Zaid Khan: ಸಚಿವ ಜಮೀರ್ ಪುತ್ರ ಜೈದ್ ಖಾನ್ ಮೇಲೆ ದಾಖಲಾಯ್ತು ದೂರು: ಎದುರಾಯ್ತು ಹೊಸ ಸಂಕಷ್ಟ!
ಸಚಿವ ಜಮೀರ್ ಅಹಮದ್ ಖಾನ್ ಅವರ ಪುತ್ರ ಜೈದ್ ಖಾನ್ ಅವರ ಮೇಲೆ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿಯಾಗಿದೆ. ಸಚಿವ ಜಮೀರ್ ಅಹಮದ್ ಖಾನ್ ಅವರ ಮಗ ಜೈದ್ ಖಾನ್ ಅವರು ಹೀರೋ ಆಗಿ ನಟಿಸಿರುವ ಕಲ್ಟ್ ಸಿನಿಮಾದ ಡ್ರೋನ್ ಹಾನಿ ಪ್ರಕರಣ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಡ್ರೋನ್ ಆಪರೇಟರ್ ಸಂತೋಷ್ ಅವರು ಆತ್ಮಹ* ಗೆ ಪ್ರಯತ್ನಿಸಿದ್ದಾರೆ. ಈ ವಿಚಾರ ಜೈದ್ ಖಾನ್ ಅವರಿಗೆ ಸಂಕಷ್ಟ ತಂದೊಡ್ಡಿದೆ.
ಕನ್ನಡದ ಚಿತ್ರರಂಗದ ನಟನಾಗಿರುವ ಹಾಗೂ ಸಚಿವ ಜಮೀರ್ ಅವರ ಪುತ್ರ ಜೈದ್ ಖಾನ್ ಈ ವಿಷಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನವೆಂಬರ್ 25ರಂದು ಚಿತ್ರದುರ್ಗದಲ್ಲಿ ಕಲ್ಟ್ ಚಿತ್ರತಂಡ ಶೂಟಿಂಗ್ ನಡೆದಿದೆ. ಈ ಸಿನಿಮಾದಲ್ಲಿ ಸಂತೋಷ್ ಎನ್ನುವವರು ಡ್ರೋನ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಡ್ರೋನ್ ಹೊಂದಿದ್ದು, 25 ಲಕ್ಷ ರೂಪಾಯಿ ಸಾಲ ಮಾಡಿ ಡ್ರೋನ್ ಖರೀದಿ ಮಾಡಿದ್ದರು ಎನ್ನಲಾಗಿದೆ. ಅಲ್ಲದೇ ಸಿನಿಮಾ ಶೂಟಿಂಗ್‌ಗಾಗಿಯೇ ಅವರು ಪ್ರತಿದಿನ 25 ಸಾವಿರ ರೂಪಾಯಿ ಚಾರ್ಜ್ ಮಾಡುತ್ತಿದ್ದರು ಎನ್ನಲಾಗಿದೆ.

ಚಿತ್ರೀಕರಣ ನಡೆಯುವ ಜಾಗದಲ್ಲಿ ಡ್ರೋನ್‌ನಲ್ಲಿ ಚಿತ್ರೀಕರಣ ಮಾಡುವುದು ಕಷ್ಟ ಇದೆ ಎಂದು ಎಚ್ಚರಿಕೆ ಕೊಟ್ಟಿದ್ದರೂ ನಿರ್ದೇಶಕರು ಮಾಡಲೇಬೇಕು ಎಂದು ಒತ್ತಾಯಿಸಿದ್ದರು ಎಂದು ಹೇಳಲಾಗಿದೆ. ಆದರೆ ಚಿತ್ರೀಕರಣದ ವೇಳೆ ಡ್ರೋನ್ ಹಾನಿಯಾಗಿದ್ದು, ಸಂಕಷ್ಟದಿಂದ ಈ ನಿರ್ಧಾರ ಮಾಡಿದ್ದರು ಎನ್ನಲಾಗಿದೆ. ಈ ಸಿನಿಮಾವನ್ನು ಸಚಿವ ಜಮೀರ್ ಅವರ ಪುತ್ರ ಜೈದ್ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿದೆ.
ಉಗ್ರ ಹೋರಾಟ ಮಾಡ್ತೀವಿ
ಇನ್ನು ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರು,
ಅಂತಿಮವಾಗಿ ನಮ್ಮ ಹೋರಾಟಕ್ಕೆ ಮಣಿದು ಮಾಗಡಿ ರಸ್ತೆ ಪೊಲೀಸರು ದೂರು ದಾಖಲಿಸಿಕೊಳ್ಳಲಾಗಿದೆ. ಆದರೆ, ಜಮೀರ್ ಮಗನ ವಿರುದ್ಧ FIR ಮಾಡದೆ ಕೇವಲ NCR ಮಾಡಿದ್ದಾರೆ ನಾನು ಅನ್ಯಾಯಕ್ಕೆ ಒಳಗಾದ ಸಂತೋಷ್ ಕುಟುಂಬದವರಿಗೆ ಕಾದು ನೋಡಿ ಅವರು ಪರಿಹಾರ ನೀಡದಿದ್ದರೆ ನಾವು ನ್ಯಾಯಾಲಯದಲ್ಲಿ PCR File ಮಾಡಿ FIR ಮಾಡಿಸೋಣ ಎಂದು ತಿಳಿಸಿದ್ದೇನೆ ಎಂದಿದ್ದಾರೆ.
ಜಮೀರ್ ಅಹಮದ್ ಖಾನ್ ಅವರೇ ನಿಮ್ಮ ಮಗ ಜೈದ್ ಖಾನ್‌ನಿಂದ ಅಮಾಯಕ ಹಿಂದೂ ಹುಡುಗನಿಗೆ ಅನ್ಯಾಯವಾಗಿದೆ. ನಾವು ಇದರ ವಿರುದ್ಧ ಬೀದಿಗೆ ಇಳಿದು ಹೋರಾಟ ಆರಂಭಿಸುವ ಮೊದಲು ಅವರಿಗೆ ಆಗಿರುವ ಅನ್ಯಾಯಕ್ಕೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಕಾನೂನಾತ್ಮಾಕವಾಗಿ ನಾವು ನಮ್ಮ ಹೋರಾಟ ಮುಂದುವರಿಸುತ್ತೇವೆ. ಅಲ್ಲದೇ ಆ ಹುಡುಗನಿಗೆ ಪರಿಹಾರ ನೀಡುವವರೆಗೂ ಕಲ್ಟ್ ಸಿನಿಮಾ ಬಿಡುಗಡೆಗೆ ನಾವು ಬಿಡುವುದಿಲ್ಲ ಕಾನೂನು ಹೋರಾಟ ಹಾಗೂ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಸಂತೋಷ್ ಆಸ್ಪತ್ರೆಯಲ್ಲಿ ಇದ್ದ ಸಂದರ್ಭದಲ್ಲಿ ಪುನೀತ್ ಕೆರೆಹಳ್ಳಿ ಭೇಟಿ ಮಾಡಿ ಸಾಂತ್ವನ ಹೇಳಿದ್ದರು.












Click it and Unblock the Notifications