ಚಲುವರಾಯಸ್ವಾಮಿ ವಿರುದ್ದ ರಾಜ್ಯಪಾಲರಿಗೆ ದೂರು; ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು,ಆಗಸ್ಟ್ 07: ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ವಿರುದ್ಧ ಲಂಚದ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ತನಿಖೆ ಮಾಡಿಸೋಣ ಬಿಡಿ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಪಾಪ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನಾವು ಏಳಕ್ಕೆ ಆರು ಗೆದ್ದು ಬಿಟ್ಟಿದ್ದೀವಲ್ಲ, ಅದಕ್ಕಾಗಿ ಸಹಿಸಿಕೊಳ್ಳಲು ಆಗುತ್ತಿಲ್ಲ
ಹೊಟ್ಟೆ ಕಿಚ್ಚು. ಬೇರೆ ಬೇರೆ ಆರೋಪಗಳನ್ನು ಮಾಡುತ್ತಿದ್ದಾರೆ. ಅದರ ಬಗ್ಗೆಯೂ ತನಿಖೆ ಮಾಡಿಸೋಣ.

ನನ್ನ ವಿರುದ್ಧ ತನಿಖೆ ಮಾಡಿಸಬೇಕೆಂದು ಡಾ.ಅಶ್ವತ್ಥ್ ನಾರಾಯಣ ಹೇಳಿದ್ದರು. ಮುನಿರತ್ನ ವಿರುದ್ಧದ ಆರೋಪ ಬಗ್ಗೆ ತನಿಖೆ ಮಾಡಿಸಿ ಎಂದಿದ್ದರು. ವಿಧಾನಸಭೆಯಲ್ಲಿ ಆರೋಪ ಮಾಡಿದ್ರು
ತನಿಖೆ ನಡೆಸಿ ಅಂತ ಆಗ್ರಹಿಸಿದರು. ಬೆಂಗಳೂರಿನಲ್ಲಿ 20 ದಿನಕ್ಕೆ ಬಿಲ್ ಮಾಡಿದ್ದಾರೆ. 15 ದಿನಕ್ಕೆ ಕೆಲಸ ಬೆಂಗಳೂರಿನಲ್ಲಿ ಆಗುತ್ತಾ? ನಮ್ಮ ಹಳ್ಳಿ ಕಡೆ ಮೂರ್ನಾಕು ವರ್ಷ ಬೇಕಾಗುತ್ತದೆ.
ಅದಂಗೆ ಒಂದು ತಿಂಗಳ ಒಳಗೆ ಕೆಲಸ ಮುಗಿಸಿದ್ದಾರೆ. ಹಾಗಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಾಮಗಾರಿ ಪರಿಶೀಲನೆ ಸೂಚನೆ ನೀಡಿದ್ದೇನೆ. ಇಲ್ಲ ಅಂದ್ರೆ ನಮ್ಮ ಮೇಲೆ ಕೂಡ ದೂರು ಕೊಡುತ್ತಾರೆ ಎಂದು ಹೇಳಿದರು.
ಕೆಲಸ ಆಗಿದರೇ ಖಂಡಿತ ಬಿಲ್ ಕೊಡುತ್ತೇವೆ. ಪಾಪ ಯಾರ ಹಣ ಇಟ್ಟುಕೊಳ್ಳಲ್ಲ, ಗುತ್ತಿಗೆದಾರರು ಕೂಡ ಸಂಕಷ್ಟದಲ್ಲಿದ್ದಾರೆ. ಕೆಂಪಣ್ಣ ಕೊಟ್ಟ ದೂರು ತನಿಖೆ ಮಾಡಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ಕೆಲಸ ಯಾರು ಕೊಟ್ರು ಅಂತ ಗೊತ್ತಿಲ್ಲ, ಒಂದು ತಿಂಗಳ ಒಳಗೆ ಬಿಲ್ ಬಂದಿದೆ. ಬಿಲ್ ಬಂದ ತಕ್ಷಣ ನಾವು ಸಹಿ ಮಾಡಬೇಕಾ..? ಎಂದು ಪ್ರಶ್ನಿಸಿದ ಅವರು, ನೈಜತೆ ಕೆಲಸ ಮಾಡಿದ್ದಕ್ಕೆ ನಮ್ಮ ತಕರಾರು ಇಲ್ಲ ಎಂದು ಹೇಳಿದರು.
ಖ್ಯಾತ ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನಾ ಅವರ ನಿಧನಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ಸ್ಪಂದನಾ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಇದು ಸಾಯುವ ವಯಸ್ಸಲ್ಲ. ಮನುಷ್ಯನ ಜೀವನ ಎಷ್ಟು ಅನಿಶ್ಚಿತ ಎಂಬುದಕ್ಕೆ ಈ ಅಗಲಿಕೆಯೂ ಸಾಕ್ಷಿ.ತೀರಾ ಇತ್ತೀಚಿಗಷ್ಟೇ ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ಅವರು ನನ್ನನ್ನು ಭೇಟಿ ಮಾಡಿದ್ದರು. ಈಗ ಅವರು ಇಲ್ಲ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟವಾಗುತ್ತಿದೆ.
ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆ ನೋವು ಭರಿಸುವ ಶಕ್ತಿ ಪತಿ ವಿಜಯ ರಾಘವೇಂದ್ರ ಹಾಗೂ ಅವರ ಕುಟುಂಬ ಸದಸ್ಯರಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ" ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications