ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳ್ಳಿ ಡಾಕ್ಟರ್‌ ಆಗಬೇಕೆಂದರೆ ಏನು ಮಾಡ್ಬೇಕು?

By Srinath
|
Google Oneindia Kannada News

BSc Community Health Service course in State universities for Community Health Officers
ಬೆಂಗಳೂರು, ನ.28: ಕೇಂದ್ರ ಸರಕಾರ ಎಂಬಿಬಿಎಸ್‌ ವೈದ್ಯರುಗಳನ್ನು ನೆಚ್ಚಿಕೊಳ್ಳದೆ ಮುಂದಿನ ವರ್ಷದಿಂದ ಹಳ್ಳಿ ಡಾಕ್ಟರುಗಳನ್ನು ಸೃಷ್ಟಿಸುವ ಕಾರ್ಯದಲ್ಲಿ ತೊಡಗಲು ನಿರ್ಧರಿಸಿದೆ. ಇದಕ್ಕೆ ರಾಜ್ಯ ಸರಕಾರವೂ ಇಂಬು ನೀಡಿದೆ.

ಹಳ್ಳಿಗಾಡಿನಲ್ಲಿ ಅರೆ ವೈದ್ಯಕೀಯ ಸೇವೆ ಲಭ್ಯವಾಗುವಂತಾಗಲು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಹೊಸ ಕೋರ್ಸ್ ಆರಂಭಿಸುವುದಾಗಿ ಆರೋಗ್ಯ ಸಚಿವ ಯುಟಿ ಖಾದರ್‌ ಅವರು ಈಗಾಗಲೇ ಪ್ರಕಟಿಸಿದ್ದಾರೆ. ಹಾಗಾದರೆ ಏನಿದು ಕೋರ್ಸ್? ಯಾರೆಲ್ಲಾ ಕೋರ್ಸ್ ಗೆ ಸೇರಬಹುದು? ಎಂಬುದರ ಸ್ಥೂಲ ವಿವರಣೆ ಇಲ್ಲಿದೆ.

ಕೋರ್ಸ್ ಹೆಸರು 3-year BSc Community Health Service. ದ್ವಿತೀಯ ಪಿಯುಸಿ ನಂತರ 3 ವರ್ಷದ ಸಮುದಾಯ ಆರೋಗ್ಯ ಸೇವೆ ತರಬೇತಿ ಶಿಕ್ಷಣ ಇದಾಗಿದೆ. ಈ ತರಬೇತಿ ಪಡೆದವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ Community Health Officer ಆಗಿ ಸೇವೆ ಸಲ್ಲಿಸಬಹುದು.

ಕೋರ್ಸ್ ವ್ಯಾಸಂಗ: ದೇಹ ರಚನೆ ಶಾಸ್ತ್ರ, ಪರೀಕ್ಷೆ ಮತ್ತು ಮೂಲ ಸಮಸ್ಯೆಗಳಿಗೆ ಚಿಕಿತ್ಸೆ. ಜತೆಗೆ ಪ್ರಸವ, ನವಜಾತ ಶಿಶು ಆರೈಕೆ, ಬೇಧಿ, ಚಳಿ ಜ್ವರ, ವ್ಯಾಕ್ಸಿನೇಶನ್, ಚರ್ಮ ವ್ಯಾಧಿ ಇವೇ ಮುಂತಾದ ಗಂಭೀರ ಸ್ವರೂಪವಲ್ಲದ ರೋಗ/ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ತರಬೇತಿ.

National Board of Examination (NBE) ಈಗಾಗಲೇ BSc Community Cealth Service ಪಠ್ಯವನ್ನು ಸಿದ್ಧಪಡಿಸಿದೆ. ಆಯಾ ರಾಜ್ಯಗಳ ವಿಶ್ವವಿದ್ಯಾಲಯಗಳ ಅಧೀನದಲ್ಲಿ ಈ ಕೋರ್ಸ್ ನಡೆಯುತ್ತದೆ.

Directorate General of Health Services ಈ ಹಿಂದೆ ಸಿದ್ಧಪಡಿಸಿದ್ದ ಪಠ್ಯಕ್ಕೆ ಅಲ್ಪಸ್ವಲ್ಪ ಬದಲಾವಣೆ ಮಾಡಿರುವ Medical Council of India, ಅಂತಿಮವಾಗಿ ಕೋರ್ಸಿಗೆ ಒಪ್ಪಿಗೆಯ ಮುದ್ರೆ ಒತ್ತಿದೆ. (ಒನ್ಇಂಡಿಯಾದಿಂದ ಉದ್ಯೋಗ ಹುಡುಕಾಟ ಸೇವೆ)

English summary
BSc Community Health Service course in State universities for Community Health Officers. The Union Cabinet has approved the creation of a specialised cadre of health care workers for rural areas by instituting a three-year-course in State universities. Here is the course details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X