Good News: ಈ ರೈತರಿಗೆ 56,000 ರೂಪಾಯಿ ಸಹಾಯಧನ; ಅರ್ಜಿ ಸಲ್ಲಿಕೆ ವಿಧಾನ ತಿಳಿಯಿರಿ

Good News: ರೈತರಿಗೆ ಅನುಕೂಲ ಆಗುವಂತೆ ಸರ್ಕಾರ ಆಗಾಗ ಉತ್ತಮ ಯೋಜನೆಗಳನ್ನು ಜಾರಿ ಮಾಡುತ್ತಲಿರುತ್ತದೆ. ಇನ್ನೂ ಇದೀಗ ತೋಟಗಾರಿಕೆ ಇಲಾಖೆಯಿಂದ ಹೊಸದಾಗಿ ತೆಂಗು ನಾಟಿ ಮಾಡಿದವರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಇವರು ಈ ಕೆಲ್ಸ ಪೂರ್ಣಗೊಳಿಸಿದರೆ 56,000 ರೂಪಾಯಿ ಸಹಾಯಧನ ಪಡೆಯಬಹುದು. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಪ್ರಸಕ್ತ ಸಾಲಿನ ಅಂದರೆ 2025ನೇ ಸಾಲಿ ತೆಂಗು ಅಭಿವೃದ್ಧಿ ಮಂಡಳಿ ಯೋಜನೆಯಡಿಯಲ್ಲಿ ಹೊಸದಾಗಿ ತೆಂಗು ಬೆಳೆಯನ್ನ ನಾಟಿ ಮಾಡಿದ ರೈತರಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ ಮಾಡಲಾಗಿದೆ.
ಹೊಸ ಪ್ರದೇಶದಲ್ಲಿ ನಾಟಿ ಮಾಡಿದವರಿಗೆ ಇದು ಸಿಗಲಿದೆ.

Coconut Farmers to Receive 56 000 Financial Aid

ಯಾರೆಲ್ಲಾ ಸಹಾಯಧನಕ್ಕೆ ಅರ್ಹರು?: ಹೊಸ ಭಾಗಗಳಲ್ಲಿ ತೆಂಗು ನಾಟಿ ಮಾಡಿದರೆ, 28,000 ರೂಪಾಯಿ ಪ್ರತಿ ಹೆಕ್ಟೇರ್‌ಗೆ ನೀಡಲಾಗುತ್ತದೆ. ವರ್ಷಕ್ಕೆ ಒಟ್ಟಾರೆ 56,000 ರೂಪಾಯಿಗಳ ಸಹಾಯಧನವನ್ನ ನೀಡಲಾಗುತ್ತದೆ. ತೆಂಗು ಬೆಳೆಯನ್ನ ಹೊಸ ಪ್ರದೇಶದಲ್ಲಿ ನಾಟಿ ಮಾಡಿದ್ರೆ ಮಾತ್ರ ಸಹಾಯಧನಕ್ಕೆ ಪರಿಗಣಿಸಲಾಗುವುದು. ಬದುಗಳ ಅಂಚಿನಲಿ ನಾಟಿ ಮಾಡಿದರೆ, ಅಂತಹವರನ್ನು ಪರಿಗಣೆಗೆ ತೆಗೆದುಕೊಳ್ಳಲಾಗುವುದಿಲ್ಲ.

ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, ರಾಷ್ಟ್ರೀಕೃತ ಬ್ಯಾಂಕ್‌ನ ಪಾಸ್ ಪುಸ್ತಕದ ಜೆರಾಕ್ಸ್, ಅಧಿಕೃತ ಸಸ್ಯ ನಾಟಿ ಮಾಡುವವರಿಂದ ಖರೀದಿಸಿದ ಸಸಿ ಖರೀದಿ ಬಿಲ್ಲು ಹಾಗೂ ಅರ್ಜಿಯೊಂದಿಗೆ ತಮ್ಮ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ತಮ್ಮ ಊರ ಬಳಿಯ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಯನ್ನು ಸಂಪರ್ಕಿಸಲು ತೋಟಗಾರಿಕೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್ ತಿಳಿಸಿದ್ದಾರೆ ಅಂತಾ ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+