Congress Candidates 3rd List : ಹಾಲಿ ನಾಲ್ಕು ಶಾಸಕರ ಕ್ಷೇತ್ರಗಳಲ್ಲಿ ಟಿಕೆಟ್ ಮತ್ತೆ ಪೆಂಡಿಂಗ್: ಆ ಕ್ಷೇತ್ರಗಳು ಯಾವುವು?

ಬೆಂಗಳೂರು,ಏಪ್ರಿಲ್15:‌ ರಾಜ್ಯ ವಿಧಾನಸಭಾ ಚುನಾವಣಾ ಕಾವು ಹೆಚ್ಚಾಗಿದ್ದು, ಚುನಾವಣೆಗೆ ದಿನಗಣನೆ ಶುರುವಾಗಿದೆ. ಮೂರು ರಾಜಕೀಯ ಪಕ್ಷಗಳಿಗೆ ಪಕ್ಷವನ್ನ ಅಧಿಕಾರಕ್ಕೆ ತರಲು ಭರ್ಜರಿ ಪ್ಲಾನ್‌ ನಡೆಸಿದು, ಕಾಂಗ್ರೆಸ್‌ ನಾಯಕರು ಶತಾಯುಗತಾಯು ಈ ಬಾರಿ ಪಕ್ಷವನ್ನ ಅಧಿಕಾರಕ್ಕೆ ತರಲು ಪಣತೊಟ್ಟಿದ್ದಾರೆ.

ಈಗಾಗಲೇ 224 ಅಭ್ಯರ್ಥಿಗಳ ಪೈಕಿ ಮೊದಲ ಪಟ್ಟಿಯಲ್ಲಿ 166 ಅಭ್ಯರ್ಥಿಗಳನ್ನ ಘೋಷಿಸಿದ ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ 42 ಅಭ್ಯರ್ಥಿಗಳನ್ನ ಘೋಷಿಸಿತ್ತು. ಇದೀಗ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು 43 ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದು, ನಾಲ್ಕು ಹಾಲಿ ಶಾಸಕರ ಕ್ಷೇತ್ರದಲ್ಲಿ ಟಿಕೆಟ್‌ ಘೋಷಿಸದೇ ಹೈಕಮಾಂಡ್‌ ಬಾಕಿ ಉಳಿಸಿಕೊಂಡಿದೆ.

Congress 3rd Candidates List: 4 Sitting Congress MLAs Ticket Are Still In Pending

224 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಟಿಕೆಟ್‌ ಘೋಷಿಸದ ಕಾಂಗ್ರೆಸ್‌ ಹೈಕಮಾಂಡ್‌ ಹಾಲಿ ನಾಲ್ಕು ಕ್ಷೇತ್ರಗಳ ಟಿಕೆಟ್​ ಮತ್ತೆ ಪೆಂಡಿಂಗ್​ ಇಡಲಾಗಿದೆ. ಶಿಡ್ಲಘಟ್ಟ, ಲಿಂಗಸೂಗುರು, ಪುಲಕೇಶಿ ನಗರ, ಹರಿಹರ ಟಿಕೆಟ್​​ಗಳನ್ನು ಕಾಂಗ್ರೆಸ್ ಹೈಕಮಾಂಡ್ ಬಾಕಿ ಉಳಿಸಿಕೊಂಡಿದೆ.

ಅಖಂಡ ಶ್ರೀನಿವಾಸ್‌ ಅವರು ಪುಲಿಕೇಶಿ ನಗರದ ಹಾಲಿ ಶಾಸಕರಾಗಿದ್ದು, 2018 ರಲ್ಲಿ 97,574 ಮತಗಳನ್ನು ಪಡೆದು ಜಯಗಳಿಸಿದ್ದರು. ಈ ಬಾರಿ ಚುನಾವಣೆಗಾಗಿ ಸಾಕಷ್ಟು ಸಿದ್ದತೆಯನ್ನ ನಡೆಸಿರುವ ಅಖಂಡ ಶ್ರೀನಿವಾಸ್‌ ಅವರಿಗೆ ಇನ್ನೂ ಟಿಕೆಟ್‌ ಘೋಷಣೆಯಾಗಿಲ್ಲ. ಪುಲಕೇಶಿನಗರದಲ್ಲಿ ಸ್ಪರ್ಧೆಗಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ನ ಆಪ್ತದಲ್ಲಿ ಟಿಕೆಟ್‌ ಗಾಗಿ ಫೈಪೋಟಿ ಏರ್ಪಟ್ಟಿದ್ದು, ಎಐಸಿಸಿ ಇನ್ನೂ ಟಿಕೆಟ್‌ ಘೋಷಿಸಿಲ್ಲ.

Congress 3rd Candidates List: 4 Sitting Congress MLAs Ticket Are Still In Pending

ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಾಕಷ್ಟು ಪ್ರಯತ್ನ ನಡೆಸಿದ್ದರೂ ಮೂರನೇ ಪಟ್ಟಿಯಲ್ಲೂ‌ ಅವರ ಹೆಸರು ಘೋಷಣೆ ಆಗಿಲ್ಲ. ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿಗೆ ಟಿಕೆಟ್ ಕೊಡಬಾರದು ಎಂಬ ಬೇಡಿಕೆ ಸ್ಥಳೀಯವಾಗಿದೆ.

ಪುಲಕೇಶಿನಗರ ಕ್ಷೇತ್ರದ ಟಿಕೆಟ್‌ ಗಾಗಿ ಸಂಪತ್‌ ರಾಜ್‌ ಹಾಗೂ ಅಖಂಡ ಶ್ರೀನಿವಾಸ ನಡುವೆ ಪೈಪೋಟಿ ಏರ್ಪಟ್ಟಿದ್ದು, ಹೈಕಮಾಂಡ್‌ ನಾಲ್ಕನೇ ಪಟ್ಟಿಯಲ್ಲಿ ಯಾರಿಗೆ ಟಿಕೆಟ್‌ ನೀಡಲಿದೆ ಎಂದು ಕಾದುನೋಡ್ಬೇಕಾಗಿದೆ.

ಇನ್ನೂ ಶಿಡ್ಲಘಟ್ಟ ಹಾಲಿ ಶಾಸಕರಾದ ಮುನಿಯಪ್ಪ ಅವರಿಗೂ ಟಿಕೆಟ್‌ ನೀಡಿಲ್ಲ. ಇತ್ತ ಲಿಂಗಸೂಗುರು ಕ್ಷೇತ್ರದಿಂದ ಡಿ.ಎಸ್. ಹೊಲಗೇರಿ ಹಾಗೂ ಹರಿಹರ ವಿಧಾನಸಭಾ ಕ್ಷೇತ್ರದಿಂದ ಎಸ್ ರಾಮಪ್ಪ ಅವರಿಗೆ ಟಿಕೆಟ್‌ ಘೋಷಿಸದೇ ಬೇರೆ ಅಭ್ಯರ್ಥಿಗಳನ್ನ ಕಣಕ್ಕಿಳಿಸುವ ತಂತ್ರಕ್ಕೆ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+