್ತೀರಿ, ರಫೇಲ್ ಹಗರಣದಲ್ಲಿ ತಮ್ಮ ಪಾತ್ರವೇನು?' ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನೆ ಮಾಡಿದೆ.

'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಿಮೋಟ್ ಕಂಟ್ರೋಲ್ ರೀತಿಯ ಆಡಳಿತ ವ್ಯವಸ್ಥೆ ಇರುವುದು ನನಗೆ ತಿಳಿದಿಲ್ಲ, ಬಹುಶಃ ನರೇಂದ್ರ ಮೋದಿ ಅವರ ರಿಮೋಟ್ ಕಂಟ್ರೋಲ್ ಆರ್.ಎಸ್.ಎಸ್ ಆಗಿರಬೇಕು, ಹಾಗಾಗಿ ಆ ಅನುಭವದಿಂದ ಅವರು ಹೀಗೆ ಮಾತನಾಡಿದ್ದಾರೆ' ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.

ರಿಮೋಟ್ ಕಂಟ್ರೋಲ್ ಪ್ರಧಾನಿ

ನೀವು ಶ್ರೀಮಂತ ಉದ್ಯಮಿಗಳ ರಿಮೋಟ್ ಕಂಟ್ರೋಲ್ ಪ್ರಧಾನಿಯೇ? ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನೆ ಮಾಡಿದೆ. ರೈತರ ಸಾಲ ಮನ್ನಾ ಮಾಡಲಿಲ್ಲ, ಉದ್ಯೋಗ ಸೃಷ್ಟಿ ಮಾಡಲೇ ಇಲ್ಲ ಎಂದು ಟೀಕಿಸಿದೆ.

ಸುಳ್ಳಿನ ಸರದಾರನಿಗೆ ಧಿಕ್ಕಾರ

ಹಾವೇರಿಯಲ್ಲಿ ಗೋಲಿಬಾರ್ ಮಾಡಿ ಇಬ್ಬರು ರೈತರನ್ನು ಕೊಂದಿದ್ದು ಬಿಜೆಪಿ ಸರ್ಕಾರ. ರೈತರ ಮೇಲಿದ್ದ ಎಲ್ಲಾ ದಾವೆಗಳನ್ನು ನಮ್ಮ ಸರ್ಕಾರ ಹಿಂಪಡೆದಿದೆ ಎಂದು ಕಾಂಗ್ರೆಸ್ ತಿರುಗೇಟು ಕೊಟ್ಟಿದೆ.

ಕಳ್ಳರ ಅಂಗಡಿ ಬಂದ್ ಹೇಳಿಕೆ

'ಕಳ್ಳರ ಅಂಗಡಿ ಬಂದ್ ಎಂದು ಕೊಚ್ಚಿಕೊಳ್ಳುತ್ತೀರಿ. ರಫೇಲ್ ಹಗರಣದಲ್ಲಿ ತಮ್ಮ ಪಾತ್ರವೇನು?. ನಿಮ್ಮದೇ ಸುಪರ್ದಿಯಲ್ಲಿದ್ದ ಅತ್ಯಂತ ಗೌಪ್ಯ ಹಾಗು ಸುರಕ್ಷಿತವಾಗಿರಬೇಕಿದ್ದ ರಫೇಲ್ ಕಡತಗಳು ಕಳುವಾಗಿದ್ದೇಗೆ?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಹಸಿ ಸುಳ್ಳು ಹೇಳಿದ ಮೋದಿ

ಆರೋಗ್ಯ ಕರ್ನಾಟಕ ದೇಶಕ್ಕೆ ಮಾದರಿ, 2017ರಲ್ಲಿಯೇ ಈ ಯೋಜನೆ ಅನುಷ್ಠಾನಕ್ಕೆ ಬಂತು. ಅದರ ನಕಲು ಈ ಆಯುಷ್ಮಾನ್ ಭಾರತ್ ಎಂದು ಕಾಂಗ್ರೆಸ್ ಹೇಳಿದೆ.

ಬಿಜೆಪಿ ಕೊಡುಗೆ ಶೂನ್ಯ

ಹೈದರಾಬಾದ್-ಕರ್ನಾಟಕ ಭಾಗಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂದು ಕಾಂಗ್ರೆಸ್‌ ಪಟ್ಟಿ ನೀಡಿದೆ. ಬಿಜೆಪಿ ಕೊಡುಗೆ ಶೂನ್ಯ ಎಂದು ಹೇಳಿದೆ.

ಮೋದಿ ರಿಮೋಟ್ ಕಂಟ್ರೋಲ್ ಆರ್‌ಎಸ್‌ಎಸ್‌

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಿಮೋಟ್ ಕಂಟ್ರೋಲ್ ರೀತಿಯ ಆಡಳಿತ ವ್ಯವಸ್ಥೆ ಇರುವುದು ನನಗೆ ತಿಳಿದಿಲ್ಲ, ಬಹುಶಃ ನರೇಂದ್ರ ಮೋದಿ ಅವರ ರಿಮೋಟ್ ಕಂಟ್ರೋಲ್ ಆರ್.ಎಸ್.ಎಸ್ ಆಗಿರಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

English summary
Prime Minister of India Narendra Modi addressed rally in Kalaburagi on March 6, 2019. In a speech he attacked the Karnataka Chief Minister H.D.Kumaraswamy calling remote controlled CM. Congress attacked on PM for his comment
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X